India vs Sri Lanka: ಸಿಕ್ಸ್ ಸಿಡಿಸಿ ಕೊಹ್ಲಿಯಿಂದ ವಿನ್ನಿಂಗ್ ಶಾಟ್; ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ!

ಐಯರ್ 26 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿ 34 ರನ್ ಗಳಿಸಿ ಅಂತಿಮ ಹಂತದಲ್ಲಿ ಔಟ್ ಆದರು. ಆದ್ರೆ ಕೊಹ್ಲಿ 17 ಎಸೆತಗಳಲ್ಲಿ 2 ಸಿಕ್ಸರ್ ಚಚ್ಚಿ ಅಜೇಯ 30 ರನ್ ಬಾರಿಸಿ ಗೆಲುವಿನ ಶಾಟ್ ಹೊಡೆದರು.

Vinay Bhat | news18-kannada
Updated:January 7, 2020, 10:21 PM IST
India vs Sri Lanka: ಸಿಕ್ಸ್ ಸಿಡಿಸಿ ಕೊಹ್ಲಿಯಿಂದ ವಿನ್ನಿಂಗ್ ಶಾಟ್; ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ!
ಶ್ರೇಯಸ್ ಐಯರ್- ವಿರಾಟ್ ಕೊಹ್ಲಿ
  • Share this:
ಇಂದೋರ್​ (ಜ. 07): ಇಲ್ಲಿನ ಹೋಲ್ಕಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಬೌಲರ್​ಗಳ ಸಂಘಟಿತ ದಾಳಿ ಮತ್ತು ಬ್ಯಾಟ್ಸ್​ಮನ್​ಗಳ ಅಮೋಘ ಪ್ರದರ್ಶನದ ನೆರವಿನಿಂದ ಕೊಹ್ಲಿ ಪಡೆ 7 ವಿಕೆಟ್​ಗಳಿಂದ ಗೆದ್ದು ಬೀಗಿದೆ.

ಶ್ರೀಲಂಕಾ ನೀಡಿದ್ದ 143 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಓಪನರ್​ಗಳಾದ ಕೆ ಎಲ್ ರಾಹುಲ್ ಹಾಗೂ ಶಿಖರ್ ಧವನ್ ಸ್ಫೋಟಕ ಆರಂಭ ಒದಗಿಸಿದರು. ಬೌಂಡರಿಗಳ ಮಳೆ ಸುರಿಸಿದ ಈ ಜೋಡಿ ಮೊದಲ ವಿಕೆಟ್​ಗೆ 71 ರನ್​ಗಳ ಜೊತೆಯಾಟ ಆಡಿತು.

 


IND vs SL: ಥೇಟ್ ಹರ್ಭಜನ್ ಮಾದರಿಯಲ್ಲಿ ಬೌಲಿಂಗ್ ಮಾಡಿದ ಕಿಂಗ್ ಕೊಹ್ಲಿ; ಇಲ್ಲಿದೆ ವೈರಲ್ ವಿಡಿಯೋ

ಚೆನ್ನಾಗಿಯೆ ಆಡುತ್ತಿದ್ದ ರಾಹುಲ್ 32 ಎಸೆತಗಳಲ್ಲಿ 45 ರನ್ ಬಾರಿಸಿ ಔಟ್ ಆದರು. ಇದರ ಬೆನ್ನಲ್ಲೆ 32 ರನ್​ಗೆ ಧವನ್ ಎಲ್​ಬಿ ಬಲೆಗೆ ಸಿಲುಕಿದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯರ್ ಜೊತೆಗೂಡಿ ಭಾರತಕ್ಕೆ ಗೆಲುವು ತಂದಿಟ್ಟರು.

ಐಯರ್ 26 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿ 34 ರನ್ ಗಳಿಸಿ ಅಂತಿಮ ಹಂತದಲ್ಲಿ ಔಟ್ ಆದರು. ಆದ್ರೆ ಕೊಹ್ಲಿ 17 ಎಸೆತಗಳಲ್ಲಿ 2 ಸಿಕ್ಸರ್ ಚಚ್ಚಿ ಅಜೇಯ 30 ರನ್ ಬಾರಿಸಿ ಗೆಲುವಿನ ಶಾಟ್ ಹೊಡೆದರು. ಭಾರತ 17.3 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಲಂಕಾ ಪರ ಹಸರಂಗ 2 ವಿಕೆಟ್ ಕಿತ್ತರೆ, ಲಹಿರು ತಿರುಮನೆ 1 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಮೊದಲ ಟಿ-20 ಪಂದ್ಯ ಮಳೆಗೆ ಆಹುತಿಯಾಗಿತ್ತು. ಅಂತಿಮ ಕದನ ಜ. 10 ಶುಕ್ರವಾರದಂದು ಪುಣೆಯಲ್ಲಿ ನಡೆಯಲಿದೆ.

RCB ಈ ಆಟಗಾರನನ್ನು ಉಳಿಸಿಕೊಂಡಿದ್ದಕ್ಕೂ ಸಾರ್ಥಕ?; ರಣಜಿಯಲ್ಲಿ ಇವರ ಬೌಲಿಂಗ್ ಬಿರುಗಾಳಿ ನೋಡಿ!

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಶ್ರೀಲಂಕಾ ಬಿರುಸಿನ ಆರಂಭ ಪಡೆದುಕೊಳ್ಳುವ ಜೊತೆ ವಿಕೆಟ್ ಅನ್ನೂ ಕಳೆದುಕೊಂಡಿತು. ವಾಷಿಂಗ್ಟನ್ ಸುಂದರ್ ಬೌಲಿಂಗ್​ನಲ್ಲಿ 22 ರನ್ ಗಳಿಸಿದ್ದ ಆವಿಷ್ಕಾ ಫೆರ್ನಾಂಡೊ ಸೈನಿಗೆ ಕ್ಯಾಚಿತ್ತು ನಿರ್ಗಮಿಸಿದರು.

ಇದರ ಬೆನ್ನಲ್ಲೆ ನವ್​ದೀಪ್ ಸೈನಿ ಯಾರ್ಕರ್ ದಾಳಿಗೆ ಧನುಷ್ಕಾ ಗುಣತಿಲಕ(20) ಕ್ಲೀನ್ ಬೌಲ್ಡ್​ ಆದರು. ಓಶಾಡ ಫೆರ್ನಾಂಡೊ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 10 ರನ್ ಗಳಿಸಿರುವಾಗ ಸ್ಟಂಪ್​ಔಟ್​ಗೆ ಬಲಿಯಾದರು.

ಈ ನಡುವೆ 3 ಸಿಕ್ಸರ್ ಚಚ್ಚಿದ ಕುಶಾಲ್ ಪೆರೇರಾ ತಂಡದ ರನ್ ಗತಿಯನ್ನು ಏರಿಸುವಲ್ಲಿ ಯಶಸ್ವಿಯಾದರು. ಆದರೆ, 28 ಎಸೆತಗಳಲ್ಲಿ 34 ರನ್ ಬಾರಿಸಿ ಪರೇರಾ ಕೂಡ ಪೆವಿಲಿಯನ್ ಹಾದಿ ಹಿಡಿದರು. ಬಂದ ಬೆನ್ನಲ್ಲೆ ಭಾನುಕ ರಾಜಪಕ್ಷ(9) ಔಟ್ ಆದರು.

VIDEO: ಆರು ಬಾಲ್​ಗೆ ಆರು ಸಿಕ್ಸ್: ಸಿಕ್ಸರ್ ಸರದಾರರ ಪಟ್ಟಿಗೆ ಹೊಸ ಆಟಗಾರನ ಎಂಟ್ರಿ

ಕೊನೆಯಲ್ಲಿ ಬಂದ ಬ್ಯಾಟ್ಸ್​ಮನ್​ಗಳು ಹೆಚ್ಚು ರನ್ ಕಲೆಹಾಕಲಿಲ್ಲ. ಠಾಕೂರ್ 19ನೇ ಓವರ್​​ನಲ್ಲಿ 3 ವಿಕೆಟ್ ಕಿತ್ತು ಮಿಂಚಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತಷ್ಟೆ. ಭಾರತ ಪರ ಶಾರ್ದೂಲ್ ಠಾಕೂರ್ 3, ನವ್​ದೀಪ್ ಸೈನಿ, ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ ಹಾಗೂ ಜಸ್​ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.

First published:January 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ