India vs Sri Lanka 2021: ಭಾರತ ವಿರುದ್ದದ ಸರಣಿಗಾಗಿ ಶ್ರೀಲಂಕಾ ತಂಡಕ್ಕೆ ಹೊಸ ನಾಯಕ..!

ಭಾರತ, ಶ್ರೀಲಂಕಾ ಸರಣಿ ವೇಳಾಪಟ್ಟಿ ಹೀಗಿದೆ. ಜುಲೈ 13, 16 ಹಾಗೂ 18ರಂದು 3 ಏಕದಿನ ಪಂದ್ಯಗಳು ನಡೆಯಲಿದೆ. ಹಾಗೆಯೇ ಜುಲೈ 21, 23 ಹಾಗೂ 25ರಂದು 3 ಟಿ20 ಪಂದ್ಯಗಳು ಜರುಗಲಿವೆ.

Dasun Shanaka

Dasun Shanaka

  • Share this:
    ಭಾರತದ ವಿರುದ್ದ ಸೀಮಿತ ಓವರ್​​ಗಳ ಸರಣಿಗಾಗಿ ಶ್ರೀಲಂಕಾ ತಂಡದ ನಾಯಕನ ಬದಲಾವಣೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿದೆ. ಪ್ರಸ್ತುತ ತಂಡದ ನಾಯಕ ಕುಸಲ್ ಪೆರೆರಾ ಅವರ ಬದಲಿಗೆ ಆಲ್​ರೌಂಡರ್ ದಸುನ್ ಶನಕಗೆ ಪಟ್ಟ ಕಟ್ಟಲಾಗುತ್ತದೆ ಎಂದು ವರದಿಯಾಗಿದೆ. ಅದರಂತೆ 29 ವರ್ಷದ ದಸುನ್ ಮತ್ತೊಮ್ಮೆ ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.

    ಈ ಹಿಂದೆ 2019ರಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ದಸುನ್ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಆ ಸರಣಿಯಲ್ಲಿ ಪಾಕಿಸ್ತಾನವನ್ನು ಕ್ಲೀನ್ ಸ್ವೀಪ್ ಮಾಡಿ ಲಂಕಾ ಜಯದ ಕೇಕೆ ಹಾಕಿತ್ತು. ಇದೀಗ ಲಂಕಾ ತಂಡವು ಇಂಗ್ಲೆಂಡ್​ ವಿರುದ್ದ ಕಳಪೆ ಪ್ರದರ್ಶನ ನೀಡಿದ್ದು, ಹೀಗಾಗಿ ನಾಯಕನ ಬದಲಾವಣೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿದೆ.

    ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಳೆದ ನಾಲ್ಕು ವರ್ಷಗಳಲ್ಲಿ 5 ನಾಯಕರನ್ನು ಬದಲಿಸಿದ್ದಾರೆ. ಇದೀಗ ಆರನೇ ನಾಯಕನಾಗಿ ದಸುಲ್ ಶನಕ ಶ್ರೀಲಂಕಾ ಆಯ್ಕೆಯಾಗಲಿದ್ದಾರೆ. 2018 ರಿಂದ ಶ್ರೀಲಂಕಾ ತಂಡವನ್ನು ದಿನೇಶ್ ಚಂಡಿಮಲ್, ಏಂಜಲೋ ಮ್ಯಾಥ್ಯೂಸ್, ಲಸಿತ್ ಮಲಿಂಗ, ದಿಮುತ್ ಕರುಣ ರತ್ನೆ ಹಾಗೂ ಕುಸಲ್ ಪೆರೆರಾ ಮುನ್ನಡೆಸಿದ್ದರು. ಇದೀಗ ಭಾರತದ ವಿರುದ್ದ ಸರಣಿಗೆ ಮತ್ತೊಮ್ಮೆ ದಸುನ್ ಶನಕಗೆ ನಾಯಕತ್ವ ಜವಾಬ್ದಾರಿ ನೀಡಲಿದೆ.

    ಭಾರತ, ಶ್ರೀಲಂಕಾ ಸರಣಿ ವೇಳಾಪಟ್ಟಿ ಹೀಗಿದೆ. ಜುಲೈ 13, 16 ಹಾಗೂ 18ರಂದು 3 ಏಕದಿನ ಪಂದ್ಯಗಳು ನಡೆಯಲಿದೆ. ಹಾಗೆಯೇ ಜುಲೈ 21, 23 ಹಾಗೂ 25ರಂದು 3 ಟಿ20 ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ಇಂಡಿಯಾ ಪಡೆದುಕೊಂಡಿದ್ದು ಸೋನಿ ಟೆನ್ 1, ಸೋನಿ ಟೆನ್ 3, ಸೋನಿ ಟೆನ್ 4 ಹಾಗೂ ಸೋನಿ ಸಿಕ್ಸ್‌ ಚಾನೆಲ್‌ಗಳಲ್ಲಿ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದು.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:zahir
    First published: