IND vs SL: ಪಂದ್ಯ ರದ್ದಾದರೂ ಗುವಾಹಟಿ ಅಭಿಮಾನಿಗಳ ಈ ವಿಡಿಯೋ ಎಲ್ಲರನ್ನು ರೋಮಾಂಚನ ಗೊಳಿಸುತು!

ಅಭಿಮಾನಿಗಳು ಓವರ್ ಖಡಿತಗೊಂಡರಾದರು ಕನಿಷ್ಠ 5 ಅಥವಾ 10 ಓವರ್​ಗಳ ಪಂದ್ಯ ನಡೆಯಬಹುದೆಂದು ಮನೆಗೆ ತೆರಳದೆ ಸ್ಟೇಡಿಯಂನಲ್ಲೆ ಕುಳಿತುಕೊಂಡಿದ್ದರು. ಆದರೆ, ತುಂಬಾ ಸಮಯ ಕಾದರು ಪಂದ್ಯ ಆರಂಭವಾಗಲಿಲ್ಲ.

Vinay Bhat | news18-kannada
Updated:January 6, 2020, 10:55 AM IST
IND vs SL: ಪಂದ್ಯ ರದ್ದಾದರೂ ಗುವಾಹಟಿ ಅಭಿಮಾನಿಗಳ ಈ ವಿಡಿಯೋ ಎಲ್ಲರನ್ನು ರೋಮಾಂಚನ ಗೊಳಿಸುತು!
ಫೋಟೋ ಕೃಪೆ: ಬಿಸಿಸಿಐ ವಿಡಿಯೋ ಸ್ಕ್ರೀನ್ ಶಾಟ್
  • Share this:
ಟೀಂ ಇಂಡಿಯಾದ 2020 ವರ್ಷದ ಮೊದಲ ಅಂತರಾಷ್ಟ್ರೀಯ ಟಿ-20 ಪಂದ್ಯ ಮಳೆಗೆ ಆಹುತಿಯಾಯಿತು. ಗುವಾಹಟಿಯ ಬರ್ಸಾಪಾರ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಹೈವೊಲ್ಟೇಜ್ ಕದನಕ್ಕೆ ವರುಣ ಅಡ್ಡಿ ಪಡಿಸಿದ ಪರಿಣಾಮ ಪಂದ್ಯವನ್ನು ರದ್ದು ಮಾಡಲಾಯಿತು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಇನ್ನೇನು ಪಂದ್ಯ ಆರಂಭವಾಗಬೇಕು ಅಷ್ಟರಲ್ಲಿ ಒಮ್ಮೆಲೆ ಜೋರಾಗಿ ಭಾರೀ ಮಳೆ ಸುರಿಯಲಾರಂಭಿಸಿತು. ಸ್ವಲ್ಪ ಹೊತ್ತಿನ ಬಳಿಕ ಮಳೆ ನಿತ್ತಿತು. ಹೀಗಾಗಿ ಪಂದ್ಯ ಆರಂಭವಾಗಬಹುದು ಎಂದೇ ನಂಬಲಾಗಿತ್ತು.

IND vs SL: ವರ್ಷದ ಮೊದಲ ಕದನ ಮಳೆಗೆ ಆಹುತಿ; ಐರನ್ ಬಾಕ್ಸ್, ಹೇರ್ ಡ್ರೈಯರ್ ಬಳಸಿದರು ಒಣಗದ ಪಿಚ್!

 



ಮಳೆ ನಿಂತ ಬಳಿಕ ಅಸ್ಸಾಂ ಕ್ರಿಕೆಟ್​ ಅಸೋಶಿಯೇಷನ್​ನ ಕ್ರೀಡಾಂಗಣದ ಸಿಬ್ಬಂದಿಗಳು ಒದ್ದೆಯಾಗಿದ್ದ ಪಿಚ್‌ ಒಣಗಿಸಲು ಹರಸಾಹಸ ಪಟ್ಟರು. ಆಟ ಶುರು ಮಾಡಲು ಔಟ್‌ಫೀಲ್ಡ್‌ ಉತ್ತಮವಾಗಿತ್ತು. ಆದರೆ, ಕೈಕೊಟ್ಟಿದ್ದು ಒದ್ದೆಯಾದ ಪಿಚ್‌. ಪಿಚ್‌ನ ಮೇಲೆ ಹೊದಿಕೆ ಹೊದಿಸಲಾಗಿತ್ತಾದರೂ, ನೀರಿನ ಸೋರಿಕೆಯಾಗಿ ಪಿಚ್‌ನ ಬಹುತೇಕ ಭಾಗಗಳಲ್ಲಿ ತೇವಾಂಶ ಹೆಚ್ಚಿತ್ತು.

ಹೀಗಾಗಿ ಅಭಿಮಾನಿಗಳು ಓವರ್ ಖಡಿತಗೊಂಡರಾದರು ಕನಿಷ್ಠ 5 ಅಥವಾ 10 ಓವರ್​ಗಳ ಪಂದ್ಯ ನಡೆಯಬಹುದೆಂದು ಮನೆಗೆ ತೆರಳದೆ ಸ್ಟೇಡಿಯಂನಲ್ಲೆ ಕುಳಿತುಕೊಂಡಿದ್ದರು. ಆದರೆ, ತುಂಬಾ ಸಮಯ ಕಾದರು ಪಂದ್ಯ ಆರಂಭವಾಗಲಿಲ್ಲ.

IPL 2020: ಐಪಿಎಲ್​ನಿಂದ ನಿತೀಶ್ ರಾಣ ಬ್ಯಾನ್ ಆದ್ರೆ ಕೆಕೆಆರ್ ತಂಡಕ್ಕೆ ಬದಲಿ ಆಟಗಾರ ಯಾರು ಗೊತ್ತಾ?

ಈ ಸಂದರ್ಭ ಪಂದ್ಯ ವೀಕ್ಷಿಸಲು ಬಂದ ಎಲ್ಲ ಅಭಿಮಾನಿಗಳು ಸ್ಟೇಡಿಯಂನಿಂದ "ವಂದೇ ಮಾತರಂ" ಗೀತೆ ಹಾಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ರೋಮಾಂಚನ ಗೊಳಿಸುವಂತಿತ್ತು.

 



ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದು, ಈ ಘಳಿಗೆ 2011 ವಿಶ್ವಕಪ್ ಫೈನಲ್ ಅನ್ನು ನೆನಪಿಸುವಂತಿದೆ ಎಂದು ಬರೆದುಕೊಂಡಿದ್ದಾರೆ.

Published by: Vinay Bhat
First published: January 6, 2020, 10:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading