Ind Vs Sri Lanka: ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಗೆದ್ದು ಬೀಗಿದ ಭಾರತ

Rohith Sharma: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪುರುಷರ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್‌ ಸ್ಕೋರ್ ಗಳಿಸಿದ ಆಟಗಾರ ಎಂಬ ಸಾಧನೆಯನ್ನ ಮಾಡಿದ್ದಾರೆ.

ರೋಹಿತ್ ಶರ್ಮ

ರೋಹಿತ್ ಶರ್ಮ

 • Share this:
  ವೆಸ್ಟ್‌ ಇಂಡೀಸ್‌ (West Indies)ತಂಡವನ್ನು(Team) ಮೂರು ಪಂದ್ಯಗಳ ಟಿ20 ಕ್ರಿಕೆಟ್‌(t-20 Cricket) ಸರಣಿಯಲ್ಲಿ 3-0 ಅಂತರದಲ್ಲಿ ಗೆದ್ದು ಬೀಗಿದ ಭಾರತ(India) ತಂಡ, ಶ್ರೀಲಂಕಾ (Sri Lanka)ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌(Cricket) ಸರಣಿಯಲ್ಲಿ 62 ರನ್‌ಗಳ ಭರ್ಜರಿ ಜಯ(Win) ಸಾಧಿಸಿದೆ. ಲಕ್ನೋದಲ್ಲಿ(Lucknow) ನಡೆದ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ಆಲ್-ರೌಂಡರ್ ಆಟ ಪ್ರದರ್ಶನ ನೀಡಿ ಗೆಲುವಿನ ನಗೆ ಬೀರಿದೆ

  ಅಬ್ಬರಿಸಿದ ಇಶಾನ್ ಕಿಶನ್

  ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮೊದಲ ವಿಕೆಟ್‌ಗೆ 111 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಈ ಸಂದರ್ಭದಲ್ಲಿ 32 ಎಸೆತಗಳಲ್ಲಿ 44 ರನ್‌ ಗಳಿಸಿದ್ದ ರೋಹಿತ್ ಶರ್ಮಾ ಲಹಿರು ಕುಮಾರ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ನಂತರ ಇಶಾನ್ ಕಿಶನ್ ಅವರನ್ನು ಶ್ರೇಯಸ್ ಐಯ್ಯರ್ ಸೇರಿಕೊಂಡು ಮತ್ತೊಂದು ಅದ್ಭುತ ಜೊತೆಯಾಟದಲ್ಲಿ ಭಾಗಿಯಾಗಿದರು.

  ಇದನ್ನೂ ಓದಿ: ಅಧ್ಯಕ್ಷ ಸ್ಥಾನದಿಂದ 'ಔಟ್' ಆಗ್ತಾರಾ 'ದಾದಾ'? ಈ ಬಗ್ಗೆ BCCI ಹೇಳಿದ್ದೇನು?

  ಇಶಾನ್ ಕಿಶನ್ ತಮ್ಮ ಸ್ಪೋಟಕ ಪ್ರದರ್ಶನವನ್ನು ಮುಂದುವರಿಸಿದ್ದರು.ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡ ಬಳಿಕ ಶ್ರೇಯಸ್ ಐಯ್ಯರ್ ತಮ್ಮ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದರು. 28 ಎಸೆತಗಳನ್ನು ಎದುರಿಸಿದ ಶ್ರೇಯಸ್ ಐಯ್ಯರ್ 57 ರನ್‌ಗಳನ್ನು ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ರವೀಂದ್ರ ಜಡೇಜಾ 4 ಎಸೆತಗಳಲ್ಲಿ 3 ರನ್ ಗಳಿಸಿ ಐಯ್ಯರ್ ಜೊತೆಗೆ ಅಜೇಯವಾಗುಳಿದರು. ಈ ಮೂಲಕ ಭಾರತ ನಿಗದಿತ 20 ಓವರ್‌ಗಳಲ್ಲಿ 199 ರನ್‌ಗಳಿಸಿತು

  ಇನ್ನು ಭಾರತದ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಿಂದಲೇ ಪೆವಿಲಿಯನ್‌ ಪರೇಡ್‌ ಆರಂಭಿಸಿತ್ತು. ಆದರೂ, ಎಡಗೈ ಬ್ಯಾಟ್ಸ್‌ಮನ್‌ ಚರಿತ್‌ ಅಸಲಂಕ ಅವರ ಹೋರಾಟದ 53* ರನ್‌ಗಳ ಬಲದಿಂದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್‌ಗಳಿಸಲಷ್ಟೇ ಶಕ್ತವಾಯಿತು. ಇನ್ನು ಲಂಕಾ ಪರ ನಾಯಕ ದಸುನ್ ಶನಕಾ ಹಾಗೂ ಲಾಹಿರು ಕುಮಾರ ತಲಾ ಒಂದು ವಿಕೆಟ್ ಪಡೆದುಕೊಂಡ್ರು.

  10 ಪಂದ್ಯಗಳಲ್ಲಿ ನಿರಂತರ ಗೆಲುವು

  ಈ ಹಿಂದೆ ಭಾರತ 2022ರ ಜನವರಿಯಿಂದ ಡಿಸೆಂಬರ್‌ವರೆಗೆ 9 ಟಿ20 ಪಂದ್ಯಗಳನ್ನ ಗೆದ್ದಿತ್ತು. ಆದ್ರೀಗ ಮತ್ತೊಮ್ಮೆ ಆ ಸಾಧನೆ ಮಾಡಿದ್ದು 2021 ನವೆಂಬರ್‌ನಿಂದ ಪ್ರಸ್ತುತ ಫೆಬ್ರವರಿ 2022ರ ಅವಧಿಯಲ್ಲಿ ಭಾರತ 10 ಟಿ20 ಪಂದ್ಯವನ್ನ ಸತತವಾಗಿ ಗೆದ್ದು ತೋರಿಸಿದೆ. ಇದಲ್ಲದೆ ಭಾರತ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನ ಪಡೆದಿದೆ.
  ವಿಶ್ವ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಸತತ 12 ಪಂದ್ಯ ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿದ್ದು, 11 ಪಂದ್ಯ ಗೆದ್ದಿರುವ ಪಾಕಿಸ್ತಾನ ಎರಡನೇ ಸ್ಥಾನ ಅಲಂಕರಿಸಿದೆ

  ಇದನ್ನೂ ಓದಿ: ಪುಟ್ಟ ಮಗುವಿನ ಚಿಕಿತ್ಸೆಗೆ ನೆರವು; ಹೃದಯ ವೈಶಾಲ್ಯತೆ ಮೆರೆದ ಕೆ.ಎಲ್ ರಾಹುಲ್

  ರೋಹಿತ್ ಶರ್ಮಾ ವಿಶ್ವದಾಖಲೆ

  ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪುರುಷರ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್‌ ಸ್ಕೋರ್ ಗಳಿಸಿದ ಆಟಗಾರ ಎಂಬ ಸಾಧನೆಯನ್ನ ಮಾಡಿದ್ದಾರೆ. 123 ಟಿ20 ಪಂದ್ಯವನ್ನಾಡುತ್ತಿರುವ ರೋಹಿತ್ ಶರ್ಮಾ 140.66ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು, 33.33 ಸರಾಸರಿಯಲ್ಲಿ 3300 ರನ್ ಕಲೆಹಾಕಿದ್ದಾರೆ. ನಾಲ್ಕು ಅಮೋಘ ಶತಕಗಳು ಮತ್ತು 26 ಅರ್ಧಶತಕಗಳಿಸಿರುವ ರೋಹಿತ್ 155 ಸಿಕ್ಸರ್‌ಗಳನ್ನ ಸಿಡಿಸಿದ್ದಾರೆ.
  ರೋಹಿತ್ ಈ ಸಾಧನೆ ಮಾಡುವ ಮೊದಲು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 3,296 ರನ್ ಹಾಗೂ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್‌ 3299 ರನ್ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ
  Published by:ranjumbkgowda1 ranjumbkgowda1
  First published: