IND vs SA: ವಿಶ್ವದ ಬಲಿಷ್ಠ ತಂಡದೆದುರು ನಾವು ಅತ್ಯುತ್ತಮ ಪ್ರದರ್ಶನ ನೀಡಿದೆವು; ಆಫ್ರಿಕಾ ನಾಯಕ

ಭಾರತ- ದಕ್ಷಿಣ ಆಫ್ರಿಕಾ ಮಧ್ಯೆ ಅಂತಿಮ ಮೂರನೇ ಟಿ-20 ಪಂದ್ಯ ಸೆ. 22 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Vinay Bhat | news18-kannada
Updated:September 19, 2019, 10:46 AM IST
IND vs SA: ವಿಶ್ವದ ಬಲಿಷ್ಠ ತಂಡದೆದುರು ನಾವು ಅತ್ಯುತ್ತಮ ಪ್ರದರ್ಶನ ನೀಡಿದೆವು; ಆಫ್ರಿಕಾ ನಾಯಕ
ವಿರಾಟ್ ಕೊಹ್ಲಿ ಹಾಗೂ ಕ್ವಿಂಟನ್ ಡಿಕಾಕ್
Vinay Bhat | news18-kannada
Updated: September 19, 2019, 10:46 AM IST
ಬೆಂಗಳೂರು (ಸೆ. 19): ಭಾರತ ವಿರುದ್ಧ ನಡೆದ 2ನೇ ಟಿ-20 ಪಂದ್ಯದಲ್ಲಿ ಸೋತ ಬಳಿಕ ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿಕಾಕ್ ಮಾತನಾಡಿದ್ದು, ನಾವು ವಿಶ್ವದ ಬಲಿಷ್ಠ ತಂಡದೆದುರು ಅತ್ಯುತ್ತಮ ಪ್ರದರ್ಶನ ನೀಡಿದೆವು ಎಂದು ಹೇಳಿದರು.

ಮೊಹಾಲಿಯಲ್ಲಿ ನಡೆದ 2ನೇ ಟಿ-20 ಪಂದ್ಯದಲ್ಲಿ ಭಾರತ, ನಾಯಕ ವಿರಾಟ್ ಕೊಹ್ಲಿಯ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ 7 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

ದ. ಆಫ್ರಿಕಾ ನಾಯಕ ಡಿಕಾಕ್(52) ಉತ್ತಮ ಆಟ ಪ್ರದರ್ಶಿಸಿದರಾದರು ಇವರಿಗೆ ಉಳಿದ ಬ್ಯಾಟ್​​ಮನ್​ಗಳು ಸಾತ್ ನೀಡಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ಡಿಕಾಕ್, 'ನಾವು ಅಂದುಕೊಂಡಂತೆ ಬ್ಯಾಟಿಂಗ್​ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದೆವು. ಆದರೆ, ಡೆತ್ ಓವರ್​ನಲ್ಲಿ ಭಾರತೀಯ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಬೌಲರ್​​ಗಳಿಗೆ ಈ ಪಿಚ್ ಹೆಚ್ಚಿನ ಸಹಾಯ ನೀಡಿತು'

IND vs SA: 2ನೇ ಟಿ-20 ಪಂದ್ಯದಲ್ಲಿ ಎಲ್ಲರನ್ನೂ ಒಮ್ಮೆ ನಿಬ್ಬೆರಗಾಗಿಸಿತ್ತು ಈ ಮೂರು ಘಟನೆ!

'ನಮ್ಮ ತಂಡದಲ್ಲಿ ಹೆಚ್ಚಿನವರು ಹೊಸ ಯುವ ಆಟಗಾರರಿದ್ದರು. ಅವರು ವಿಶ್ವದ ಬಲಿಷ್ಠ ತಂಡದ ಎದುರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಎದುರಾಳಿಯ ವಿಕಟ್ ಪಡೆಯಲು ಬೌಲಿಂಗ್​ನಲ್ಲಿ ಕಗಿಸೊ ರಬಾಡರನ್ನು ಹೆಚ್ಚು ಅವಲಂಬಿಸಿತ್ತು. ಆದರೆ, ಅವರಿಲ್ಲದ ಕಾರಣ 24 ರನ್​ಗಳು ಹೆಚ್ಚು ಹರಿದು ಬಂದವು. ಮುಂದಿನ ಪಂದ್ಯದಲ್ಲಿ ಇದಕ್ಕಿಂತಲು ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸುವ ವಿಶ್ವಾಸವಿದೆ' ಎಂದು ಡಿಕಾಕ್ ಹೇಳಿದ್ದಾರೆ.

ಭಾರತ- ದಕ್ಷಿಣ ಆಫ್ರಿಕಾ ಮಧ್ಯೆ ಅಂತಿಮ ಮೂರನೇ ಟಿ-20 ಪಂದ್ಯ ಸೆ. 22 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

First published:September 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...