ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಗಸದೆತ್ತರಕ್ಕೆ ಜಿಗಿದ ಭಾರತ; ಎಷ್ಟು ಪಾಯಿಂಟ್ ಗೊತ್ತಾ?

ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲು ಗೆದ್ದು ಟೆಸ್ಟ್​ ಚಾಂಪಿಯನ್​ಶಿಪ್​ನ ಈವರೆಗೆನ ಒಟ್ಟು 5 ಪಂದ್ಯಗಳಲ್ಲಿ ಐದನ್ನೂ ಜಯಿಸಿ ಬರೋಬ್ಬರಿ 240 ಅಂಕ ತನ್ನ ಖಾತೆಗೆ ಸೇರಿಸಿಕೊಂಡಿದೆ. ಜೊತೆಗೆ ಟೆಸ್ಟ್​ ರ್ಯಾಂಕಿಂಗ್​ನಲ್ಲೂ ಮೊದಲ ಸ್ಥಾನ ಖಾಯಂಗೊಳಿಸಿದೆ.

Vinay Bhat | news18-kannada
Updated:October 22, 2019, 10:57 AM IST
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಗಸದೆತ್ತರಕ್ಕೆ ಜಿಗಿದ ಭಾರತ; ಎಷ್ಟು ಪಾಯಿಂಟ್ ಗೊತ್ತಾ?
ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲು ಗೆದ್ದು ಟೆಸ್ಟ್​ ಚಾಂಪಿಯನ್​ಶಿಪ್​ನ ಈವರೆಗೆನ ಒಟ್ಟು 5 ಪಂದ್ಯಗಳಲ್ಲಿ ಐದನ್ನೂ ಜಯಿಸಿ ಬರೋಬ್ಬರಿ 240 ಅಂಕ ತನ್ನ ಖಾತೆಗೆ ಸೇರಿಸಿಕೊಂಡಿದೆ. ಜೊತೆಗೆ ಟೆಸ್ಟ್​ ರ್ಯಾಂಕಿಂಗ್​ನಲ್ಲೂ ಮೊದಲ ಸ್ಥಾನ ಖಾಯಂಗೊಳಿಸಿದೆ.
  • Share this:
ಬೆಂಗಳೂರು (ಅ. 22): ಟೀಂ ಇಂಡಿಯಾ ತವರಿನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದು ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮೂರನ್ನೂ ಗೆದ್ದುಬೀಗಿ ಕ್ಲೀನ್​ಸ್ವೀಪ್ ಮಾಡಿಕೊಂಡಿದೆ.

ಟೂರ್ನಿಯಿದ್ದಕ್ಕು ಅದ್ಭುತ ಪ್ರದರ್ಶನ ತೋರಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡಿದ್ದಾರೆ. ಇದರ ಜೊತೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ.

India vs South Africa, Live Cricket Score, 3rd Test Match at Ranchi, Day 4: IND Win by Innings & 202 Runs
ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು


IND vs SA: ದೀಪಾವಳಿಗೆ ಗೆಲುವಿನ ಉಡುಗೊರೆ; ಸರಣಿ ಕ್ಲೀನ್​ಸ್ವೀಪ್ ಮಾಡಿದ ಟೀಂ ಇಂಡಿಯಾ

ಟೆಸ್ಟ್​ ಪಂದ್ಯಗಳಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಭಾರತ ಕಳೆದ ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ನ ಎರಡೂ ಪಂದ್ಯಗಳನ್ನು ಗೆದ್ದು ಬೀಗಿತ್ತು. ಒಂದು ಪಂದ್ಯಕ್ಕೆ ತಲಾ 60 ಅಂಕದಂತೆ 120 ಪಾಯಿಂಟ್ ಸಂಪಾದಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಮೊದಲ ಸರಣಿಯಲ್ಲೇ ಗೆದ್ದು ಅಂಕಪಟ್ಟಿಯಲ್ಲಿ ಟಾಪ್​ಗೇರಿತ್ತು.

ಸದ್ಯ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲು ಗೆದ್ದು ಟೆಸ್ಟ್​ ಚಾಂಪಿಯನ್​ಶಿಪ್​ನ ಈವರೆಗೆನ ಒಟ್ಟು 5 ಪಂದ್ಯಗಳಲ್ಲಿ ಐದನ್ನೂ ಜಯಿಸಿ ಬರೋಬ್ಬರಿ 240 ಅಂಕ ತನ್ನ ಖಾತೆಗೆ ಸೇರಿಸಿಕೊಂಡಿದೆ. ಜೊತೆಗೆ ಟೆಸ್ಟ್​ ರ್ಯಾಂಕಿಂಗ್​ನಲ್ಲೂ ಮೊದಲ ಸ್ಥಾನ ಖಾಯಂಗೊಳಿಸಿದೆ.

 


ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಅಂಕಪಟ್ಟಿಯ 2ನೇ ಸ್ಥಾನದಲ್ಲಿ 60 ಅಂಕಹೊಂದಿ ನ್ಯೂಜಿಲೆಂಡ್ ಅಲಂಕರಿಸಿದ್ದರೆ, ಶ್ರೀಲಂಕಾ ಕೂಡ 60 ಪಾಯಿಂಟ್​ನಿಂದ 3ನೇ ಸ್ಥಾನದಲ್ಲಿದೆ. 4ನೇ ಸ್ಥಾನ 56 ಪಾಯಿಂಟ್​ನೊಂದಿಗೆ ಆಸ್ಟ್ರೇಲಿಯಾ ತಂಡ ಹೊಂದಿದೆ.

IND vs BAN: ಬಾಂಗ್ಲಾದೇಶ ಆಟಗಾರರ ಮುಷ್ಕರ; ಭಾರತ ವಿರುದ್ಧದ ಸರಣಿ ರದ್ದು ಸಾಧ್ಯತೆ?

ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, "ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಸರಣಿಯನ್ನು ಮರೆಯಲು ಸಾಧ್ಯವಿಲ್ಲ. ಸ್ಪಿನ್ ನಮ್ಮ ಪ್ರಮುಖ ಅಸ್ತ್ರ. ಬ್ಯಾಟಿಂಗ್ ನಮಗೆ ಯಾವುದೇ ತೊಂದರೆ ಕೊಟ್ಟಿಲ್ಲ. ವೇಗಿಗಳು ಉತ್ತಮ ಸಾತ್ ನೀಡಿದರು. ಈ ಸರಣಿ ಗೆದ್ದು ನಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ. ಯಾವುದೇ ದೇಶದಲ್ಲಿ ಹೋಗಿ ಗೆದ್ದು ಬೀಗುವ ನಂಬಿಕೆಯಿದೆ. ಇದೆ ಪ್ರದರ್ಶನವನ್ನು ನಾವು ಸೀಮಿತ ಓವರ್ ಕ್ರಿಕೆಟ್​ನಲ್ಲೂ ಮುಂದುವರೆಸುತ್ತೇವೆ" ಎಂದರು.

 

First published:October 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading