Virat Kohli: ಪಂದ್ಯ ಮುಗಿದ ಬಳಿಕ ಧೋನಿ ಬಗ್ಗೆ ಪ್ರಶ್ನೆ ಕೇಳಿದಾಗ ಕೊಹ್ಲಿ ಹೀಗೆ ಹೇಳಿದ್ದೇಕೆ?

ಪಂದ್ಯ ಮುಗಿದ ಬಳಿಕ ಧೋನಿ ಟೀಂ ಇಂಡಿಯಾ ಆಟಗಾರರಿರುವ ಡ್ರೆಸ್ಸಿಂಗ್ ರೂಮ್​ಗೆ ಬಂದಿದ್ದು ಎಲ್ಲರನ್ನು ಭೇಟಿ ಮಾಡಿ ವಿಶ್ ಮಾಡಿದ್ದಾರೆ.

Vinay Bhat | news18-kannada
Updated:October 22, 2019, 2:39 PM IST
Virat Kohli: ಪಂದ್ಯ ಮುಗಿದ ಬಳಿಕ ಧೋನಿ ಬಗ್ಗೆ ಪ್ರಶ್ನೆ ಕೇಳಿದಾಗ ಕೊಹ್ಲಿ ಹೀಗೆ ಹೇಳಿದ್ದೇಕೆ?
ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ
  • Share this:
ಬೆಂಗಳೂರು (ಅ. 22): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮೂರನ್ನೂ ಗೆದ್ದು ಬೀಗಿರುವ ಟೀಂ ಇಂಡಿಯಾ ಸರಣಿ ಕ್ಲೀನ್​ಸ್ವೀಪ್ ಮಾಡಿಕೊಂಡಿದೆ. ಅಲ್ಲದೆ ದಾಖಲೆಯ ಗೆಲುವು ಸಾಧಿಸಿದೆ. ತವರು ನೆಲದಲ್ಲಿ ಕೊಹ್ಲಿ ಪಡೆ ಸತತ 11ನೇ ಟೆಸ್ಟ್​ ಸರಣಿ ಗೆದ್ದ ಸಾಧನೆ ಮಾಡಿದೆ.

ನಾಯಕ ವಿರಾಟ್ ಕೊಹ್ಲಿ ಟೆಸ್ಟ್​ ಪಂದ್ಯಗಳಲ್ಲಿ ಗೆಲುವಿನ ಶೇಕಾಡ 70ಕ್ಕೆ ಏರಿಕೆಯಾಗಿದೆ. ಅಲ್ಲದೆ ಮೂರನೇ ಟೆಸ್ಟ್​ನಲ್ಲಿ ಭಾರತ ಇನ್ನಿಂಗ್ಸ್​ ಹಾಗೂ 202 ರನ್​ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ದ. ಆಫ್ರಿಕಾ ವಿರುದ್ಧ ಭಾರತ ಅತಿ ದೊಡ್ಡ ಜಯ  ಸಾಧಿಸಿತು.

India vs South Africa: Virat Kohli’s answer to question on meeting Dhoni leaves reporters in splits
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ


ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಗಸದೆತ್ತರಕ್ಕೆ ಜಿಗಿದ ಭಾರತ; ಎಷ್ಟು ಪಾಯಿಂಟ್ ಗೊತ್ತಾ?

ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, "ಈ ಟೆಸ್ಟ್​ ಸರಣಿ ಗೆದ್ದ ಬಳಿಕ ನಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಇನ್ನುಮುಂದೆ ಯಾವುದೇ ದೇಶದಲ್ಲಿ ಹೋಗಿ ಗೆದ್ದು ಬರುವ ನಂಬಿಕೆ ಮೂಡಿದೆ. ಬ್ಯಾಟಿಂಗ್- ಬೌಲಿಂಗ್​ನಲ್ಲಿ ಎಲ್ಲ ಆಟಗಾರರು ತಮ್ಮ ಪ್ರತಷ್ಠೆಗೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ನೀಡಿದರು" ಎಂದರು.

ಈ ನಡುವೆ ವರದಿಗಾರರೊಬ್ಬರು ಕೊಹ್ಲಿಗೆ ಮಾಜಿ ನಾಯಕ ಎಂಎಸ್ ಧೋನಿ ಭವಿಷ್ಯದ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವಿರಾಟ್, ಧೋನಿ ಇಲ್ಲಿಯೆ ನಮ್ಮ ಜೊತೆ ಇದ್ದಾರೆ. ಡ್ರೆಸ್ಸಿಂಗ್ ರೂಮ್​ಗೆ ಬನ್ನಿ, ಬಂದು ಹಲೋ ಹೇಳಿಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 


ಕೇವಲ 9 ನಿಮಿಷ ಮತ್ತು 2 ಓವರ್; ರಾಂಚಿಯಲ್ಲಿ ಮಿಂಚಿದ ಭಾರತ ವೈಟ್​ವಾಶ್​ ಮೂಲಕ ದಾಖಲೆ!

ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಪಂದ್ಯ ಮುಗಿದ ಬಳಿಕ ಧೋನಿ ಟೀಂ ಇಂಡಿಯಾ ಆಟಗಾರರಿರುವ ಡ್ರೆಸ್ಸಿಂಗ್ ರೂಮ್​ಗೆ ಬಂದಿದ್ದು ಎಲ್ಲರನ್ನು ಭೇಟಿ ಮಾಡಿ ವಿಶ್ ಮಾಡಿದ್ದಾರೆ.

ಜೊತೆಗೆ ಮೂರನೇ ಪಂದ್ಯದ ಮೂಲಕ ಟೆಸ್ಟ್​ ಕ್ರೆಕೆಟ್​ಗೆ ಪದಾರ್ಪಣೆ ಮಾಡಿದ್ದ ಶಹ್ಬಾದ್ ನದೀಂ ಜೊತೆ ಧೋನಿ ಮಾತನಾಡುತ್ತಿರುವ ಫೋಟೋವನ್ನು ಬಿಸಿಸಿಐ ಅಪ್ಲೋಡ್ ಮಾಡಿದೆ. ಕೋಚ್ ರವಿಶಾಸ್ತ್ರಿ ಅವರುಕೂಡ ಧೋನಿ ಜೊತೆ ಫೋಟೋ ತೆಗೆದು ತಮ್ಮ ಟ್ವಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

  

First published:October 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ