IND vs SA: 2ನೇ ಟಿ-20 ಪಂದ್ಯದಲ್ಲಿ ಎಲ್ಲರನ್ನೂ ಒಮ್ಮೆ ನಿಬ್ಬೆರಗಾಗಿಸಿತ್ತು ಈ ಮೂರು ಘಟನೆ!

ಇನ್ನೇನು ಚೆಂಡು ಬೌಂಡರಿ ಗೆರೆ ದಾಟುತ್ತೆ ಎಂಬೊತ್ತಿಗೆ ಮಿಲ್ಲರ್ ಅದ್ಭುತವಾಗಿ ಧವನ್​ರ ಕ್ಯಾಚ್ ಹಿಡಿದರು. ಮಿಲ್ಲರ್ ಹಿಡಿದ ಕ್ಯಾಚ್ ನೋಡಿ ಸ್ವತಃ ಧವನ್ ಹಾಗೂ ವಿರಾಟ್ ಕೊಹ್ಲಿ ಒಮ್ಮೆ ಬೆರಗಾಗಿ ಹೋದರು.

Vinay Bhat | news18-kannada
Updated:September 19, 2019, 10:08 AM IST
IND vs SA: 2ನೇ ಟಿ-20 ಪಂದ್ಯದಲ್ಲಿ ಎಲ್ಲರನ್ನೂ ಒಮ್ಮೆ ನಿಬ್ಬೆರಗಾಗಿಸಿತ್ತು ಈ ಮೂರು ಘಟನೆ!
ವಿರಾಟ್ ಕೊಹ್ಲಿ, ಡೇವಿಡ್ ಮಿಲ್ಲರ್
Vinay Bhat | news18-kannada
Updated: September 19, 2019, 10:08 AM IST
ಬೆಂಗಳೂರು (ಸೆ. 19): ನಿನ್ನೆ ಮೊಹಾಲಿಯಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ-20 ಪಂದ್ಯ ನಿಜಕ್ಕೂ ರೋಚಕವಾಗಿತ್ತು. ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್​ಗೆ ಹರಿಣಗಳು ಸುಸ್ತಾಗಿ ಹೋಗಿದ್ದರು. ಇನ್ನೂ ಒಂದು ಓವರ್ ಬಾಕಿ ಇರುವಂತೆ ಟೀಂ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

2ನೇ ಟಿ-20 ಪಂದ್ಯದಲ್ಲಿ ಪ್ರಮುಖವಾಗಿ ಎಲ್ಲರನ್ನು ನಿಬ್ಬೆರಗಾಗಿಸಿದ್ದು ಆ ಮೂರು ಕ್ಯಾಚ್​ಗಳು! ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಡೇವಿಡ್ ಮಿಲ್ಲರ್ ಅದ್ಭುತ ಕ್ಯಾಚ್ ಹಿಡಿದು ತಾವೇ ವಿಶ್ವದ ಶ್ರೇಷ್ಠ ಫೀಲ್ಡರ್ ಎಂದು ಮತ್ತೆ ನಿರೂಪಿಸಿದರು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಫ್ರಿಕಾ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತಾದರು ನಾಯಕ ಕ್ವಿಂಡನ್ ಡಿಕಾಕ್ ಬೌಂಡರಿಗಳ ಮಳೆ ಸುರಿಸುತ್ತಿದ್ದರು.

ಇವರ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ನವ್​ದೀಪ್ ಸೈನಿ ಬೌಲಿಂಗ್​ನಲ್ಲಿ ಡಿಕಾಕ್ ಚೆಂಡನ್ನು ನೇರವಾಗಿ ಬೌಂಡರಿಗೆ ಅಟ್ಟಲು ಯತ್ನಿಸಿದರು. ಈ ಸಂದರ್ಭ ಓಡಿ ಬಂದ ಕೊಹ್ಲಿ ಡೈ ಹೊಡೆದು ಒಂದೇ ಕೈನಲ್ಲಿ ಹಿಡಿದ ಕ್ಯಾಚ್ ಒಂದು ಕ್ಷಣ ಎಲ್ಲರನ್ನು ಬೆರಗಾಗುವಂತೆ ಮಾಡಿತು.

Virat Kohli: ಟಿ-20 ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್; ಹಿಟ್​​ಮ್ಯಾನ್​ಗೆ ಶಾಕ್ ನೀಡಿದ ವಿರಾಟ್

 



ಇನ್ನು ರವೀಂದ್ರ ಜಡೇಜಾ ಫಿಲ್ಡಿಂಗ್​ನಲ್ಲಿ ಎಷ್ಟು ಎಚ್ಚರವಾಗಿರುತ್ತಾರೆ ಎಂಬುದು ಕ್ರಿಕೆಟ್ ಲೋಕಕ್ಕೆ ತಿಳಿದಿದೆ. ರಾಸ್ಸಿ ವಂಡರ್ ಡಸ್ಸನ್​ರನ್ನು ತಾವೇ ಬೌಲ್ ಮಾಡಿ ಕ್ಯಾಚ್ ಹಿಡಿದು ಬಂದ ಬೆನ್ನಲ್ಲೆ ಪೆವಿಲಿಯನ್​ಗೆ ಅಟ್ಟಿದ್ದರು ಜಡೇಜಾ.

 



ಡೇವಿಡ್ ಮಿಲ್ಲರ್ ಕೂಡ ದಕ್ಷಿಣ ಅಫ್ರಿಕಾದ ಅದ್ಭುತ ಫೀಲ್ಡರ್. ನಿನ್ನೆಯ ಪಂದ್ಯದಲ್ಲಿ ಧವನ್ ಅರ್ಧಶತಕ ಬಾರಿಸುವುದನ್ನು ತಪ್ಪಿಸಿದ್ದು ಇದೇ ಕಿಲ್ಲರ್ ಮಿಲ್ಲರ್.

ಸಿಕ್ಸ್​ ಚಚ್ಚಲು ಧವನ್ ನೇರವಾಗಿ ಚೆಂಡನ್ನು ಬೌಂಡರಿ ಲೈನ್​ನತ್ತ ಅಟ್ಟಿದರು. ಆದರೆ, ಅದೆಲ್ಲಿಂದ ಬಂದರೋ ಗೊತ್ತಿಲ್ಲ. ಇನ್ನೇನು ಚೆಂಡು ಬೌಂಡರಿ ಗೆರೆ ದಾಟುತ್ತೆ ಎಂಬೊತ್ತಿಗೆ ಮಿಲ್ಲರ್ ಅದ್ಭುತವಾಗಿ ಧವನ್​ರ ಕ್ಯಾಚ್ ಹಿಡಿದರು. ಮಿಲ್ಲರ್ ಹಿಡಿದ ಕ್ಯಾಚ್ ನೋಡಿ ಸ್ವತಃ ಧವನ್ ಹಾಗೂ ವಿರಾಟ್ ಕೊಹ್ಲಿ ಒಮ್ಮೆ ಬೆರಗಾಗಿ ಹೋದರು.

 



First published:September 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...