ಇತಿಹಾಸ ಸೃಷ್ಟಿಸುತ್ತಾ ಟೀಂ ಇಂಡಿಯಾ?; ಒಂದು ದಾಖಲೆಗಾಗಿ ಕೊಹ್ಲಿ-ರೋಹಿತ್ ಮಧ್ಯೆ ಬಿಗ್ ಫೈಟ್!

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಯಾಕೆಂದರೆ ಹರಿಗಳ ವಿರುದ್ಧ ಭಾರತ ತನ್ನ ತವರಿನಲ್ಲಿ ಈವರೆಗೆ ಒಂದೇ ಒಂದು ಟಿ-20 ಪಂದ್ಯವನ್ನೂ ಗೆದ್ದಿಲ್ಲ. ಈ ಬಾರಿ ಗೆದ್ದಿದ್ದೆ ಆದರೆ ಕೊಹ್ಲಿ ಸೈನ್ಯ ಹೊಸ ದಾಖಲೆ ಸೃಷ್ಟಿಸಲಿದೆ.

Vinay Bhat | news18-kannada
Updated:September 14, 2019, 10:48 AM IST
ಇತಿಹಾಸ ಸೃಷ್ಟಿಸುತ್ತಾ ಟೀಂ ಇಂಡಿಯಾ?; ಒಂದು ದಾಖಲೆಗಾಗಿ ಕೊಹ್ಲಿ-ರೋಹಿತ್ ಮಧ್ಯೆ ಬಿಗ್ ಫೈಟ್!
ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್ ಅನ್ನು ಆಳುತ್ತಿರುವ ನಂಬರ್ ಒನ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ! ಏಕದಿನ ಕ್ರಿಕೆಟ್ನಲ್ಲಿ ಅರ್ಧಶತಕದ ಶತಕ ಸಿಡಿಸಲು ಕೊಹ್ಲಿಗಿನ್ನು ಕೇವಲ 7 ಸೆಂಚುರಿಗಳಷ್ಟೆ ಬಾಕಿ ಉಳಿದಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸರಾಸರಿ ಹೊಂದಿರುವ ಏಕೈಕ ಬ್ಯಾಟ್ಸ್ಮನ್ ಎಂದರೆ ಅದು ಕೊಹ್ಲಿ. ಈಗಾಗಲೇ ಕೊಹ್ಲಿ ಅನೇಕ ದಾಖಲೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮಾಡಿರದ ಈ 5 ಸಾಧನೆಯನ್ನು ರೋಹಿತ್ ಶರ್ಮಾ ಅದಾಗಲೇ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
  • Share this:
ಬೆಂಗಳೂರು (ಸೆ. 14): ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಈಗಾಗಲೇ ಮೊದಲ ಪಂದ್ಯಕ್ಕಾಗಿ ಧರ್ಮಶಾಲ ತಲುಪಿರುವ ಕೊಹ್ಲಿ ಪಡೆ ಅಭ್ಯಾಸದಲ್ಲಿ ನಿರತವಾಗಿದೆ. ನಾಳೆ (ಸೆ. 14) ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಕದನ ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷೆಸಲಾಗಿದೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ- ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾದ ದೊಡ್ಡ ಅಸ್ತ್ರ. ಇವರಿಬ್ಬರು ಮಿಂಚಿದರೆ ತಂಡಕ್ಕೆ ಸುಲಭ ಜಯ. ಆದರೆ, ಒಂದು ದಾಖಲೆಗಾಗಿ ಇವರಿಬ್ಬರ ಮಧ್ಯೆ ಈಗ ಪೈಪೋಟಿ ಏರ್ಪಟ್ಟಿದೆ.

World T20 audition begins now
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ


ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಗರಿಷ್ಠ ರನ್ ಕಲೆಹಾಕಿದವರ ಪೈಕಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಹಿಟ್​ಮ್ಯಾನ್​ 88 ಇನ್ನಿಂಗ್ಸ್​ಗಳಲ್ಲಿ 2422 ರನ್ ಗಳಿಸಿದ್ದಾರೆ. ಇತ್ತ ಕೊಹ್ಲಿ 65 ಇನ್ನಿಂಗ್ಸ್​ಗಳಲ್ಲಿ 2369 ರನ್ ಬಾರಿಸಿದ್ದಾರೆ.

ಹೀಗಾಗಿ ರೋಹಿತ್ ದಾಖಲೆ ಮುರಿದು ಅಂತರಾಷ್ಟ್ರೀಯ ಟಿ-20 ಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್​ಮನ್​ ಕೊಹ್ಲಿ ಹೆಸರಿಗೆ ಬರಲು ಇನ್ನು 53 ರನ್​ಗಳ ಅವಶ್ಯಕತೆಯಿದೆ. ಇದರ ಮೇಲೆ ಕೊಹ್ಲಿ ಕಣ್ಣಿದ್ದರೆ, ಇತ್ತ ರೋಹಿತ್ ಇನ್ನಷ್ಟು ರನ್ ಕಲೆಹಾಕಿ ನಂಬರ್ ಒನ್ ಪಟ್ಟ ಭದ್ರ ಪಡಿಸುವ ಅಂದಾಜಿನಲ್ಲಿದ್ದಾರೆ.

IND vs SA: ನಾಳೆ ಮೊದಲ ಟಿ-20; ಹೊಸ ಜೆರ್ಸಿಯಲ್ಲಿ ಟೀಂ ಇಂಡಿಯಾ ಕಣಕ್ಕೆ

ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಈವರೆಗೆ ಗರಿಷ್ಠ ರನ್ ಗಳಿಸಿದವರ ಪೈಕಿ ರೋಹಿತ್ (2422 ರನ್) ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ (2369) ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಮಾರ್ಟಿನ್ ಗುಪ್ಟಿಲ್ (2283) ಇದ್ದು, 4 ನೇ ಸ್ಥಾನವನ್ನು ಶೋಯೆಬ್ ಮಲಿಕ್ (2263) ಅಲಂಕರಿಸಿದ್ದಾರೆ.ಇನ್ನು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಯಾಕೆಂದರೆ ಹರಿಗಳ ವಿರುದ್ಧ ಭಾರತ ತನ್ನ ತವರಿನಲ್ಲಿ ಈವರೆಗೆ ಒಂದೇ ಒಂದು ಟಿ-20 ಪಂದ್ಯವನ್ನೂ ಗೆದ್ದಿಲ್ಲ. ಈ ಬಾರಿ ಗೆದ್ದಿದ್ದೆ ಆದರೆ ಕೊಹ್ಲಿ ಸೈನ್ಯ ಹೊಸ ದಾಖಲೆ ಸೃಷ್ಟಿಸಲಿದೆ.

ಭಾರತ, ದ. ಆಫ್ರಿಕಾ ವಿರುದ್ಧ ಒಟ್ಟು ಮೂರು ಪಂದ್ಯಗಳ ಟಿ-20 ಹಾಗೂ ಟೆಸ್ಟ್​ ಸರಣಿ ಆಡಲಿದೆ. ಈ ಪೈಕಿ ಮೊದಲ ಟಿ-20 ಪಂದ್ಯ ನಾಳೆ ಧರ್ಮಶಾಲದಲ್ಲಿ ನಡೆಯಲಿದೆ.

First published:September 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading