ಟಿ-20ಯಲ್ಲಿ 200ಕ್ಕೂ ಅಧಿಕ ರನ್ ಚಚ್ಚುವ ಗುರಿ; ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಟ್ಟ ಕೊಹ್ಲಿ

ಟೀಂ ಇಂಡಿಯಾ 200ಕ್ಕೂ ಅಧಿಕ ರನ್ ಕಲೆಹಾಕುವ ಯೋಜನೆ ಹೊಂದಬೇಕು. ಇದಕ್ಕೆ ಕೆಳ ಕ್ರಮಾಂಕದಲ್ಲು ಬ್ಯಾಟ್ ಬೀಸುವ ಆಟಗಾರರ ಅಗತ್ಯವಿದೆ. ರಾಹುಲ್ ಚಹಾರ್ ಹಾಗೂ ವಾಷಿಂಗ್ಟನ್ ಸುಂದರ್​​ರನ್ನು ಪ್ರಯೋಗ ಮಾಡಲಾಗುತ್ತಿದೆ- ವಿರಾಟ್ ಕೊಹ್ಲಿ

Vinay Bhat | news18-kannada
Updated:September 17, 2019, 9:20 AM IST
ಟಿ-20ಯಲ್ಲಿ 200ಕ್ಕೂ ಅಧಿಕ ರನ್ ಚಚ್ಚುವ ಗುರಿ; ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಟ್ಟ ಕೊಹ್ಲಿ
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
  • Share this:
ಬೆಂಗಳೂರು (ಸೆ. 17): 2020ರಲ್ಲಿ ಐಸಿಸಿ ಟಿ-20 ವಿಶ್ವಕಪ್ ನಡೆಯಲಿದೆ. ಈ ಹೊತ್ತಿಗೆ ಟೀಂ ಇಂಡಿಯಾ ಬಲಿಷ್ಠವಾಗಬೇಕಿದೆ. 2019ರ ಏಕದಿನ ವಿಶ್ವಕಪ್ ಗೆಲ್ಲಲು ವಿಫಲವಾದ ಕೊಹ್ಲಿ ಪಡೆ ಸದ್ಯ ಟಿ-20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಈಗಿಂದಲೇ ಭರ್ಜರಿ ತಯಾರಿಯಲ್ಲೂ ತೊಡಗಿದೆ. ಯುವ ಆಟಗಾರರನ್ನು ತಯಾರು ಮಾಡುವ ಉದ್ದೇಶದಿಂದ ಅವರಿಗೆ ಸಾಕಷ್ಟು ಅವಕಾಶ ನೀಡುತ್ತಿದೆ.

ಆದರೆ, ಟೀಂ ಇಂಡಿಯಾದ ಖಾಯಂ ಸ್ಪಿನ್ನರ್​​​ಗಳಿಬ್ಬರು ಇತ್ತೀಚೆಗೆ ತಂಡದಲ್ಲಿ ಕಾಣಿಸುತ್ತಿಲ್ಲ. ಭಾರತ ತಂಡದಲ್ಲಿ ಕುಲ್ಚಾ ಎಂದೇ ಖ್ಯಾತಿ ಪಡೆದಿರುವ ಸ್ಟಾರ್ ಸ್ಪಿನ್ನರ್​​ಗಳಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್​ರನ್ನು ಇತ್ತೀಚಿನ ದಿನಗಳಲ್ಲಿ ಕಡೆಗಣಿಸಲಾಗುತ್ತಿದೆ. ಇಷ್ಟೇ ಅಲ್ಲದೆ ಇವರಿಬ್ಬರು ಮುಂಬರುವ ಟಿ-20 ವಿಶ್ವಕಪ್​ನಲ್ಲೂ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

Virat Kohli reveals why Kuldeep Yadav and Yuzvendra Chahal were left out of South Africa T20Is
ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್


ಸದ್ಯಕ್ಕೆ ಸೀಮಿತ ಓವರ್​ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿರುವ ಇವರು ಟಿ-20 ತಂಡದಲ್ಲಿ ಮಾತ್ರ ಕಾಣಿಸುತ್ತಿಲ್ಲ. ಇವರ ಬದಲಿಗೆ ಯುವ ಆಟಗಾರರ ಮೊರೆ ಹೋಗುತ್ತಿದೆ ಕೊಹ್ಲಿ ಪಡೆ. ಸದ್ಯ ಸಾಗುತ್ತಿರುವ ದ. ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲೂ ಇವರಿಬ್ಬರ ಹೆಸರಿಲ್ಲ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.

ICC Test Rankings: ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಂಡ ಸ್ಮಿತ್; 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ

'2020 ರಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಈ ಹೊತ್ತಿಗೆ ನಮ್ಮ ತಂಡ ಮತ್ತಷ್ಟು ಬಲಿಷ್ಠವಾಗಬೇಕು. 200ಕ್ಕೂ ಅಧಿಕ ರನ್ ಕಲೆಹಾಕುವ ಯೋಜನೆ ಹೊಂದಬೇಕು. ಇದಕ್ಕೆ ಕೆಳ ಕ್ರಮಾಂಕದಲ್ಲು ಬ್ಯಾಟ್ ಬೀಸುವ ಆಟಗಾರರ ಅಗತ್ಯವಿದೆ. ಹೀಗಾಗಿ ರಾಹುಲ್ ಚಹಾರ್ ಹಾಗೂ ವಾಷಿಂಗ್ಟನ್ ಸುಂದರ್​​ರನ್ನು ಪ್ರಯೋಗ ಮಾಡಲಾಗುತ್ತಿದೆ'

'ಈಗಾಗಲೇ ಇಂಗ್ಲೆಂಡ್ ಸೇರಿದಂತೆ ಕೆಲ ತಂಡಗಳಲ್ಲಿ 8, 9 ಹಾಗೂ 10ನೇ ಕ್ರಮಾಂಕದ ವರೆಗೂ ಬ್ಯಾಟಿಂಗ್​ನಲ್ಲಿ ಬಲಿಷ್ಠವಿದೆ. ಹೀಗಾಗಿ ನಮಗೆ ಬೌಲಿಂಗ್ ಜೊತೆ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡುವ ಆಟಗಾರರು ಬೇಕಿದ್ದಾರೆ. ಇದರಲ್ಲಿ ಏನು ತಪ್ಪಿಲ್ಲ. ನಮ್ಮದು 200ಕ್ಕೂ ಅಧಿಕ ರನ್ ಕಲೆಹಾಕುವುದು ಮಾತ್ರ ಗುರಿ. ಟೀಂ ಇಂಡಿಯಾ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ' ಎಂಬುದು ವಿರಾಟ್ ಕೊಹ್ಲಿ ಮಾತು.
Loading...

ಈ ಹಿಂದೆ ಆಯ್ಕೆ ಸಮಿತಿ ಅಧ್ಯಕ್ಷ ಕೂಡ ಇದೇ ಮಾತನ್ನ ಹೇಳಿದ್ದರು. 'ಅನೇಕ ಯುವ ಪ್ರತಿಭಾವಂತ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ಅವರಿಗೂ ಅವಕಾಶ ನೀಡಬೇಕು. ಅಲ್ಲದೆ 2020ರ ವೇಳೆ ಭಾರತ ತಂಡ ಟಿ-20 ವಿಶ್ವಕಪ್​​ಗೆ ಸಿದ್ಧವಾಗಿರಬೇಕು. ಇದಕ್ಕೆ ಈಗಿನಿಂದಲೇ ನಾವು ಯೋಚಿಸಿ ಹೆಜ್ಜೆ ಇಡುತ್ತಿದ್ದೇವೆ' ಎಂದು ಎಂಎಸ್​ಕೆ ಪ್ರಸಾದ್ ಹೇಳಿದ್ದರು.

First published:September 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...