Virat Kohli: ಮಗದೊಂದು ದಾಖಲೆಯತ್ತ ಕಿಂಗ್ ಕೊಹ್ಲಿ; ಈ ಬಾರಿ ವಿರಾಟ್ ಟಾರ್ಗೆಟ್ ಯಾರು ಗೊತ್ತಾ..?

ಈವರೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ನಾಯಕನಾಗಿ ಗರಿಷ್ಠ ಶತಕ ಬಾರಿಸಿದ ಆಟಗಾರರ ಪೈಕಿ ದ. ಆಫ್ರಿಕಾದ ಮಾಜಿ ನಾಯಕ ಗ್ರೆನ್ ಸ್ಮಿತ್ 25 ಶತಕದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ...

Vinay Bhat | news18-kannada
Updated:October 18, 2019, 3:48 PM IST
Virat Kohli: ಮಗದೊಂದು ದಾಖಲೆಯತ್ತ ಕಿಂಗ್ ಕೊಹ್ಲಿ; ಈ ಬಾರಿ ವಿರಾಟ್ ಟಾರ್ಗೆಟ್ ಯಾರು ಗೊತ್ತಾ..?
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
Vinay Bhat | news18-kannada
Updated: October 18, 2019, 3:48 PM IST
ಬೆಂಗಳೂರು (ಅ. 18): ನಾಳೆಯಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ರಾಂಚಿಯಲ್ಲಿ ಅಂತಿಮ ಮೂರನೇ ಟೆಸ್ಟ್​ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆ ಮಾಡುವ ಸನಿಹದಲ್ಲಿದ್ದಾರೆ.

ಎರಡನೇ ಟೆಸ್ಟ್​ನಲ್ಲಿ ಭರ್ಜರಿ ಶತಕ ಸಿಡಿಸಿದ ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 41ನೇ ಸೆಂಚುರಿ ಬಾರಿಸಿದ ಭಾರತದ 2ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಅಲ್ಲದೆ ಟೆಸ್ಟ್​ ತಂಡದ ನಾಯಕನಾಗಿ 9ನೇ ಬಾರಿ 150ಕ್ಕೂ ಅಧಿಕ ರನ್ ಕಲೆಹಾಕಿ ಡಾನ್ ಬ್ರಾಡ್ಮನ್ ವಿಶ್ವದಾಖಲೆ ಮುರಿದರು.

India vs South Africa: Virat Kohli on cusp of surpassing Ricky Ponting in elite list led by Graeme Smith
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ


ಸರ್ಫರಾಜ್​ನನ್ನು ನಾಯಕತ್ವದಿಂದ ಕಿತ್ತೆಸೆದ ಪಾಕಿಸ್ತಾನ; ಹೊಸ ಕ್ಯಾಪ್ಟನ್ ಯಾರು ಗೊತ್ತಾ..?

ಸದ್ಯ ಟೆಸ್ಟ್​ ನಾಯಕನಾಗಿ ಕೊಹ್ಲಿ 19 ಶತಕ ಬಾರಿಸಿದ್ದಾರೆ. ಇದರೊಂದಿಗೆ ಆಸೀಸ್ ಮಾಜಿ ಬ್ಯಾಟಿಂಗ್ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆಯನ್ನ ಸರಿಗಟ್ಟಿದ್ದರು. ಮೂರನೇ ಟೆಸ್ಟ್​ನಲ್ಲಿ ಕೊಹ್ಲಿ ಬ್ಯಾಟ್​ನಿಂದ ಇನ್ನೊಂದು ಸೆಂಚುರಿ ಬಂದರೆ ಪಾಂಟಿಂಗ್ ದಾಖಲೆಯನ್ನು ಮುರಿಯಲಿದ್ದಾರೆ.

ಈವರೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ನಾಯಕನಾಗಿ ಗರಿಷ್ಠ ಶತಕ ಬಾರಿಸಿದ ಆಟಗಾರರ ಪೈಕಿ ದ. ಆಫ್ರಿಕಾದ ಮಾಜಿ ನಾಯಕ ಗ್ರೆನ್ ಸ್ಮಿತ್ 25 ಶತಕದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (19 ಶತಕ), ಮೂರನೇ ಸ್ಥಾನ ರಿಕಿ ಪಾಂಟಿಂಗ್ (19 ಶತಕ), ನಾಲ್ಕನೇ ಸ್ಥಾನ ಸ್ಟೀವ್ ಸ್ಮಿತ್ (15 ಶತಕ) ಹಾಗೂ 5ನೇ ಸ್ಥಾನದಲ್ಲಿ ಅಲನ್ ಬಾರ್ಡನ್ (15 ಶತಕ) ಇದ್ದಾರೆ.

ಅಂತಿಮ ಟೆಸ್ಟ್​ಗೆ ಭರ್ಜರಿ ತಯಾರಿ; ಧೋನಿ ತವರೂರಲ್ಲಿ ಟೀಂ ಇಂಡಿಯಾ ಆಟಗಾರರ ಕಠಿಣ ಅಭ್ಯಾಸ
Loading...

ಎರಡನೇ ಟೆಸ್ಟ್​ನಲ್ಲಿ ದ್ವಿಶತಕ ಸಿಡಿಸಿದ ಕಿಂಗ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ದಾಖಲೆಯನ್ನೂ ಧೂಳಿಪಟ ಮಾಡಿದ್ದರು. ಕೊಹ್ಲಿ 7 ದ್ವಿಶತಕ ಸಿಡಿಸಿದರೆ, ಸಚಿನ್ ಹಾಗೂ ಸೆಹ್ವಾಗ್ ತಲಾ 6 ದ್ವಿಶತಕ ಬಾರಿಸಿದ್ದರು.

First published:October 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...