ರೋಹಿತ್ ಹಿಂದಿಕ್ಕಿ ದಾಖಲೆ ಬರೆದ ಕೊಹ್ಲಿಗೆ ಈ ಒಂದು ವಿಚಾರದಲ್ಲಿ ಹಿಟ್​ಮ್ಯಾನ್ ಹತ್ತಿರವೂ ಸುಳಿಯಲಾಗಿಲ್ಲ

ಈ ಒಂದು ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರು ಇನ್ನೂ ಹಿಟ್​ಮ್ಯಾನ್​ ಅನ್ನು ಮಿರಿಸಲು ಸಾಧ್ಯವಾಗಿಲ್ಲ. ಅದುವೆ ಅಂತರಾಷ್ಟ್ರೀಯ ಟಿ-20 ಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ.

Vinay Bhat | news18-kannada
Updated:September 19, 2019, 2:56 PM IST
ರೋಹಿತ್ ಹಿಂದಿಕ್ಕಿ ದಾಖಲೆ ಬರೆದ ಕೊಹ್ಲಿಗೆ ಈ ಒಂದು ವಿಚಾರದಲ್ಲಿ ಹಿಟ್​ಮ್ಯಾನ್ ಹತ್ತಿರವೂ ಸುಳಿಯಲಾಗಿಲ್ಲ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
  • Share this:
ಬೆಂಗಳೂರು (ಸೆ. 19): ಮೊಹಾಲಿಯಲ್ಲಿ ನಿನ್ನೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ನಾಯಕ ವಿರಾಟ್ ಕೊಹ್ಲಿ ಅಜೇಯ 72 ರನ್ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಅಲ್ಲದೆ ಕೊಹ್ಲಿ ನೂತನ ದಾಖಲೆಯನ್ನೂ ಮಾಡಿದರು.

52 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಚಚ್ಚಿದ ಕೊಹ್ಲಿ ಅಜೇಯ 72 ರನ್​ ಬಾರಿಸಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಕಲೆಹಾಕಿದ ಆಟಗಾರ ಸಾಧನೆ ಮಾಡಿದರು.

ನಿನ್ನೆಯ ಪಂದ್ಯಕ್ಕೂ ಮೊದಲು ಉಪ ನಾಯಕ ರೋಹಿತ್ ಶರ್ಮಾ ಅವರಿಗಿಂತ 53 ರನ್​​ ಹಿಂದಿದ್ದ ಕೊಹ್ಲಿ(2369) 2ನೇ ಟಿ-20 ಯಲ್ಲಿ 72 ರನ್ ಗಳಿಸಿ 2441 ರನ್​​ಗಳಿಗೆ ಏರಿಸಿಕೊಂಡರು. ಈ ಮೂಲಕ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಂಬರ್ ಒನ್ ಬ್ಯಾಟ್ಸ್​ಮನ್​ ಎನಿಸಿಕೊಂಡರು.

IND vs SA: 2ನೇ ಟಿ-20 ಪಂದ್ಯದಲ್ಲಿ ಎಲ್ಲರನ್ನೂ ಒಮ್ಮೆ ನಿಬ್ಬೆರಗಾಗಿಸಿತ್ತು ಈ ಮೂರು ಘಟನೆ!

ಆದರೆ, ಈ ಒಂದು ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರು ಇನ್ನೂ ಹಿಟ್​ಮ್ಯಾನ್​ ಅನ್ನು ಮಿರಿಸಲು ಸಾಧ್ಯವಾಗಿಲ್ಲ. ಅದುವೆ ಅಂತರಾಷ್ಟ್ರೀಯ ಟಿ-20 ಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ.

ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ರೋಹಿತ್ ಈವರೆಗೆ ಬರೋಬ್ಬರಿ 109 ಸಿಕ್ಸರ್ ಚಚ್ಚಿದ್ದಾರೆ. ಆದರೆ, ಕೊಹ್ಲಿ ಖಾತೆಯಲ್ಲಿ 58 ಸಿಕ್ಸರ್​ಗಳಷ್ಟೆ ಇವೆ. ರೋಹಿತ್​ಗಿಂತ ಇನ್ನೂ 51 ಸಿಕ್ಸರ್​ಗಳ ಹಿನ್ನಡೆಯಲ್ಲಿ ಕೊಹ್ಲಿ ಇದ್ದಾರೆ.

ಗರಿಷ್ಠ ಸಿಕ್ಸ್​ ಬಾರಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರೋಹಿತ್ ಶರ್ಮಾ(109) ಇದ್ದರೆ, ಎರಡನೇ ಸ್ಥಾನ ವೆಸ್ಟ್​ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್(105), 3ನೇ ಸ್ಥಾನ ನ್ಯೂಜಿಲೆಂಡ್​ನ ಮಾರ್ಟಿನ್ ಗುಪ್ಟಿಲ್(103) ಅಲಂಕರಿಸಿದ್ದಾರೆ. ವಿರಾಟ್ ಕೊಹ್ಲಿ 22ನೇ ಸ್ಥಾನದಲ್ಲಿದ್ದಾರೆ.19th September 2007: ಆರು ಎಸೆತ 6 ಸಿಕ್ಸರ್; ಯುವಿ ವಿಶ್ವ ದಾಖಲೆಗೆ 12 ವರ್ಷ!

ಇಷ್ಟೇ ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ರೋಹಿತ್ ಮೂರು ಬಾರಿ ದ್ವಿಶಕ ಗಳಿಸಿದ್ದರೆ, ವಿರಾಟ್ ಗರಿಷ್ಠ ಸ್ಕೋರ್ 183 ಆಗಿದೆ.

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ