Virat Kohli: ಟಿ-20 ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್; ಹಿಟ್​​ಮ್ಯಾನ್​ಗೆ ಶಾಕ್ ನೀಡಿದ ವಿರಾಟ್

ಕೊಹ್ಲಿ ಕ್ರಿಕೆಟ್​ನ ಮೂರೂ ಮಾದರಿಯಲ್ಲೂ ಐವತ್ತಕ್ಕಿಂತ ಹೆಚ್ಚಿನ ಸರಾಸರಿ ಹೊಂದುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 53.14, ಏಕದಿನದಲ್ಲಿ 60.31 ಹಾಗೂ ಟಿ-20 ಕ್ರಿಕೆಟ್​ನಲ್ಲಿ ಕೊಹ್ಲಿ 50.85 ಸರಾಸರಿ ಹೊಂದಿದ್ದಾರೆ.

Vinay Bhat | news18-kannada
Updated:September 19, 2019, 2:33 PM IST
Virat Kohli: ಟಿ-20 ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್; ಹಿಟ್​​ಮ್ಯಾನ್​ಗೆ ಶಾಕ್ ನೀಡಿದ ವಿರಾಟ್
ವಿರಾಟ್ ಕೊಹ್ಲಿ 886 ರೇಟಿಂಗ್ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
  • Share this:
ಬೆಂಗಳೂರು (ಸೆ. 19): ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಕದನದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಅತ್ಯುತ್ತಮ ಬೌಲಿಂಗ್ ದಾಳಿ ಹಾಗೂ ನಾಯಕ ವಿರಾಟ್ ಕೊಹ್ಲಿಯ ಅರ್ಧಶತಕದ ನೆರವಿನಿಂದ ಭಾರತ 7 ವಿಕೆಟ್​ಗಳ ಜಯ ಸಾಧಿಸಿ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣವಾಗಿದ್ದು ವಿರಾಟ್ ಕೊಹ್ಲಿ ಆಟ. ಆಕರ್ಷಕ ಅರ್ಧಶತಕ ಸಿಡಿಸಿ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್​ನೊಂದಿಗೆ ಅಜೇಯ 72 ರನ್ ಚಚ್ಚಿದರು. ಈ ಮೂಲಕ ಕೊಹ್ಲಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಉಪ ನಾಯಕ ರೋಹಿತ್ ಶರ್ಮಾ ದಾಖಲೆ ಮುರಿದಿರುವ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಬ್ಯಾಟ್ಸ್​ಮನ್​ ಎಂಬ ಸಾಧನೆ ಮಾಡಿದ್ದಾರೆ. ರೋಹಿತ್​ಗಿಂತ 53 ರನ್​ ಹಿಂದಿದ್ದ ಕೊಹ್ಲಿ(2369) ನಿನ್ನೆಯ ಪಂದ್ಯದಲ್ಲಿ 72 ರನ್​ಗಳಿಸಿ ಟಿ-20 ಕ್ರಿಕೆಟ್​ನಲ್ಲಿ 2441 ರನ್​ಗಳಿಗೆ ಏರಿಸಿಕೊಳ್ಳುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳಿಸಿರುವ ಬ್ಯಾಟ್ಸ್​ಮನ್​ ಎನಿಸಿಕೊಂಡರು.

India Vs South Africa: ಹರಿಣಗಳೆದರು ಘರ್ಜಿಸಿದ ವಿರಾಟ್; ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ!

 ಇದರ ಜೊತೆಗೆ ಕೊಹ್ಲಿ ಕ್ರಿಕೆಟ್​ನ ಮೂರೂ ಮಾದರಿಯಲ್ಲೂ ಐವತ್ತಕ್ಕಿಂತ ಹೆಚ್ಚಿನ ಸರಾಸರಿ ಹೊಂದುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 53.14, ಏಕದಿನದಲ್ಲಿ 60.31 ಹಾಗೂ ಟಿ-20 ಕ್ರಿಕೆಟ್​ನಲ್ಲಿ ಕೊಹ್ಲಿ 50.85 ಸರಾಸರಿ ಹೊಂದಿದ್ದಾರೆ. ಕೊಹ್ಲಿ ಬಿಟ್ಟರೆ ಮತ್ಯಾವ ಆಟಗಾರ ಮೂರು ಮಾದರಿಯ ಕ್ರಿಕೆಟ್​ನಲ್ಲಿ 50+ ಸರಾಸರಿ ಹೊಂದಿಲ್ಲ.

 

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading