IND vs SA: ಭಾರತಕ್ಕೆ ಕಠಿಣವಾಗಲಿದೆಯ ಎರಡನೇ ಟೆಸ್ಟ್​; ಈ ಒಬ್ಬ ಆಟಗಾರನ ಮೇಲೆ ಎಲ್ಲರ ಕಣ್ಣು!

ಭಾರತಕ್ಕೆ ಈ ಕ್ರೀಡಾಂಗಣ ಅಷ್ಟೊಂದು ಯಶಸ್ಸು ತಂದುಕೊಟ್ಟಿಲ್ಲ. ಇತ್ತ ಆಫ್ರಿಕಾ ಕೂಡ ಮೊದಲ ಟೆಸ್ಟ್​ನ ಸೋಲಿನ ಆಘಾತದಲ್ಲಿದ್ದು, ಗೆಲ್ಲಲೆ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ಭಾರತಕ್ಕೆ 2ನೇ ಟೆಸ್ಟ್​ ಕಬ್ಬಿಣದ ಕಡಲೆಯಂತಾಗಲಿದೆ.

Vinay Bhat | news18-kannada
Updated:October 9, 2019, 10:13 AM IST
IND vs SA: ಭಾರತಕ್ಕೆ ಕಠಿಣವಾಗಲಿದೆಯ ಎರಡನೇ ಟೆಸ್ಟ್​; ಈ ಒಬ್ಬ ಆಟಗಾರನ ಮೇಲೆ ಎಲ್ಲರ ಕಣ್ಣು!
ಟೀಂ ಇಂಡಿಯಾ
Vinay Bhat | news18-kannada
Updated: October 9, 2019, 10:13 AM IST
ಬೆಂಗಳೂರು (ಅ. 09): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಮೊದಲ ಟೆಸ್ಟ್​ನಲ್ಲಿ 203 ರನ್​ಗಳ ಬೃಹತ್ ಗೆಲುವು ದಾಖಲಿಸಿ ವಿಶ್ವಾಸದಲ್ಲರುವ ಕೊಹ್ಲಿ ಪಡೆ ನಾಳೆ (ಅ. 10) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ದ್ವಿತೀಯ ಟೆಸ್ಟ್​ ಆರಂಭಿಸಲಿದೆ.

ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದರು. ಹೀಗಾಗಿ ಭಾರತ ಸುಲಭ ಜಯ ಸಾಧಿಸಿತ್ತು. ಆದರೆ, ಎರಡನೇ ಟೆಸ್ಟ್​ ಭಾರತಕ್ಕೆ ಕಠಿಣವಾಗಲಿದೆ. ಇದಕ್ಕೆ ಕಾರಣ ಎರಡು ವರ್ಷಗಳ ಹಿಂದಿನ ಆ ಪಂದ್ಯ!

India vs South Africa | Virat Kohli and Co. Hoping to Correct Pune Blip in Flawless Streak,
ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬ್ಯಾಟ್ಸ್​ಮನ್​


2017 ರಲ್ಲಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಚೊಚ್ಚಲ ಟೆಸ್ಟ್​ ಪಂದ್ಯಕ್ಕೆ ಆತಿಥ್ಯ ವಹಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 333 ರನ್​​ಗಳಿಂದ ಹೀನಾಯ ಸೋಲು ಕಂಡಿತ್ತು.

Mary Kom: 21 ವರ್ಷದ ಯುವ ಬಾಕ್ಸರ್ ಮಣಿಸಿ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಮೇರಿ ಕೋಮ್

ಎರಡೂ ಇನ್ನಿಂಗ್ಸ್​ಗಳಲ್ಲಿ ಭಾರತೀಯರ ಬ್ಯಾಟಿಂಗ್-ಬೌಲಿಂಗ್ ಸಂಪೂರ್ಣ ವಿಫಲವಾಗಿತ್ತು. ಆಸೀಸ್ ಸ್ಪಿನ್ನರ್ ಸ್ಟೀವ್ ಓಕೀಫ್ ಎರಡೂ ಇನ್ನಿಂಗ್ಸ್​ಗಳಲ್ಲಿ ತಲಾ 6 ವಿಕೆಟ್ ಕಿತ್ತು ಮಾರಕವಾಗಿ ಪರಿಣಮಿಸಿದ್ದರು. ನಾಯಕ ಸ್ಮಿತ್ ಶತಕ ಸಿಡಿಸಿ ಅಬ್ಬರಿಸಿದ್ದರು. ಈ ಮೂಲಕ ಭಾರತ ನೆಲದಲ್ಲಿ ಆಸ್ಟ್ರೇಲಿಯಾ ವಿಶೇಷ ಸಾಧನೆ ಮಾಡಿತ್ತು.

ಹೀಗಾಗಿ ಭಾರತಕ್ಕೆ ಈ ಕ್ರೀಡಾಂಗಣ ಅಷ್ಟೊಂದು ಯಶಸ್ಸು ತಂದುಕೊಟ್ಟಿಲ್ಲ. ಇತ್ತ ಆಫ್ರಿಕಾ ಕೂಡ ಮೊದಲ ಟೆಸ್ಟ್​ನ ಸೋಲಿನ ಆಘಾತದಲ್ಲಿದ್ದು, ಗೆಲ್ಲಲೆ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ಭಾರತಕ್ಕೆ 2ನೇ ಟೆಸ್ಟ್​ ಕಬ್ಬಿಣದ ಕಡಲೆಯಂತಾಗಲಿದೆ.
Loading...

 



ರೋಹಿತ್ ಮೇಲೆ ನಿರೀಕ್ಷೆ: ಟೆಸ್ಟ್​ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಮೊದಲ ಪಂದ್ಯದಲ್ಲೇ ಅಬ್ಬರಿಸಿದ ರೋಹಿತ್ ಶರ್ಮಾ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಮೊದಲ ಟೆಸ್ಟ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ ದಾಖಲೆಯ ಶತಕ ಬಾರಿಸಿದ ಹಿಟ್​ಮ್ಯಾನ್ ಪ್ರದರ್ಶನ 2ನೇ ಟೆಸ್ಟ್​ನಲ್ಲಿ ಯಾವರೀತಿ ಇರಲಿದೆ ಎಂಬುದು ಕುತೂಹಲ.

ಒಂದುವೇಳೆ ರೋಹಿತ್ ಎರಡನೇ ಟೆಸ್ಟ್​ನಲ್ಲೂ ಮಿಂಚಿದ್ದೆ ಆದಲ್ಲಿ ಭಾರತ ಟೆಸ್ಟ್​ ತಂಡದಲ್ಲೂ ಆರಂಭಿಕನಾಗಿ ಖಾಯಂ ಸದಸ್ಯನಾಗಲಿದ್ದಾರೆ. ಇತ್ತ ಮಯಾಂಕ್ ಅಗರ್ವಾಲ್ ಕಳೆದ ಟೆಸ್ಟ್​ನಲ್ಲಿ ದ್ವಿಶತಕದ ಸಾಧನೆ ಮಾಡಿದ್ದರು. ಈ ಸರಣಿಯಿದ್ದಕ್ಕು ಉತ್ತಮ ಪ್ರದರ್ಶನ ನೀಡಿದರೆ ಏಕದಿನ ತಂಡದಲ್ಲೂ ಸ್ಥಾನ ಸಿಕ್ಕರೆ ಅಚ್ಚರಿಯಿಲ್ಲ.

First published:October 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...