(VIDEO): ಜಡೇಜಾ ಅರ್ಧಶತಕದ ಸಂಭ್ರಮಕ್ಕೆ ಡ್ರೆಸ್ಸಿಂಗ್ ರೂಮ್​​ನಲ್ಲಿ ಕೊಹ್ಲಿಯ ಸಖತ್ ಡ್ಯಾನ್ಸ್​

ಜಡೇಜಾ ಮೊದಲ ಇನ್ನಿಂಗ್ಸ್​ನಲ್ಲಿ 119 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ 51 ರನ್ ಕಲೆಹಾಕಿದ್ದರು. ಬೌಲಿಂಗ್​ನಲ್ಲೂ ಕಮಾನ್ ಮಾಡುತ್ತಿರುವ ಜಡ್ಡು 2 ವಿಕೆಟ್ ಕಿತ್ತು ಮಿಂಚಿದ್ದಾರೆ.

Vinay Bhat | news18-kannada
Updated:October 21, 2019, 3:52 PM IST
(VIDEO): ಜಡೇಜಾ ಅರ್ಧಶತಕದ ಸಂಭ್ರಮಕ್ಕೆ ಡ್ರೆಸ್ಸಿಂಗ್ ರೂಮ್​​ನಲ್ಲಿ ಕೊಹ್ಲಿಯ ಸಖತ್ ಡ್ಯಾನ್ಸ್​
ಸಂಭ್ರಮಿಸುತ್ತಿರುವ ವಿರಾಟ್ ಕೊಹ್ಲಿ
  • Share this:
ಬೆಂಗಳೂರು (ಅ. 21): ರಾಂಚಿಯ ಜೆಎಸ್​​ಸಿಎ ಕ್ರೀಡಾಂಗಣದಲ್ಲಿ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ.

ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ರೋಹಿತ್ ಶರ್ಮಾ ದ್ವಿಶತಕ, ರಹಾನೆ ಶತಕ ಹಾಗೂ ಜಡೇಜಾ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 497 ರನ್ ಗಳಿಸಿರುವಾಗ ಡಿಕ್ಲೇರ್ ಮಾಡಿಕೊಂಡಿತ್ತು.

ಸದ್ಯ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಆಫ್ರಿಕಾ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಭಾರತ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿದಾಗ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಮಾಡಿದ ಡ್ಯಾನ್ಸ್​ ಸದ್ಯ ಭಾರೀ ವೈರಲ್ ಆಗುತ್ತಿದೆ.

ಧೋನಿ ಸ್ಥಾನ ತುಂಬಲು ನಾನು ರೆಡಿ ಎಂದ ಟೀಂ ಇಂಡಿಯಾದ ಅವಕಾಶ ವಂಚಿತ ಆಟಗಾರ

ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ವಿಕೆಟ್ ಪಡೆದಾಗ, ಅರ್ಧಶತಕ ಅಥವಾ ಶತಕ ಸಿಡಿಸಿದಾಗ ಖುಷಿಯಲ್ಲಿ ವಿಶೇಷವಾಗಿ ಸಂಭ್ರಮ ಹಂಚಿಕೊಳ್ಳುತ್ತಾರೆ. ಟೀಂ ಇಂಡಿಯಾದ ಆಲ್ರೌಂಡರ್ ಆಟಗಾರ ರವೀಂದ್ರ ಜಡೇಜಾ ಕೂಡ ಅರ್ಧಶತಕ ಬಾರಿಸಿದಾಗ ಅವರು ಅದನ್ನು ಸಂಭ್ರಮಿಸುವ ಪರಿ ಅನೇಕರಿಗೆ ಗೊತ್ತು.

 ಬ್ಯಾಟ್ ಅನ್ನು ಖಡ್ಗದಂತೆ ತಿರುಗಿಸುತ್ತಾ ವಿಶಿಷ್ಟವಾಗಿ ಜಡೇಜಾ ಖುಷಿಹಂಚಿಕೊಳ್ಳುತ್ತಾರೆ. ನಿನ್ನೆ ಕೂಡ ಅರ್ಧಶತಕ ಗಳಿಸಿದ ವೇಳೆ ಜಡ್ಡು ಭಾರತೀಯರಿರುವ ಡ್ರೆಸ್ಸಿಂಗ್ ರೂಮ್​ ಕಡೆ ಮುಖಮಾಡಿ ತಮ್ಮ ಸ್ಟೈಲ್​ನಲ್ಲೇ ಸಂಭ್ರಮಿಸಿದರು.

India vs South Africa, Live Cricket Score: ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ವಿಕೆಟ್ ಕಿತ್ತ ನದೀಂ

ಈ ಸಂದರ್ಭ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಜಡೇಜಾಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಕುದುರೆ ಸವಾರಿ ಕೂಡ ಮಾಡು ಎಂದು ಡ್ಯಾನ್ಸ್​ ಮೂಲಕ ಆಕ್ಷನ್ ಮಾಡಿ ತೋರಿಸಿದ್ದಾರೆ. ಕೊಹ್ಲಿಯ ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  
View this post on Instagram
 

The many moods of Captain @virat.kohli 😁😁👌🏻👌🏻 #TeamIndia #INDvSA @paytm


A post shared by Team India (@indiancricketteam) on


ಜಡೇಜಾ ಮೊದಲ ಇನ್ನಿಂಗ್ಸ್​ನಲ್ಲಿ 119 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ 51 ರನ್ ಕಲೆಹಾಕಿದ್ದರು. ಬೌಲಿಂಗ್​ನಲ್ಲೂ ಕಮಾನ್ ಮಾಡುತ್ತಿರುವ ಜಡ್ಡು 2 ವಿಕೆಟ್ ಕಿತ್ತು ಮಿಂಚಿದ್ದಾರೆ.
First published: October 21, 2019, 12:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading