ಬೆಂಗಳೂರಿನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಟಿ-20 ಪಂದ್ಯ; ಟಿಕೆಟ್ ಬೇಕಾದಲ್ಲಿ ಹೀಗೆ ಮಾಡಿ

ಬೆಳಗ್ಗೆ 10 ಗಂಟೆಗೆ ಮಾರಾಟ ಆರಂಭವಾಗಲಿದ್ದು, ಒಬ್ಬರಿಗೆ ಎರಡು ಟಿಕೆಟ್ ಮಾತ್ರ ವಿತರಿಸಲಾಗುತ್ತಿದೆ. ಟಿಕೆಟ್ ದರ 500 ರೂ. ಯಿಂದ ಆರಂಭವಾಗಿದ್ದು, 10 ಸಾವಿರದ ವರೆಗೆ ಲಭ್ಯವಿದೆ.

Vinay Bhat | news18-kannada
Updated:September 13, 2019, 3:46 PM IST
ಬೆಂಗಳೂರಿನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಟಿ-20 ಪಂದ್ಯ; ಟಿಕೆಟ್ ಬೇಕಾದಲ್ಲಿ ಹೀಗೆ ಮಾಡಿ
ಭಾರತ vs ದ. ಆಫ್ರಿಕಾ
  • Share this:
ಬೆಂಗಳೂರು (ಸೆ. 13): ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಕೊಹ್ಲಿ ಪಡೆ ಹರಿಣಗಳ ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಟಿ-20 ಹಾಗೂ ಟೆಸ್ಟ್ ಸರಣಿ ಆಡಲಿದೆ. ಸೆ. 15 ರಂದು ಧರ್ಮಶಾಲದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ.

2ನೇ ಟಿ-20 ಸೆ. 18, ಮೊಹಾಲಿಯಲ್ಲಿ ಹಾಗೂ ಅಂತಿಮ ಪಂದ್ಯ ಸೆ. 22 ರಂದು ಬೆಂಗಳೂರಿನಲ್ಲಿ ಆಡಲಿದೆ. ಇನ್ನು ಮೊದಲ ಟೆಸ್ಟ್​​ ಅಕ್ಟೋಬರ್ 2 ರಿಂದ ವಿಶಾಖಪಟ್ಟಣಂ ನಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್​ ಅ. 10 ರಂದು ಪುಣೆಯಲ್ಲಿ ಹಾಗೂ ಮೂರನೇ ಟೆಸ್ಟ್​ ಅ. 19 ರಂದು ರಾಂಚಿಯಲ್ಲಿ ನಡೆಯಲಿದೆ.

ಸೆ. 15 ರಂದು ಧರ್ಮಶಾಲದಲ್ಲಿ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕೆ ಆನ್​ಲೈನ್​ನಲ್ಲಿ ಟಿಕೆಟ್ ಮಾರಾಟ ಆರಂಭವಾಗಿದೆ. 'ಪೇಟಿಂ ಇನ್​ಸೈಡರ್'​​​ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್​ ಮಾಡಬಹುದು. ಭಾರತ – ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯದ ಟಿಕೆಟ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಅಂತಿಮ ಟಿ-20 ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರ ಟಿಕೆಟ್​​ ಮಾರಾಟ ಶುಕ್ರವಾರ www.ksca.cricket ವೆಬ್​ಸೈಟ್​ನಲ್ಲಿ ಆರಂಭವಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ಜೇಟ್ಲಿ ಕ್ರೀಡಾಂಗಣ ಮರು ನಾಮಕರಣ ವೇಳೆ ಕೊಹ್ಲಿ-ಅನುಷ್ಕಾ ಕಿಸ್ಸಿಂಗ್; ವಿಡಿಯೋ ವೈರಲ್!

ಬೆಳಗ್ಗೆ 10 ಗಂಟೆಗೆ ಮಾರಾಟ ಆರಂಭವಾಗಿದ್ದು, ಒಬ್ಬರಿಗೆ ಎರಡು ಟಿಕೆಟ್ ಮಾತ್ರ ವಿತರಿಸಲಾಗುತ್ತಿದೆ. ಟಿಕೆಟ್ ದರ 500 ರೂ. ಯಿಂದ ಆರಂಭವಾಗಿದ್ದು, 10 ಸಾವಿರದ ವರೆಗೆ ಲಭ್ಯವಿದೆ. ಸೆ. 16 ರಿಂದ ಕ್ರೀಡಾಂಗಣದ ಬಾಕ್ಸ್‌ ಆಫೀಸ್‌ನಲ್ಲಿ ಟಿಕೆಟ್‌ ಮಾರಾಟ ನಡೆಯಲಿದ್ದು, 500 ರೂ. ಟಿಕೆಟ್‌ಗಳು ಮಾತ್ರ ಮಾರಾಟ ಮಾಡಲಿದೆ.

ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಭಾರತ ತಂಡವಿರಾಟ್ ಕೊಹ್ಲಿ ( ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕೃುಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವದೀಪ್ ಸೈನಿ, ಹಾರ್ದಿಕ್ ಪಾಂಡ್ಯ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading