IND vs SA: ಭಾರತ 4-5 ಸೆಷನ್ಸ್ ಬ್ಯಾಟ್ ಮಾಡಲಿಲ್ಲವೆಂದರೆ ಗೆಲ್ಲೋದು ಕಷ್ಟ: ಚೋಪ್ರಾ

South Africa vs India Test Series: ಸೌತ್ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಪ್ರಯತ್ನದಲ್ಲಿದೆ ಭಾರತ. ಅದರೆ ತಂಡಕ್ಕೆ ಸಮಸ್ಯೆಗಳು ಎಲ್ಲಿ ಇರುವುದು ಎಂಬ ಬಗ್ಗೆ ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.

ಟೀಮ್ ಇಂಡಿಯಾ ಆಟಗಾರರ ಅಭ್ಯಾಸಕ್ಕೆ ಕೋಚ್ ರಾಹುಲ್ ದ್ರಾವಿಡ್ ನೆರವು

ಟೀಮ್ ಇಂಡಿಯಾ ಆಟಗಾರರ ಅಭ್ಯಾಸಕ್ಕೆ ಕೋಚ್ ರಾಹುಲ್ ದ್ರಾವಿಡ್ ನೆರವು

  • Share this:
    ಸೆಂಚೂರಿಯನ್, ಡಿ. 25: ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ (South Africa vs India Test Series) ನಾಳೆಯಿಂದ ನಡೆಯಲಿದೆ. ಹರಿಣಗಳ ನಾಡಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಹಪಾಹಪಿಯಲ್ಲಿ ಟೀಮ್ ಇಂಡಿಯಾ ಇದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ನೆಲದಲ್ಲಿ ಟೆಸ್ಟ್ ಗೆಲುವು ಕಂಡು ವಿಶ್ವದ ನಂಬರ್ ಒನ್ ಟೆಸ್ಟ್ ತಂಡವೆನಿಸಿಕೊಂಡಿರುವ ಭಾರತಕ್ಕೆ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಮಾತ್ರ ಕೈಗೆಟುಕದಂತಾಗಿದೆ. ಈಗ ವಿರಾಟ್ ಕೊಹ್ಲಿ, ಬಿಸಿಸಿಐ ನಡುವಿನ ಜಟಾಪಟಿಯಿಂದ ತಂಡದ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗಿ, ಅದು ಆಟದಲ್ಲಿ ವ್ಯಕ್ತವಾದಲ್ಲಿ ಈ ಬಾರಿಯೂ ಭಾರತಕ್ಕೆ ನಿರಾಸೆ. ಅದೆಲ್ಲವನ್ನೂ ಒತ್ತಟ್ಟಿಗೆ ಇಟ್ಟು ನೋಡುವುದಾದರೆ ಟೀಮ್ ಇಂಡಿಯಾದ ಬಲವೇನು, ದೌರ್ಬಲ್ಯ ಏನು ಎಂಬುದನ್ನು ಅಂದಾಜಿಸಬಹುದು. ಭಾರತ ತಂಡದ ಮಾಜಿ ಆಟಗಾರ ಹಾಗೂ ಸದ್ಯ ಕ್ರಿಕೆಟ್ ವಿಶ್ಲೇಷಕರಾಗಿರುವ ಆಕಾಶ್ ಚೋಪ್ರಾ (Aakash Chopra) ಅವರು ಸೌತ್ ಆಫ್ರಿಕಾ ನೆಲದಲ್ಲಿ ಟೆಸ್ಟ್ ಗೆಲುವಿಗೆ ಏನು ಮಾಡಬೇಕು ಎಂದು ಕೆಲ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

    ಆರಂಭಿಕರ ಪಾತ್ರ ಬಹಳ ಮುಖ್ಯ:

    ಸೌತ್ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಪಂದ್ಯಗಳನ್ನ ಗೆಲ್ಲಬೇಕಾದರೆ ಒಳ್ಳೆಯ ಆರಂಭ ಬಹಳ ಮುಖ್ಯ. ಹೀಗಾಗಿ, ಆರಂಭಿಕ ಬ್ಯಾಟುಗಾರರ ಪಾತ್ರ ಮಹತ್ವದ್ದು ಎಂದು ಆಕಾಶ್ ಚೋಪ್ರಾ ಹೇಳುತ್ತಾರೆ.

    “ಕಳೆದ ಬಾರಿ ಭಾರತ ಸೌತ್ ಆಫ್ರಿಕಾ ಪ್ರವಾಸ ಮಾಡಿದಾಗ ತಂಡದ ಆರಂಭ ಉತ್ತಮವಿರಲಿಲ್ಲ. ಆರಂಭಿಕ ಆಟಗಾರರು ಚೆನ್ನಾಗಿ ಆಡಲಿಲ್ಲವೆಂದರೆ ತಂಡವೂ ಚೆನ್ನಾಗಿ ಆಡುವುದಿಲ್ಲ. ಇಂಗ್ಲೆಂಡ್​ನಲ್ಲಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಆರಂಭಿಕ ಬ್ಯಾಟುಗಾರರಾಗಿ ಸ್ಥಿರ ಪ್ರದರ್ಶನ ತೋರಿದ್ದರಿಂದ ಆ ಟೆಸ್ಟ್ ಸರಣಿಯಲ್ಲಿ ನಾವು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು. ಇಲ್ಲಿ ಆ ಜೋಡಿ ಇಲ್ಲದಿರುವುದು ಸಮಸ್ಯೆ ಆಗಬಹುದು” ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ತಿಳಿಸಿದ್ಧಾರೆ.

    ಇದನ್ನೂ ಓದಿ: Harbhajan singh: ಎಲ್ಲಾ ಮಾದರಿಯ ಕಿಕ್ರೆಟ್​ಗೆ ಸ್ಪಿನ್​ ಮಾಂತ್ರಿಕ ಹರ್ಭಜನ್​ ಸಿಂಗ್​ ನಿವೃತ್ತಿ

    ರೋಹಿತ್ ಶರ್ಮಾ ಮುಂಬೈನಲ್ಲಿ ಅಭ್ಯಾಸ ನಡೆಸುವ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದರಿಂದ ಟೆಸ್ಟ್ ಸರಣಿಗೆ ಅಲಭ್ಯರಿದ್ಧಾರೆ. ಅವರ ಬದಲು ಮಯಂಕ್ ಅಗರ್ವಾಲ್ ಅವರು ಕೆಎಲ್ ರಾಹುಲ್ ಜೊತೆ ಸೇರಿ ಇನಿಂಗ್ಸ್ ಆರಂಭ ಮಾಡಲಿದ್ಧಾರೆ.

    “ಈಗ ರಾಹುಲ್ ಜೊತೆ ಮಯಂಕ್ ಇನ್ನಿಂಗ್ಸ್ ಓಪನ್ ಮಾಡತ್ತಾರೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳ ಮೂಲಕ ಈ ಇಬ್ಬರೂ ಆಟಗಾರರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಈಗ ಅದೇ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಒಟ್ಟಿಗೆ ಸೇರಿದ್ದಾರೆ. ಈ ಮಧ್ಯೆ ಶುಬ್ಮನ್ ಗಿಲ್, ರೋಹಿತ್ ಶರ್ಮಾ ಮತ್ತು ಪೃಥ್ವಿ ಶಾ ಅವರು ಇನ್ನಿಂಗ್ಸ್ ಆರಂಭ ಮಾಡಿದ್ದಾರೆ” ಎಂದು ಆಕಾಶ್ ಚೋಪ್ರಾ ಟೀಮ್ ಇಂಡಿಯಾದ ಓಪನಿಂಗ್ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

    4-5 ಸೆಷೆನ್ಸ್ ಬ್ಯಾಟ್ ಮಾಡಲಿಲ್ಲವೆಂದರೆ ಗೆಲುವು ಕಷ್ಟ:

    2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಸರಣಿ ಆಡಿತ್ತು. ಆಗ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಬೇರೆ ಯಾವುದೇ ಬ್ಯಾಟುಗಾರನೂ ಸೌತ್ ಆಫ್ರಿಕನ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಭಾರತ ಆ ಸರಣಿಯನ್ನ 1-2ರಿಂದ ಬಿಟ್ಟುಕೊಡಬೇಕಾಯಿತು. ಆ ಸರಣಿಯನ್ನ ಆಕಾಶ್ ಚೋಪ್ರಾ ಸ್ಮರಿಸುತ್ತಾ ಟೀಮ್ ಇಂಡಿಯಾಗೆ ಕಿವಿಮಾತು ಹೇಳಿದ್ಧಾರೆ.

    ಇದನ್ನೂ ಓದಿ: IND vs SA- ದಕ್ಷಿಣ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲುವ ಟ್ರಿಕ್ಸ್ ಬಿಚ್ಚಿಟ್ಟ ಮಾಜಿ ಆಟಗಾರ ವಾಸಿಂ ಜಾಫರ್

    “ಕಳೆದ ಬಾರಿ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಸ್ಕೋರರ್ ಎನಿಸಿದ್ದರು. ಮೂರು ಪಂದ್ಯಗಳಲ್ಲಿ ಅವರು 47ರ ಸರಾಸರಿಯಂತೆ 286 ರನ್ ಗಳಿಸಿದರು. ಬೇರೆ ಬ್ಯಾಟುಗಾರರು ರನ್ ಗಳಿಸಲು ವಿಫಲವಾಗಿದ್ದು ಸಮಸ್ಯೆ ಆಯಿತು. ನೀವು ನಾಲ್ಕು ಅಥವಾ ಐದು ಸೆಷೆನ್ಸ್ ಬ್ಯಾಟ್ ಮಾಡಲಿಲ್ಲವೆಂದರೆ ಗೆಲುವು ಬಹಳ ಕಷ್ಟ. ಕಳೆದ ಬಾರಿ ಭಾರತಕ್ಕೆ ಮೂರು ಸೆಷನ್ಸ್ ಕೂಡ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ” ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

    ಟೀಮ್ ಇಂಡಿಯಾಗೆ ಸಮಸ್ಯೆ ಇರುವುದು ಬ್ಯಾಟಿಂಗ್​ನಲ್ಲಿ ಮಾತ್ರ. ಅದರ ಬೌಲಿಂಗ್ ಲೈನಪ್ ಚೆನ್ನಾಗಿದೆ ಎಂಬುದು ಆಕಾಶ್ ಚೋಪ್ರಾ ಅನಿಸಿಕೆ. ನಿನ್ನೆ ಮತ್ತೊಬ್ಬ ಮಾಜಿ ಆಟಗಾರ ವಾಸಿಂ ಜಾಫರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
    Published by:Vijayasarthy SN
    First published: