ಟಿ-20 ಆಯ್ತು ಸದ್ಯ ಕೊಹ್ಲಿ ಮುಂದಿದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ 2ನೇ ಕದನ; ಯಾವಾಗ?, ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

ಅ. 26 ರಿಂದ 28 ವರೆಗೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡವನ್ನು ನಾಯಕನಾಗಿ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

Vinay Bhat | news18-kannada
Updated:September 23, 2019, 12:53 PM IST
ಟಿ-20 ಆಯ್ತು ಸದ್ಯ ಕೊಹ್ಲಿ ಮುಂದಿದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ 2ನೇ ಕದನ; ಯಾವಾಗ?, ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ
ಭಾರತ vs ದ. ಆಫ್ರಿಕಾ
  • Share this:
ಬೆಂಗಳೂರು (ಸೆ. 23): ಟೀಂ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಎರಡನೇ ಕದನಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಸಮಬಲ ಸಾಧಿಸಿರುವ ಕೊಹ್ಲಿ ಪಡೆ ಟೆಸ್ಟ್ ಸರಣಿಗೆ ತಯಾರು ಮಾಡುತ್ತಿದೆ.

ಈಗಾಗಲೇ ವೆಸ್ಟ್​ ಇಂಡೀಸ್ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದು ಬೀಗಿರುವ ಭಾರತ 120 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಮುಂದಿನ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್​ ಆಡಲಿದೆ.

ಅಕ್ಟೋಬರ್ 2 ರಿಂದ ಅ. 6 ವರೆಗೆ ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ. 2ನೇ ಪಂದ್ಯ ಅ. 10 ರಿಂದ ಅ. 14 ವರೆಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದರೆ, ಅಂತಿಮ ಮೂರನೇ ಟೆಸ್ಟ್​ ಅ. 19 ರಿಂದ ಅ. 23 ವರೆಗೆ ರಾಂಚಿಯ ಜೆಎಸ್​ಸಿಎ ಕ್ರೀಡಾಂಗಣದಲ್ಲಿ ಆಡಲಿದೆ.

IND vs SA: ಧವನ್ ಔಟ್ ಆದ ಬೆನ್ನಲ್ಲೆ ಬ್ಯಾಟ್ ಬೀಸಲು ಜೊತೆಯಾಗಿ ಬಂದ ಪಂತ್-ಐಯರ್; ಕಾರಣವೇನು ಗೊತ್ತಾ?

ಇದಕ್ಕೂ ಮೊದಲು ಅ. 26 ರಿಂದ 28 ವರೆಗೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡವನ್ನು ನಾಯಕನಾಗಿ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

ಈಗಾಗಲೇ ಟೆಸ್ಟ್​ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಕೆ ಎಲ್ ರಾಹುಲ್​ಗೆ ಕೊಕ್ ನೀಡಲಾಗಿದೆ. ಭಾರತ ಎ ತಂಡದಲ್ಲಿ ಮಿಂಚುತ್ತಿರುವ ಶುಭ್ಮನ್ ಗಿಲ್​ಗೆ ಅವಕಾಶ ನೀಡಲಾಗಿದೆ. ಅಲ್ಲದೆ ರೋಹಿತ್ ಶರ್ಮಾ ಅವರು ಮಯಾಂಕ್ ಅಗರ್ವಾಲ್ ಜೊತೆ ಆರಂಭಿಕರಾಗಿ ಆಡಲಿದ್ದಾರೆಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಸ್ಪಷ್ಟ ಪಡಿಸಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್​ ಅಗರ್​ವಾಲ್​, ರೋಹಿತ್​ ಶರ್ಮಾ, ಚೇತೇಶ್ವರ​ ಪೂಜಾರ್, ಅಜಿಂಕ್ಯಾ ರಹಾನೆ (ಉಪ-ನಾಯಕ), ಹನುಮ ವಿಹಾರಿ, ರಿಷಬ್​ ಪಂತ್​ (ವಿಕೆಟ್​ ಕೀಪರ್​), ವೃದ್ಧಿಮಾನ್​ ಸಾಹ, (ವಿಕೆಟ್​ ಕೀಪರ್​), ರವಿಚಂದ್ರನ್​ ಅಶ್ವಿನ್​, ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​, ಮೊಹ್ಮದ್​ ಶಮಿ, ಜಸ್ಪ್ರೀತ್​ ಬುಮ್ರಾ, ಇಶಾಂತ್​ ಶರ್ಮಾ, ಶುಭ್​ಮನ್​​ ಗಿಲ್​.ದಕ್ಷಿಣ ಆಫ್ರಿಕಾ ತಂಡ: ಫಾಪ್ ಡುಪ್ಲೆಸಿಸ್ (ನಾಯಕ), ತೆಂಬ ಬವುಮಾ (ಉಪ- ನಾಯಕ), ಥೆನಿಸ್ ಡಿ ಬ್ರ್ಯೂನ್, ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್), ಡ್ಯಾನ್ ಎಲ್ಗರ್, ಜುಬೈರ್ ಹಂಜಾ, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹರಾಜ್, ಆ್ಯಡೆನ್ ಮರ್ಕ್ರಮ್, ಸೆನುರನ್ ಮುತ್ತುಸ್ವಾಮಿ, ಲುಂಗಿ ಎನ್​ಗಿಡಿ, ಆ್ಯನ್ರಿಚ್ ನಾರ್ಟ್ಜ್​, ವೆರ್ನನ್ ಫಿಲಿಂಡರ್, ಡೇನ್ ಪಿಡ್ಟ್​, ಕಗಿಸೊ ರಬಾಡ.

First published: September 23, 2019, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading