• Home
  • »
  • News
  • »
  • sports
  • »
  • Team India: ಕೆರಿಬಿಯನ್ ಪ್ರವಾಸ ಅಂತ್ಯ; ಮುಂದಿದೆ ಕೊಹ್ಲಿ ಪಡೆಗೆ ಬಹುದೊಡ್ಡ ಸವಾಲು!

Team India: ಕೆರಿಬಿಯನ್ ಪ್ರವಾಸ ಅಂತ್ಯ; ಮುಂದಿದೆ ಕೊಹ್ಲಿ ಪಡೆಗೆ ಬಹುದೊಡ್ಡ ಸವಾಲು!

ಅಂತಿಮ ಮೂರನೇ ಏಕದಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಾರ್ಚ್ 18 ರಂದು ನಡೆಯಲಿದೆ.

ಅಂತಿಮ ಮೂರನೇ ಏಕದಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಾರ್ಚ್ 18 ರಂದು ನಡೆಯಲಿದೆ.

2020 ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗಾಗಿ ಟೀಂ ಇಂಡಿಯಾವನ್ನು ಬಲಿಷ್ಠ ಮಾಡುವತ್ತ ಬಿಸಿಸಿಐ ಚಿತ್ತ ನೆಟ್ಟಿದೆ. ಹೀಗಾಗಿ ಯುವ ಆಟಗಾರರಿಗೆ ಮಣೆ ಹಾಕಿದೆ.

  • Share this:

ಬೆಂಗಳೂರು (ಸೆ. 04): ವೆಸ್ಟ್​ ಇಂಡೀಸ್ ಪ್ರವಾಸವನ್ನು ಅಂತ್ಯಗೊಳಿಸಿರುವ ಟೀಂ ಇಂಡಿಯಾ ಟಿ-20, ಏಕದಿನ ಹಾಗೂ ಟಿಸ್ಟ್​ ಸರಣಿಯನ್ನೆಲ್ಲಾ ವಶ ಪಡಿಸಿಕೊಂಡಿದೆ. ಸದ್ಯ ತವರೊಗೆ ಮರಳಿರುವ ಕೊಹ್ಲಿ ಪಡೆ ಕಲೆ ದಿನಗಳ ವಿಶ್ರಾಂತಿ ಪಡೆಯಲಿದೆ.

ಇದಾದ ಬೆನ್ನಲ್ಲೆ ಸೆ. 15 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಮತ್ತೊಂದು ಬಹುದೊಡ್ಡ ಸವಾಲು ಎದುರಿಸಲಿದೆ. ಟೀಂ ಇಂಡಿಯಾ ದ. ಆಫ್ರಿಕಾ ವಿರುದ್ಧ 3 ಟಿ-20 ಹಾಗೂ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡಲಿದೆ.

ಈಗಾಗಲೇ ಸೌತ್ ಆಫ್ರಿಕಾ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಟಿ-20 ತಂಡವನ್ನು ಕ್ವಿಂಟನ್ ಡಿಕಾಕ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಡೇವಿಡ್ ಮಿಲ್ಲರ್, ವಂಡರ್ ಡಸ್ಸೆನ್, ಕಗಿಸೋ ರಬಾಡ, ಫೆಹ್ಲುಕ್ವಾಯೊ ರಂತಹ ಘಟಾನುಘಟಿ ಆಟಗಾರರು ತಂಡದಲ್ಲಿದ್ದಾರೆ.

ಇತ್ತ ಹರಿಣಗಳ ವಿರುದ್ಧದ ಟಿ-20 ಬೇಟೆಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಯುವ ಆಟಗಾರರಿಗೆ ಪ್ರಾಮುಖ್ಯತೆ ನೀಡಲಾಗಿದೆ. ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಎಂ ಎಸ್ ಧೋನಿ ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.

ಕ್ರೀಸ್ ಕಚ್ಚಿ ನಿಂತಿದ್ದ ವಿಂಡೀಸ್ ಆಟಗಾರನನ್ನು ಕೊಹ್ಲಿ ಪೆವಿಲಿಯನ್​ಗೆ ಅಟ್ಟಿದ್ದು ಈಗ ವೈರಲ್!

2020 ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗಾಗಿ ಟೀಂ ಇಂಡಿಯಾವನ್ನು ಬಲಿಷ್ಠ ಮಾಡುವತ್ತ ಬಿಸಿಸಿಐ ಚಿತ್ತ ನೆಟ್ಟಿದೆ. ಹೀಗಾಗಿ ಯುವ ಆಟಗಾರರಿಗೆ ಮಣೆ ಹಾಕಿದೆ.

ದ. ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಭಾರತ ತಂಡ: ವಿರಾಟ್ ಕೊಹ್ಲಿ ( ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕೃುಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವದೀಪ್ ಸೈನಿ, ಹಾರ್ದಿಕ್ ಪಾಂಡ್ಯ.

ಭಾರತ-ದಕ್ಷಿಣ ಆಫ್ರಿಕಾ ಪಂದ್ಯಗಳ ವೇಳಾಪಟ್ಟಿ

ದಿನಾಂಕಪಂದ್ಯಸಮಯ
ಸೆ. 15, ಆದಿತ್ಯವಾರಮೊದಲ ಟಿ-20, ಧರ್ಮಶಾಲಸಂಜೆ 7 ಗಂಟೆಗೆ
ಸೆ. 18, ಬುಧವಾರಎರಡನೇ ಟಿ-20, ಮೊಹಾಲಿಸಂಜೆ 7 ಗಂಟೆಗೆ
ಸೆ. 22, ಆದಿತ್ಯವಾರಮೂರನೇ ಟಿ-20, ಬೆಂಗಳೂರುಸಂಜೆ 7 ಗಂಟೆಗೆ
ಅ. 02- ಅ. 06ಮೊದಲ ಟೆಸ್ಟ್​​, ವಿಶಾಖಪಟ್ಟಣಂಬೆಳಗ್ಗೆ 9:30ಕ್ಕೆ
ಅ. 10- ಅ. 14ಎರಡನೇ ಟೆಸ್ಟ್, ಪುಣೆಬೆಳಗ್ಗೆ 9:30ಕ್ಕೆ
ಅ. 19- ಅ. 23ಮೂರನೇ ಟೆಸ್ಟ್, ರಾಂಚಿಬೆಳಗ್ಗೆ 9:30ಕ್ಕೆ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಿ

First published: