Rohit Sharma: ವೈಜಾಗ್​ನಲ್ಲಿ ಇತಿಹಾಸ ಸೃಷ್ಟಿಸಿದ ಹಿಟ್​ಮ್ಯಾನ್; 1994ರ ದಾಖಲೆ 2019ರಲ್ಲಿ ಉಡೀಸ್

ಈ ಹಿಂದೆ 1994 ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್​ ಪಂದ್ಯವೊಂದರಲ್ಲಿ ನವ್​ಜೋತ್ ಸಿಂಗ್ ಸಿಧು 8 ಸಿಕ್ಸ್ ಬಾರಿಸಿದ್ದರು. ಸದ್ಯ ರೋಹಿತ್ 10 ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ಪುಡಿ ಮಾಡಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • Share this:
ಬೆಂಗಳೂರು (ಅ. 05): ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. 431 ರನ್​ಗೆ ಹರಿಣಗಳನ್ನು ಆಲೌಟ್ ಮಾಡಿ 2ನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಬೃಹತ್ ಮುನ್ನಡೆಯತ್ತ ದಾಪುಗಾಲಿಡುತ್ತಿದೆ.

ಈ ನಡುವೆ ಹಿಟ್​ಮ್ಯಾನ್ ರೋಹಿತ್ ಇತಿಹಾಸ ಸೃಷ್ಟಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ 6 ಸಿಕ್ಸರ್ ಸಿಡಿಸಿದ್ದ ರೋಹಿತ್ ಸದ್ಯ ಎರಡನೇ ಇನ್ನಿಂಗ್ಸ್​ನಲ್ಲೂ 4 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಬ್ಯಾಟ್​​ನಿಂದ 3ನೇ ಸಿಕ್ಸರ್ ಸಿಡಿಯುತ್ತಿದ್ದಂತೆ ಮಹತ್ವದ ದಾಖಲೆ ನಿರ್ಮಾಣವಾಗಿದೆ.

 India vs South Africa Live Score: 2ನೇ ಇನ್ನಿಂಗ್ಸ್​ನಲ್ಲೂ ಭರ್ಜರಿ ಶತಕ ಸಿಡಿಸಿ ರೋಹಿತ್ ಔಟ್; ಬೃಹತ್ ಮುನ್ನಡೆಯತ್ತ ಭಾರತ

ಈ ಹಿಂದೆ 1994 ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್​ ಪಂದ್ಯವೊಂದರಲ್ಲಿ ನವ್​ಜೋತ್ ಸಿಂಗ್ ಸಿಧು 8 ಸಿಕ್ಸ್ ಬಾರಿಸಿದ್ದರು. ಸದ್ಯ ರೋಹಿತ್ 10 ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ಪುಡಿ ಮಾಡಿದ್ದಾರೆ. ಅಲ್ಲದೆ ಮೂರು ಮಾದರಿಯ ಕ್ರಿಕೆಟ್​ನ ಇನ್ನಿಂಗ್ಸ್​ ಒಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿರುವ ಏಕೈಕ ಭಾರತೀಯ ಬ್ಯಾಟ್ಸ್​ಮನ್​ ಎಂಬ ಸಾಧನೆ ರೋಹಿತ್ ಮಾಡಿದ್ದಾರೆ.

ಜೊತೆಗೆ ಟೆಸ್ಟ್​​ನಲ್ಲಿ ಓಪನರ್ ಆಗಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್​ಮನ್​ ರೋಹಿತ್ ಆಗಿದ್ದಾರೆ. ಟೆಸ್ಟ್​ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ರೋಹಿತ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ 25 ವರ್ಷದ ಹಳೆಯ ದಾಖಲೆಯನ್ನು ಹಿಟ್​ಮ್ಯಾನ್ ನೆಲಸಮ ಮಾಡಿದ್ದಾರೆ.

ಆಫ್ರಿಕಾ ವಿರುದ್ಧ ಟೆಸ್ಟ್ ಆಡುತ್ತಿರುವ ಉಪ ನಾಯಕನಿಗೆ ಗುಡ್​ನ್ಯೂಸ್; ಹೆಣ್ಣು ಮಗುವಿಗೆ ತಂದೆಯಾದ ರಹಾನೆ

ಸದ್ಯ ದಕ್ಷಿಣ ಆಫ್ರಿಕಾವನ್ನು 431 ರನ್​ಗಳಿಗೆ ಆಲೌಟ್ ಮಾಡಿ 2ನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಭರ್ಜರಿ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. 71 ರನ್​ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್​ನಲ್ಲಿ ಭಾರತ ಪರ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

 

First published: