• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಇತಿಹಾಸ ಸೃಷ್ಟಿಸಿದ ರೋ’ಹಿಟ್​’; ಭಾರತೀಯ ಎಲ್ಲಾ ಆಟಗಾರರ ದಾಖಲೆ ಧೂಳಿಪಟ ಮಾಡಿದ ಹಿಟ್​ಮ್ಯಾನ್​!

ಇತಿಹಾಸ ಸೃಷ್ಟಿಸಿದ ರೋ’ಹಿಟ್​’; ಭಾರತೀಯ ಎಲ್ಲಾ ಆಟಗಾರರ ದಾಖಲೆ ಧೂಳಿಪಟ ಮಾಡಿದ ಹಿಟ್​ಮ್ಯಾನ್​!

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಕೊಹ್ಲಿ ಪಡೆ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೇ ಅದ್ಭುತ ಪ್ರದರ್ಶನ ತೋರುತ್ತಿದೆ. ರೋಹಿತ್ ದ್ವಿಶತಕದ ಮೇಲೆ ಕಣ್ಣಿಟ್ಟಿದ್ದು, ಮಯಾಂಕ್ ಅಗರ್ವಾಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.

  • Share this:

ಬೆಂಗಳೂರು (ಅ. 03): ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಟಿ-20, ಏಕದಿನ ಕ್ರಿಕೆಟ್​ನಲ್ಲಿ ರನ್ ಮಳೆಯನ್ನೇ ಸುರಿಸುತ್ತಿರುವ ಹಿಟ್​​ಮ್ಯಾನ್ ಈಗ ಟೆಸ್ಟ್​ಗೂ ಕಾಲಿಟ್ಟಿದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಸದ್ಯ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ರೋಹಿತ್ ಶರ್ಮಾ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಸುಮಾರು 9 ತಿಂಗಳ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟ ರೋಹಿತ್ ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಸೆಂಚುರಿ ಸಿಡಿಸಿದರು.

Rohit Sharma Equals Don Bradman's Average With 4th Test Century
ಶತಕ ಬಾರಿಸಿದ ವೇಳೆ ಸಂಭ್ರಮಿಸುತ್ತಿರುವ ರೋಹಿತ್ ಶರ್ಮಾ


ನಿನ್ನೆ ಮೊದಲ ದಿನ 154 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಅಮೋಘ ಸಿಕ್ಸ್​ನೊಂದಿಗೆ ಅಂತರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ನಲ್ಲಿ 4ನೇ ಶತಕ ಬಾರಿಸಿದರು. ಈ ಮೂಲಕ ಭಾರತೀಯ ಎಲ್ಲಾ ಆರಂಭಿಕ ಆಟಗಾರರ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

India vs South Africa Live Score: ಟೆಸ್ಟ್​ ಕ್ರಿಕೆಟ್​ನಲ್ಲಿ ಅಗರ್ವಾಲ್ ಚೊಚ್ಚಲ ಶತಕ; ಬೃಹತ್ ಮೊತ್ತದತ್ತ ಭಾರತ

ಹಿಟ್​ಮ್ಯಾನ್ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಓಪನರ್ ಎಂಬ ಸಾಧನೆ ಮಾಡಿದ್ದಾರೆ. ಏಕದಿನ, ಟಿ-20 ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಕ್ರೀಸ್​ಗಿಳಿದು ಶತಕ ಸಿಡಿಸಿದ ಏಕೈಕ ಟೀಂ ಇಂಡಿಯಾ ಆಟಗಾರ ರೋಹಿತ್ ಆಗಿದ್ದಾರೆ.

ಇಷ್ಟೇ ಅಲ್ಲದೆ ಆಸ್ಟ್ರೇಲಿಯಾ ಲೆಜೆಂಡ್ ಕ್ರಿಕೆಟಿಗ ಡ್ರಾನ್ ಬ್ರಾಡ್ಮನ್ ಅವರ ದಾಖಲೆಯನ್ನೂ ರೋಹಿತ್ ಸರಿಗಟ್ಟಿದ್ದಾರೆ. ಬ್ರಾಡ್ಮನ್ ತವರಿನಲ್ಲಾಡಿದ ಟೆಸ್ಟ್​ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 98.22 ಸರಾಸರಿ ಹೊಂದಿ ದಾಖಲೆ ಬರೆದಿದ್ದರು.

 


ಸದ್ಯ ರೋಹಿತ್ ಕೂಡ ಶತಕ ಬಾರಿಸಿ ಮುನ್ನುಗ್ಗುವ ಮೂಲಕ 98.22 ಸರಾಸರಿ ಹೊಂದಿ, ತವರು ನೆಲದಲ್ಲಿ ಅತೀ ಹೆಚ್ಚು ಸರಾಸರಿ ಹೊಂದಿದ್ದ ಬ್ರಾಡ್ಮನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಒಟ್ಟಾರೆ ಕೊಹ್ಲಿ ಪಡೆ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೇ ಅದ್ಭುತ ಪ್ರದರ್ಶನ ತೋರುತ್ತಿದೆ. ರೋಹಿತ್ ದ್ವಿಶತಕದ ಮೇಲೆ ಕಣ್ಣಿಟ್ಟಿದ್ದು, ಮಯಾಂಕ್ ಅಗರ್ವಾಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಬೃಹತ್ ಮೊತ್ತದತ್ತ ಭಾರತ ದಾಪುಗಾಲಿಡುತ್ತಿದೆ.

ವಿಡಿಯೋ ಕೃಪೆ: CricBuzz

First published: