(VIDEO): IND vs SA; ರೋಹಿತ್ ಶರ್ಮಾ ಔಟ್ ಆಗಿ ಪೆವಿಲಿಯನ್ ಹೋದಾಗ ಕೊಹ್ಲಿ ಮಾಡಿದ್ದೇನು ಗೊತ್ತಾ?

ಸದ್ಯ ಭಾರತ 500 ರನ್​ನತ್ತ ದಾಪುಗಾಲಿಡುತ್ತಿದೆ. ಮಯಾಂಕ್ ಅಗರ್ವಾಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ 215 ರನ್​ಗೆ ಔಟ್ ಆಗಿದ್ದಾರೆ.

ಔಟ್ ಆದ ವೇಳೆ ಪೆವಿಲಿಯನ್ ಕಡೆ ಸಾಗುತ್ತಿರುವ ರೋಹಿತ್ ಶರ್ಮಾ

ಔಟ್ ಆದ ವೇಳೆ ಪೆವಿಲಿಯನ್ ಕಡೆ ಸಾಗುತ್ತಿರುವ ರೋಹಿತ್ ಶರ್ಮಾ

  • Share this:
ಬೆಂಗಳೂರು (ಅ. 03): ಟೆಸ್ಟ್​ ಕ್ರಿಕೆಟ್​ನಲ್ಲೂ ಓಪನರ್ ಆಗಿ ಯಶಸ್ಸು ಸಾಧಿಸಿದ ರೋಹಿತ್ ಶರ್ಮಾ ಅಮೋಘ ಶತಕ ಬಾರಿಸಿ ದ್ವಿಶತಕದ ಅಂಚಿನಲ್ಲಿ ಎಡವಿದರು. ಮಯಾಂಕ್ ಅಗರ್ವಾಲ್ ಜೊತೆಗೂಡಿ ದಾಖಲೆಯ ಜೊತೆಯಾಟ ಆಡಿದ ರೋಹಿತ್ 176 ರನ್ ಚಚ್ಚಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ​ ಮೂಲಕ ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿ ಆರಂಭಿಕನಾಗಿ ಕಣಕ್ಕಿಳಿದ ಹಿಟ್​ಮ್ಯಾನ್​ ಇತಿಹಾಸ ಸೃಷ್ಟಿಸಿದರು. ಟಿ-20, ಏಕದಿನ ಹಾಗೂ ಟೆಸ್ಟ್​ ಹೀಗೆ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಸೆಂಚುರಿ ಸಿಡಿಸಿದ ಏಕೈಕ ಟೀಂ ಇಂಡಿಯಾ ಆರಂಭಿಕ ಆಟಗಾರ ಎಂಬ ಅಪರೂಪದ ಸಾಧನೆಯನ್ನು ರೋಹಿತ್ ಮಾಡಿದರು.

ಅಮೋಘ ಆಟ ಪ್ರದರ್ಶಿಸಿದ ರೋಹಿತ್ 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸ್​ ಸಿಡಿಸಿ 176 ರನ್ ಚಚ್ಚಿದರು. ಔಟ್ ಆಗಿ ಮೈದಾನ ತೊರೆಯುತ್ತಿದ್ದಂತೆ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ರೋಹಿತ್​ಗೆ ಅಭಿನಂದನೆ ಸಲ್ಲಿದರು.

India vs South Africa: Faf du Plessis wins hearts with sportsmanship after Rohit Sharma’s dismissal
ರೋಹಿತ್ ಶರ್ಮಾ ಔಟ್ ಆದ ವೇಳೆ ಅಭಿನಂದಿಸುತ್ತಿರುವ ಆಫ್ರಿಕಾ ತಂಡದ ನಾಯಕ ಫಾಫ್ ಡುಪಲ್ಎಸಿಸ್


ಅಲ್ಲದೆ ಪೆವಿಲಿಯನ್ ಹೋದಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡೋರ್ ಪಕ್ಕ ನಿಂತು ರೋಹಿತ್​ ಬೆನ್ನತಟ್ಟುತ್ತಾ ಅತ್ಯುತ್ತಮ ಆಟವಾಡಿದೆ ಎಂಬಂತೆ ಬೇಷ್ ಎಂದರು.

ಕೊಹ್ಲಿ, ರೋಹಿತ್​​ರನ್ನು ಬರಮಾಡಿಕೊಂಡ ವಿಡಿಯೋವನ್ನು ಭಾರತ ಕ್ರಿಕೆಟ್ ತಂಡ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಅಭಿಮಾನಿಗಳು ಕೊಹ್ಲಿಯ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  
View this post on Instagram
 

🔝knock from @rohitsharma45 👏🏻👏🏻 The dressing room acknowledges #TeamIndia 🇮🇳 #INDvSA


A post shared by Team India (@indiancricketteam) on


ಸದ್ಯ ಭಾರತ 500 ರನ್​ನತ್ತ ದಾಪುಗಾಲಿಡುತ್ತಿದೆ. ಮಯಾಂಕ್ ಅಗರ್ವಾಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ 215 ರನ್​ಗೆ ಔಟ್ ಆಗಿದ್ದಾರೆ.

 

First published: