Rohit Sharma: ಚೆಂಡನ್ನು ಸಿಕ್ಸ್​ಗೆ ಅಟ್ಟಿ ಬ್ಯಾಟ್​ ಎತ್ತಿದ ರೋಹಿತ್; ಹಿಟ್​ಮ್ಯಾನ್​ನಿಂದ ಶತಕದ ದಾಖಲೆ

ರೋಹಿತ್ ತವರಿನಲ್ಲಿ ಆಡಿದ ಕೊನೆಯ 11 ಇನ್ನಿಂಗ್ಸ್​ಗಳಲ್ಲಿ ಒಂಬತ್ತು ಬಾರಿ 50ಕ್ಕೂ ಅಧಿಕ ರನ್ ಕಲೆಹಾಕಿದ ದಾಖಲೆ ಬರೆದಿದ್ದಾರೆ. ಮತ್ತೊಂದು ಅಚ್ಚರಿ ಎಂದರೆ ರೋಹಿತ್ ಬ್ಯಾಟ್​ನಿಂದ ಈವರೆಗೆ ಸಿಡಿದ ಶತಕಗಳು ತವರಿನಲ್ಲೇ ಎಂಬುದು ವಿಶೇಷ.

2013ರಲ್ಲಿ ಟೆಸ್ಟ್​ಗೆ ಪದಾರ್ಪಣೆ ಮಾಡಿದ ರೋಹಿತ್ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್​​ನಲ್ಲೇ ಶತಕ ಸಿಡಿಸಿ 177 ರನ್ ಬಾರಿಸಿದ್ದರು. ಆದರೆ ಕೊಹ್ಲಿ ತಮ್ಮ ಪ್ರಥಮ ಟೆಸ್ಟ್​ನಲ್ಲಿ 4 ರನ್ ಗಳಿಸಿದ್ದರಷ್ಟೆ.

2013ರಲ್ಲಿ ಟೆಸ್ಟ್​ಗೆ ಪದಾರ್ಪಣೆ ಮಾಡಿದ ರೋಹಿತ್ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್​​ನಲ್ಲೇ ಶತಕ ಸಿಡಿಸಿ 177 ರನ್ ಬಾರಿಸಿದ್ದರು. ಆದರೆ ಕೊಹ್ಲಿ ತಮ್ಮ ಪ್ರಥಮ ಟೆಸ್ಟ್​ನಲ್ಲಿ 4 ರನ್ ಗಳಿಸಿದ್ದರಷ್ಟೆ.

  • Share this:
ಬೆಂಗಳೂರು (ಅ. 19): ರಾಂಚಿಯ ಜೆಎಸ್​ಸಿಎ ಕ್ರೀಡಾಂಗಣದಲ್ಲಿ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಮೊತದತ್ತ ದಾಪುಗಾಲಿಡುತ್ತಿದೆ. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ.

ಈ ನಡುವೆ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ 6ನೇ ಶತಕ ಸಿಡಿಸಿ ಮಿಂಚಿದ್ದಾರೆ. 130 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 100 ರನ್ ಪೂರೈಸಿ ಬ್ಯಾಟ್ ಬೀಸುತ್ತಿದ್ದಾರೆ.

 India vs South Africa, Live Cricket Score, 3rd Test Match at Ranchi, Day 1: Rohit, Rahane Look to Build On
ಶತಕ ಸಿಡಿಸಿದ ವೇಳೆ ಅಜಿಂಕ್ಯ ರಹಾನೆ ಜೊತೆ ಸಂಭ್ರಮಿಸುತ್ತಿರುವ ರೋಹಿತ್ ಶರ್ಮಾ


ಕೊಹ್ಲಿ ಅಭಿಮಾನಿಗಳಿಗೆ ಆಘಾತ; ಬಾಂಗ್ಲಾ ಸರಣಿಯಿಂದ ವಿರಾಟ್ ಹೊರಕ್ಕೆ?

ಈ ಹಿಂದೆ ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಟೆಸ್ಟ್​ನ ಎರಡೂ ಇನ್ನಿಂಗ್ಸ್​ನಲ್ಲಿ ರೋಹಿತ್ ಶತಕ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಆರಂಭಿಕನಾಗಿ ಆಡಿದ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ಎರಡು ಶತಕ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್​ ಎಂದ ಸಾಧನೆ ಮಾಡಿದ್ದರು.

ಸದ್ಯ ರೋಹಿತ್ ತವರಿನಲ್ಲಿ ಆಡಿದ ಕೊನೆಯ 11 ಇನ್ನಿಂಗ್ಸ್​ಗಳಲ್ಲಿ ಒಂಬತ್ತು ಬಾರಿ 50ಕ್ಕೂ ಅಧಿಕ ರನ್ ಕಲೆಹಾಕಿದ ದಾಖಲೆ ಬರೆದಿದ್ದಾರೆ. ಮತ್ತೊಂದು ಅಚ್ಚರಿ ಎಂದರೆ ರೋಹಿತ್ ಬ್ಯಾಟ್​ನಿಂದ ಈವರೆಗೆ ಸಿಡಿದ ಶತಕಗಳು ತವರಿನಲ್ಲೇ ಎಂಬುದು ವಿಶೇಷ.

 IND vs BAN: ಬಾಂಗ್ಲಾ ವಿರುದ್ಧ ಟಿ-20 ಫೈಟ್; ದ್ವಿಶತಕ ವೀರನಿಗೆ ಸ್ಥಾನ; ಲಿಸ್ಟ್​ನಲ್ಲಿ ಆರ್​ಸಿಬಿ ಆಟಗಾರ?

ಇಷ್ಟೇ ಅಲ್ಲದೆ ಟೆಸ್ಟ್​ ಸರಣಿಯೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ರೋಹಿತ್ ಶರ್ಮಾ ಆಗಿದ್ದಾರೆ. ಈ ಹಿಂದೆ 2010-11ನೇ ಸಾಲಿನಲ್ಲಿ ಕಿವೀಸ್ ವಿರುದ್ಧದ ಸರಣಿಯಲ್ಲಿ ಹರ್ಭಜನ್ ಸಿಂಗ್ 14 ಸಿಕ್ಸರ್‌ಗಳನ್ನು ಸಿಡಿಸಿರುವುದು ಭಾರತೀಯ ಆಟಗಾರನ ಶ್ರೇಷ್ಠ ಸಾಧನೆಯಾಗಿತ್ತು.

ಸದ್ಯ ಮೂರು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ರೋಹಿತ್ ಬ್ಯಾಟ್​ನಿಂದ ಸದ್ಯ 15 ಸಿಕ್ಸರ್​ಗಳು ಬಂದಿವೆ. ಈಗ ಸಾಗುತ್ತಿರುವ ಮೂರನೇ ಟೆಸ್ಟ್​ನಲ್ಲಿ ಹಿಟ್​ಮನ್ಯಾನ್​ ಸಿಕ್ಸರ್ ಸಿಡಿಸಿ ಶತಕ ದಾಖಲಿಸಿರುವುದು ಎಲ್ಲರ ಹುಬ್ಬೇರುದಂತೆ ಮಾಡಿದೆ. ಇದರ ಜೊತೆಗೆ ರೋಹಿತ್ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ 2 ಸಾವಿರ ರನ್ ಪೂರೈಸಿದ್ದಾರೆ.

 

First published: