IND vs SA: ನಂಬರ್ ಒನ್ ಪಟ್ಟಕ್ಕೆ ಕೊಹ್ಲಿ-ರೋಹಿತ್ ನಡುವೆ ಫೈಟ್; ಚಿನ್ನಸ್ವಾಮಿಯಲ್ಲಿ ನಿರ್ಧಾರವಾಗುತ್ತೆ ಯಾರು ಬೆಸ್ಟ್!

ಎಲ್ಲಾದರು 8 ರನ್ ಗಳಿಸಿ ರೋಹಿತ್ ಬೇಗನೆ ಔಟ್ ಆಗಿ, ನಂತರದಲ್ಲಿ ಕೊಹ್ಲಿ ಅಬ್ಬರಿಸದರೆ ಮತ್ತೆ ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಳ್ಳಲಿದ್ದಾರೆ. ಹೀಗಾಗಿ ರೋಹಿತ್-ಕೊಹ್ಲಿ ಮಧ್ಯೆ ನಂಬರ್ ಒನ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

Vinay Bhat | news18-kannada
Updated:September 22, 2019, 5:37 PM IST
IND vs SA: ನಂಬರ್ ಒನ್ ಪಟ್ಟಕ್ಕೆ ಕೊಹ್ಲಿ-ರೋಹಿತ್ ನಡುವೆ ಫೈಟ್; ಚಿನ್ನಸ್ವಾಮಿಯಲ್ಲಿ ನಿರ್ಧಾರವಾಗುತ್ತೆ ಯಾರು ಬೆಸ್ಟ್!
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
Vinay Bhat | news18-kannada
Updated: September 22, 2019, 5:37 PM IST
ಬೆಂಗಳೂರು (ಸೆ. 21): ಟೀಂ ಇಂಡಿಯಾ ಅಂತಿಮ ಟಿ-20 ಪಂದ್ಯಕ್ಕೆ ಸಜ್ಜಾಗಿದೆ. ಇಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ-20 ಪಂದ್ಯ ನಡೆಯಲಿದ್ದು, ಸರಣಿ ವಶ ಪಡಿಸಿಕೊಳ್ಳುವತ್ತ ಕೊಹ್ಲಿ ಪಡೆ ಚಿತ್ತ ನೆಟ್ಟಿದೆ. ಈ ಮಧ್ಯೆ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಮಧ್ಯೆ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ಹೋರಾಡ ನಡೆಯಲಿದೆ.

ಮೊಹಾಲಿಯಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅಜೇಯ 72 ರನ್ ಕಲೆಹಾಕಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಕಲೆಹಾಕಿದ ಬ್ಯಾಟ್ಸ್​ಮನ್​ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದರು.

ಕೊಹ್ಲಿಯ ಈ ಸಾಧನೆ ಮುರಿಯಲು ರೋಹಿತ್​ಗೆ 8 ರನ್​ಗಳ ಅವಶ್ಯಕತೆಯಿದೆ. ಕೊಹ್ಲಿ ಒಟ್ಟು 2441 ರನ್ ಬಾರಿಸಿದ್ದರೆ, ರೋಹಿತ್ ಖಾತೆಯಲ್ಲಿ 2434 ರನ್​​​ಗಳಿವೆ. ಓಪನರ್ ಆಗಿ ರೋಹಿತ್ ಕಣಕ್ಕಿಳಿಯುವ ಕಾರಣ 8 ರನ್ ಬಾರಿಸಿದರೆ ಕೊಹ್ಲಿಯನ್ನು ಹಿಂದಿಕ್ಕಿ ರೋಹಿತ್ ಅತಿ ಹೆಚ್ಚು ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ.

ದೀಪಕ್​ಗೆ ಚಿನ್ನ ಗೆಲ್ಲುವ ಕನಸು ನುಚ್ಚುನೂರು; ಮಣಿಗಂಟು ಗಾಯದಿಂದ ಫೈನಲ್​ನಿಂದ ನಿವೃತ್ತಿ

ಎಲ್ಲಾದರು 8 ರನ್ ಗಳಿಸಿ ರೋಹಿತ್ ಬೇಗನೆ ಔಟ್ ಆಗಿ, ನಂತರದಲ್ಲಿ ಕೊಹ್ಲಿ ಅಬ್ಬರಿಸದರೆ ಮತ್ತೆ ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಳ್ಳಲಿದ್ದಾರೆ. ಹೀಗಾಗಿ ರೋಹಿತ್-ಕೊಹ್ಲಿ ಮಧ್ಯೆ ನಂಬರ್ ಓನ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

ಇವರ ಜೊತೆ ಶಿಖರ್ ಧವನ್ 4 ರನ್ ಕಲೆಹಾಕಿದರೆ ಟಿ-20 ಕ್ರಿಕೆಟ್​ನಲ್ಲಿ7 ಸಾವಿರ ರನ್ ಪೂರೈಸಲಿದ್ದಾರೆ. ಹಾಗಾದಲ್ಲಿ ಟಿ-20 ಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ 4ನೇ ಬ್ಯಾಟ್ಸ್​ಮನ್​ ಧವನ್ ಆಗಲಿದ್ದಾರೆ. ಭಾರತೀಯ ಆಟಗಾರರ ಪೈಕಿ ಮೊದಲ ಸ್ಥಾನದಲ್ಲಿ ಕೊಹ್ಲಿ ಇದ್ದರೆ, 2ನೇ ಸ್ಥಾನ ಸುರೇಶ್ ರೈನಾ ಹಾಗೂ 3ನೇ ಸ್ಥಾನದಲ್ಲಿ ರೋಹಿತ್ ಇದ್ದಾರೆ.

ದ. ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಸರಣಿ ಸಮಬಲಕ್ಕೆ ಹರಿಣಗಳು ಗೆಲ್ಲಬೇಕಾದ ಒತ್ತಡದಲ್ಲಿದೆ. ಇತ್ತ ಸರಣಿ ವಶ ಪಡಿಸಿಕೊಳ್ಳಲು ಕೊಹ್ಲಿ ಪಡೆ ಗೆಲ್ಲಲು ರಣತಂತ್ರ ಹೆಣೆದಿದೆ. ಮೊದಲ ಟಿ-20 ಮಳೆಯಿಂದ ರದ್ದಾಗಿತ್ತು.
Loading...

First published:September 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...