4ನೇ ಕ್ರಮಾಂಕದಲ್ಲಿ ಪಂತ್ ಬದಲು ಇವರನ್ನು ಆಡಿಸಿ; ಅಚ್ಚರಿಯ ಹೆಸರು ಸೂಚಿಸಿದ ಲಕ್ಷ್ಮಣ್

ನನ್ನ ಪ್ರಕಾರ ಪಂತ್ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರೆ ಉತ್ತಮ. ಅವರ ಬ್ಯಾಟಿಂಗ್ ಶೈಲಿಗೆ 4ನೇ ಕ್ರಮಾಂಕ ಹೊಂದಿಕೊಳ್ಳುವುದಿಲ್ಲ- ವಿವಿಎಸ್ ಲಕ್ಷಣ್

Vinay Bhat | news18-kannada
Updated:September 23, 2019, 4:06 PM IST
4ನೇ ಕ್ರಮಾಂಕದಲ್ಲಿ ಪಂತ್ ಬದಲು ಇವರನ್ನು ಆಡಿಸಿ; ಅಚ್ಚರಿಯ ಹೆಸರು ಸೂಚಿಸಿದ ಲಕ್ಷ್ಮಣ್
ವಿವಿಎಸ್ ಲಕ್ಷ್ಮಣ್​ ಹಾಗೂ ರಿಷಭ್ ಪಂತ್
  • Share this:
ಬೆಂಗಳೂರು (ಸೆ. 23): ಟೀಂ ಇಂಡಿಯಾ ನಾಲ್ಕನೇ ಕ್ರಮಾಂಕದಲ್ಲಿ ಮತ್ತೆ ರಿಷಭ್ ಪಂತ್​ ಅವರನ್ನು ಕಣಕ್ಕಿಳಿಸಿ ಎಡವಿದೆ. ಅನೇಕ ಅವಕಾಶ ನೀಡಿದರೂ ಪಂತ್ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಕಳೆದ 7 ಟಿ-20 ಪಂದ್ಯಗಳಲ್ಲಿ ಪಂತ್ ಕಲೆಹಾಕಿರುವುದು ಕೇವಲ 96 ರನ್​. ಈ ನಡುವೆ ಪಂತ್ ವೈಫಲ್ಯದ ಬಗ್ಗೆ ಮಾತನಾಡಿದ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ.

'ಸ್ವಾಭಾವಿಕವಾಗಿ ಪಂತ್​​ ಅವರದ್ದು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಯಶಸ್ಸು ಕಂಡರು. ಆದರೆ, ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿಫಲರಾಗಿದ್ದಾರೆ. ಪಂತ್​ನನ್ನು ಮೊದಲಿನಂತೆ  ಸ್ವತಂತ್ರವಾಗಿ ಆಡಲು ಬಿಡಿ' ಎಂದು ಲಕ್ಷ್ಮಣ್ ಸಲಹೆ ನೀಡಿದ್ದಾರೆ.

ಟೀಂ ಇಂಡಿಯಾ ಮಾಜಿ ಸ್ಟಾರ್ ಆಟಗಾರ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು

'ನನ್ನ ಪ್ರಕಾರ ಪಂತ್ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರೆ ಉತ್ತಮ. ಅವರ ಬ್ಯಾಟಿಂಗ್ ಶೈಲಿಗೆ 4ನೇ ಕ್ರಮಾಂಕ ಹೊಂದಿಕೊಳ್ಳುವುದಿಲ್ಲ. ಆಕ್ರಮಣ ಶೈಲಿಯಲ್ಲಿ ಬ್ಯಾಟ್ ಬೀಸುವ ಪಂತ್​ಗೆ ಅಷ್ಟುಬೇಗ ಭಡ್ತಿ ನೀಡಿವುದು ಒಳ್ಳೆಯ ನಿರ್ಧಾರವಲ್ಲ'

'4ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಆಡಿದರೆ ಉತ್ತಮ. ಅನುಭವಸ್ತ ಬ್ಯಾಟ್ಸ್​ಮನ್​​ ಆ ಜಾಗ ತುಂಬಬೇಕು. ಅಥವಾ ಶ್ರೇಯಸ್ ಐಯರ್ ಕೂಡ ಆ ಜಾಗಕ್ಕೆ ಹೊಂದಿಕೊಳ್ಳುತ್ತಾರೆ' ಎಂಬುದು ಲಕ್ಷ್ಮಣ್ ಅಭಿಪ್ರಾಯ.

'ಎಂ ಎಸ್ ಧೋನಿ ಅನುಪಸ್ಥಿತಿಯಲ್ಲಿ ಪಂತ್ ಮೇಲೆ ಸಾಕಷ್ಟು ಒತ್ತಡವಿದೆ. ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಇವರ ಮೇಲೆ ಭರವಸೆ ಇಟ್ಟಿದೆ. ಇದನ್ನು ಉಳಿಸಿಕೊಳ್ಳಬೇಕಾದರೆ ಪಂತ್ 5 ಅಥವಾ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಉತ್ತಮ' ಎಂದು ಹೇಳಿದರು.
First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ