ಬೆಂಗಳೂರು (ಅ. 06): ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಅಂಚಿನಲ್ಲಿದೆ. ಇನ್ನು 2 ವಿಕೆಟ್ ಕಿತ್ತರೆ ಭಾರತ ಭರ್ಜರಿ ಗೆಲುವು ಸಾಧಿಸಲಿದೆ.
ಐದನೇ ದಿನದಾಟದ ಮೊದಲ ಸೆಷನ್ನಲ್ಲೇ ಭಾರತೀಯ ಬೌಲರ್ಗಳು ಹರಿಣಗಳ ಸೋಲನ್ನು ಖಚಿತ ಪಡಿಸಿದರು. ಅದರಲ್ಲೂ ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ಆಫ್ರಿಕಾ ಬ್ಯಾಟ್ಸ್ಮನ್ಗಳು ಒಬ್ಬರ ದಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು.
ತೆಂಬಾ ಬವುಮಾ, ನಾಯಕ ಫಾಫ್ ಡುಪ್ಲೆಸಿಸ್, ಕ್ವಿಂಟನ್ ಡಿಕಾಕ್ ಹೀಗೆ ಪ್ರಮಖ ಬ್ಯಾಟ್ಸ್ಮನ್ ಔಟ್ ಆಗಿ ನಿರ್ಗಮಿಸಿದ್ದರು. ಆದರೆ, ಆರಂಭಿಕ ಆಟಗಾರ ಆ್ಯಡೆನ್ ಮರ್ಕ್ರಮ್ ಕ್ರೀಸ್ ಕಚ್ಚಿ ಆಡುತ್ತಿದ್ದರು. ಎಷ್ಟೇ ಪ್ರಯತ್ನ ಪಟ್ಟರು ಮರ್ಕ್ರಮ್ರನ್ನು ಔಟ್ ಮಾಡಲು ಅಶ್ವಿನ್, ಶಮಿಯಿಂದ ಸಾಧ್ಯವಾಗಿಲ್ಲ.
ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಜಡೇಜಾ ತಮ್ಮ ಸ್ಪಿನ್ ತಂತ್ರದಿಂದ ಅದ್ಭುತ ಕ್ಯಾಚ್ ಪಡೆದು ಮರ್ಕ್ರಮ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಚೆಂಡನ್ನು ಬೌಲರ್ ತಲೆ ಮೇಲಿನಿಂದ ಬೌಂಡರಿಗೆ ಅಟ್ಟಲು ಪ್ರಯತ್ನಿಸಿದ್ರು ಮರ್ಕ್ರಮ್. ಆದರೆ, ಸರಿಯಾದ ಸಮಯಕ್ಕೆ ಜಡ್ಡು ಹಾರಿ ಒಂದೇ ಕೈಯಲ್ಲಿ ಬಾಲ್ ಹಿಡಿದು ಅಚ್ಚರಿ ಮೂಡಿಸಿದರು.
RT If You Love My Fielding 🤗🙏 Ravindra #Jadeja pic.twitter.com/PHFYAmOWKL
— Sir Jadeja Fan (@SirrrJadeja) October 6, 2019
ಜಡೇಜಾ ಹಿಡಿದ ಈ ಕ್ಯಾಚ್ ಒಂದುಕ್ಷಣ ಮರ್ಕ್ರಮ್ಗೂ ಶಾಕ್ ಆಯಿತು. 74 ಎಸೆತಗಳಲ್ಲಿ 39 ರನ್ ಗಳಿಸಿದ್ದ ಮರ್ಕ್ರಮ್ರನ್ನು ಔಟ್ ಮಾಡಲು ಜಡೇಜಾ ಯಶಸ್ವಿಯಾದರು. ಸದ್ಯ ಜಡೇಜಾ ಹಿಡಿದಿರುವ ಅದ್ಭುತ ಕ್ಯಾಚ್ನ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ