IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಕೊಹ್ಲಿ ಬಳಗಕ್ಕೆ ರಬಾಡ ಹೇಳಿದ್ದೇನು ಗೊತ್ತಾ..?

ಮೂರು ಪಂದ್ಯಗಳ ಟಿ-20 ಸರಣಿ ಮುಕ್ತಾಯವಾದ ಬೆನ್ನಲ್ಲೆ ಕೊಹ್ಲಿ ಪಡೆ ಆಫ್ರಿಕಾ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನ ಎರಡನೇ ಟೆಸ್ಟ್​ ಸರಣಿ ಆಡಲಿದೆ.

Vinay Bhat | news18-kannada
Updated:September 9, 2019, 11:07 AM IST
IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಕೊಹ್ಲಿ ಬಳಗಕ್ಕೆ ರಬಾಡ ಹೇಳಿದ್ದೇನು ಗೊತ್ತಾ..?
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ
  • Share this:
ಬೆಂಗಳೂರು (ಸೆ. 08): ಟೀಂ ಇಂಡಿಯಾ ವಿರುದ್ಧದ ಮೂರು ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್​​ ಸರಣಿಗಾಗಿ ದಕ್ಷಿಣ ಅಫ್ರಿಕಾ ತಂಡ ಭಾರತಕ್ಕೆ ಬಂದಿಳಿದಿದೆ.

ಭಾರತ-ಆಫ್ರಿಕಾ ಮಧ್ಯೆ ಮೊದಲ ಟಿ-20 ಪಂದ್ಯ ಸೆ. 15 ರಂದು ಧರ್ಮಶಾಲದಲ್ಲಿ ನಡೆಯಲಿದ್ದರೆ, 2ನೇ ಟಿ-20 ಸೆ. 18, ಮೊಹಾಲಿಯಲ್ಲಿ ಹಾಗೂ ಅಂತಿಮ ಪಂದ್ಯ ಸೆ. 22 ರಂದು ಬೆಂಗಳೂರಿನಲ್ಲಿ ಆಡಲಿದೆ.

ಕ್ವಿಂಟನ್ ಡಿಕಾಕ್ ನೇತೃತ್ವದ ತಂಡ ಭಾರತಕ್ಕೆ ಬಂದಿಳಿದಿರುವ ಬಗ್ಗೆ ಕ್ರಿಕೆಟ್ ಸೌತ್ ಆಫ್ರಿಕಾ ಟ್ವೀಟ್ ಮಾಡಿದೆ. ಸದ್ಯ ಅಭ್ಯಾಸದಲ್ಲಿ ಆಫ್ರಿಕಾ ಆಟಗಾರರು ನಿರತರಾಗಿದ್ದಾರೆ. ಈ ಮಧ್ಯೆ ದಕ್ಷಿಣ ಆಫ್ರಿಕಾ ಹೈ ಕಮಿಷನರ್​ ಕಚೇರಿಗೆ ಈ ತಂಡ ಭೇಟಿ ನೀಡಲಿದೆ.

ಕೊಹ್ಲಿ-ಧೋನಿಯಷ್ಟು ಶ್ರೀಮಂತನಲ್ಲ ಈ ಕ್ರಿಕೆಟಿಗ; ಆದರೂ ಪಂದ್ಯದ ಸಂಭಾವನೆ ದಾನ ಮಾಡಿದ ಸಂಜು!

 ಇನ್ನು ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ದ. ಆಫ್ರಿಕಾದ ಪ್ರಮುಖ ಬೌಲರ್ ಕಗಿಸೊ ರಬಾಡ, 'ಕ್ರಿಕೆಟ್ ಸರಣಿ ಆಡಲು ಭಾರತಕ್ಕೆ ಮರಳಿ ಆಗಮಿಸಿರುವುದು ಸಂತಸ ನೀಡಿದೆ. ಟೀಂ ಇಂಡಿಯಾ ಎದುರು ಆಡಲು ಕಾತುರರಾಗಿದ್ದೇವೆ' ಎಂದು ಹೇಳಿದ್ದಾರೆ.

 Virat Kohli: ನಾನು ಕ್ರೀಸ್​ಗೆ ಕಾಲಿಟ್ಟಾಗ ಭಯ ಇರಬೇಕು; ಆ ಭಯ ಎದುರಾಳಿಗರದ್ದು ಆಗಿರಬೇಕು

ಮೂರು ಪಂದ್ಯಗಳ ಟಿ-20 ಸರಣಿ ಮುಕ್ತಾಯವಾದ ಬೆನ್ನಲ್ಲೆ ಕೊಹ್ಲಿ ಪಡೆ ಆಫ್ರಿಕಾ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನ ಎರಡನೇ ಟೆಸ್ಟ್​ ಸರಣಿ ಆಡಲಿದೆ. ಮೊದಲ ಟೆಸ್ಟ್​​ ಅಕ್ಟೋಬರ್ 2 ರಿಂದ ವಿಶಾಖಪಟ್ಟಣಂ ನಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್​ ಅ. 10 ರಂದು ಪುಣೆಯಲ್ಲಿ ಹಾಗೂ ಮೂರನೇ ಟೆಸ್ಟ್​ ಅ. 19 ರಂದು ರಾಂಚಿಯಲ್ಲಿ ನಡೆಯಲಿದೆ.

First published:September 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ