IND vs SA: ಭಾರತ-ಆಫ್ರಿಕಾ ಮೂರನೇ ಟೆಸ್ಟ್​ನಲ್ಲಿ ಕಾಣಿಸಿಕೊಳ್ಳಲಿರುವ ಎಂಎಸ್ ಧೋನಿ!

ತವರೂರು ರಾಂಚಿಯಲ್ಲಿ ಎಂಎಸ್ ಧೋನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಧೋನಿ ಹಾಜರಾದರೆ ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರಬಹುದು ಎಂಬುದು ಜೆಎಸ್​​ಸಿಎ ಈ ಆಲೋಚನೆಗೆ ಮುಂದಾಗಿದೆಯಂತೆ.

Vinay Bhat | news18-kannada
Updated:October 18, 2019, 12:06 PM IST
IND vs SA: ಭಾರತ-ಆಫ್ರಿಕಾ ಮೂರನೇ ಟೆಸ್ಟ್​ನಲ್ಲಿ ಕಾಣಿಸಿಕೊಳ್ಳಲಿರುವ ಎಂಎಸ್ ಧೋನಿ!
ಎಂಎಸ್ ಧೋನಿ
  • Share this:
ಬೆಂಗಳೂರು (ಅ. 18): ನಾಳೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ರಾಂಚಿಯ ಜೆಎಸ್​​ಸಿಎ ಕ್ರೀಡಾಂಗಣದಲ್ಲಿ ಅಂತಿಮ ಮೂರನೇ ಟೆಸ್ಟ್​ ಆರಂಭವಾಗಲಿದೆ. ಕೊಹ್ಲಿ ಟೀಂ ಈಗಾಗಲೇ ಸರಣಿ ವಶಪಡಿಸಿಕೊಂಡಿದ್ದರೆ, ಹರಿಣಗಳು ಕನಿಷ್ಠ ಮೊದಲ ಗೆಲುವನ್ನು ಎದುರು ನೋಡುತ್ತಿದೆ.

ಈ ನಡುವೆ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕಾಣಿಸಿಕೊಳ್ಳಲಿದ್ದಾರೆ. ರಾಂಚಿಯ ಜೆಎಸ್​​ಸಿಎ ಅಂತಿಮ ಟೆಸ್ಟ್​ಗೆ ಧೋನಿಯನ್ನು ಆಹ್ವಾನಿಸಿದೆ. ಇದಕ್ಕೆ ಧೋನಿ ಕೂಡ ಒಪ್ಪಿಗೆ ಸೂಚಿಸಿದ್ದು ಪಂದ್ಯ ವೀಕ್ಷಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರಂತೆ.

India vs South Africa: MS Dhoni set to attend India vs South Africa 3rd Test in Ranchi
ಎಂ ಎಸ್ ಧೋನಿ


IND vs SA: ನಾಳೆಯಿಂದ ಅಂತಿಮ ಕದನ​; ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಭಾರತದ ಈ ಆಟಗಾರ?

ತವರೂರು ರಾಂಚಿಯಲ್ಲಿ ಎಂಎಸ್ ಧೋನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಧೋನಿ ಹಾಜರಾದರೆ ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರಬಹುದು ಎಂಬುದು ಜೆಎಸ್​​ಸಿಎ ಈ ಆಲೋಚನೆಗೆ ಮುಂದಾಗಿದೆಯಂತೆ.

"ಧೋನಿ ನಾಳೆ ರಾಂಚಿಗೆ ಬಂದಿಳಿಯಲಿದ್ದಾರೆ. ಹೀಗಾಗಿ ಖಂಡಿತ ಅವರು ಪಂದ್ಯ ವೀಕ್ಷಣೆಗೆ ಹಾಜರಾಗುತ್ತಾರೆ. ಮೂರನೇ ಟೆಸ್ಟ್​ನ ಮೊದಲ ದಿನ ಧೋನಿ ರಾಂಚಿಯ ಜೆಎಸ್​​ಸಿಎ ಕ್ರೀಡಾಂಗಣದಲ್ಲಿರುತ್ತಾರೆ" ಎಂದು ಧೋನಿ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಹೇಳಿದ್ದಾರೆ.

ಟಿ-20 ಸರಣಿಗೆ ಬಾಂಗ್ಲಾ ತಂಡ ಪ್ರಕಟ; ಜೈಲಿನಲ್ಲಿದ್ದ ಆಟಗಾರನಿಗೆ ಟೀಂ ಇಂಡಿಯಾ ವಿರುದ್ಧ ಆಡಲು ಅವಕಾಶ!ಸಿಆರ್​​ಪಿಎಫ್​​ ಹಾಗೂ ಸೈನಿಕರಿಗೆ 5 ಸಾವಿರ ಉಚಿತ ಟಿಕೆಟ್:

ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೈನಿಕರು ಸೇರಿದಂತೆ ಸಮವಸ್ತ್ರದಲ್ಲಿರುವ ಪುರುಷರಿಗೆ 5 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ವಿತರಿಸಲು ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ. ನಮ್ಮ ಸಿಆರ್‌ಪಿಎಫ್ ಯೋಧರು, ಸೈನಿಕರು ಹಾಗೂ ಎನ್‌ಸಿಸಿ ಕೆಡೆಟ್‌ಗಳಿಗೆ ಐದು ಸಾವಿರ ಟಿಕೆಟ್‌ಗಳನ್ನು ತೆಗೆದಿಡಲು ನಿರ್ಧರಿಸಿದ್ದೇವೆ. ಇದು ಸಮವಸ್ತ್ರದಲ್ಲಿ ಪುರುಷರಿಗೆ ನಾವು ನೀಡುವ ಗೌರವ ಎಂದು ಜೆಎಸ್‌ಸಿಎ ಕಾರ್ಯದರ್ಶಿ ಸಂಜಯ್ ಸಹಾಯ್ ತಿಳಿಸಿದ್ದಾರೆ.

First published: October 18, 2019, 12:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading