ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಮಾಜಿ ನಾಯಕ ಮಾಹಿಗಿಲ್ಲ ಚಾನ್ಸ್​

ವೇಗಿ ಭುವನೇಶ್ವರ್​ ಕುಮಾರ್​ ವಿಶ್ರಾಂತಿಗೆ ಮರಳುತ್ತಿದ್ದು,  ಆಲ್​ ರೌಂಡರ್​ ಹಾರ್ದಿಕ್​ ಪಾಂಡ್ಯರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

news18
Updated:August 29, 2019, 11:04 PM IST
ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಮಾಜಿ ನಾಯಕ ಮಾಹಿಗಿಲ್ಲ ಚಾನ್ಸ್​
ಧೋನಿ
news18
Updated: August 29, 2019, 11:04 PM IST
ದಕ್ಷಿಣಾ ಆಫ್ರಿಕಾದ ವಿರುದ್ಧ ನಡೆಯುವ ಟ್ವೆಂಟಿ-20 ಸರಣಿಗೆ ಟೀಂ​ ಇಂಡಿಯಾವನ್ನು ಪ್ರಕಟಿಸಲಾಗಿದೆ. ಮಾಜಿ ನಾಯಕ, ವಿಕೆಟ್​ ಕೀಪರ್​ ಧೋನಿಯನ್ನು ಆಯ್ಕೆಗೆ ಪರಿಗಣಿಸದೆ ಉದೊಯೋನ್ಮುಖ ಆಟಗಾರ ರಿಷಭ್​ ಪಂತ್​ ಅವರಿಗೆ ಸ್ಥಾನ ನೀಡಲಾಗಿದೆ.

ವೆಸ್ಟ್​ ಇಂಡಿಸ್​ನಿಂದ ತೆರಳಿದ ಕೊಹ್ಲಿ ಪಡೆ ಸೆ. 15 ರಂದು ನಡೆಯುವ ಟ್ವೆಂಟಿ -20 ಸರಣಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆದರೆ, ಎರಡನೇ ಪಂದ್ಯ ಮೊಹಾಲಿ(ಸೆ.18) ಮತ್ತು ಬೆಂಗಳೂರಿನಲ್ಲಿ (ಸೆ.22) ನಡೆಯಲಿದೆ.

ಇನ್ನು ಟೀಮ್​ ಇಂಡಿಯಾವನ್ನು ವಿರಾಟ್​ ಕೊಹ್ಲಿ ಟೀಂ​ ಇಂಡಿಯಾವನ್ನು ಮುನ್ನಡೆಸಲಿದ್ದು, ದಕ್ಷಿಣಾ ಆಫ್ರಿಕಾದ ನಡುವಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೋಹಿತ್​ ಶರ್ಮ ಉಪನಾಯಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಡಿಕೆಶಿಗೆ ಮತ್ತೆ ಸಮನ್ಸ್​ ನೀಡಿದ ಇ.ಡಿ; ಈ ಬಗ್ಗೆ ನಾಳೆ ಪ್ರತಿಕ್ರಿಯಿಸುತ್ತೇನೆ ಎಂದ ಟ್ರಬಲ್​ ಶೂಟರ್

Loading...ವೇಗಿ ಭುವನೇಶ್ವರ್​ ಕುಮಾರ್​ ವಿಶ್ರಾಂತಿಗೆ ಮರಳುತ್ತಿದ್ದು,  ಆಲ್​ ರೌಂಡರ್​ ಹಾರ್ದಿಕ್​ ಪಾಂಡ್ಯರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ಟೀಂ ಇಂಡಿಯಾದ ಓಪನಿಂಗ್​ ಬ್ಯಾಟ್ಸ್​ಮನ್​ ಶಿಖರ್​ ಧವನ್​, ಕೆ.ಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ಮನೀಶ್​ ಪಾಂಡೆ, ರವೀಂದ್ರ ಜಡೇಜಾ, ಕೃಣಾಲ್​ ಪಾಂಡ್ಯ, ವಾಷಿಂಗ್ಟನ್​ ಸುಂದರ್​, ರಾಹುಲ್​ ಚಹರ್​, ಖಲೀಲ್​ ಅಹ್ಮದ್​, ದೀಪಕ್​ ಚಹರ್​ ಹಾಗೂ ನವದೀಪ್​​ ಸೈನಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಭುವನೇಶ್ವರ್​ ಹಾಗೂ ಜಸ್ಪ್ರಿತ್​ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

 .ಆಫ್ರಿಕಾ ಟಿ20 ಸರಣಿಗಾಗಿನ ಭಾರತ ತಂಡ ಇಂತಿದೆ:
1. ವಿರಾಟ್ ಕೊಹ್ಲಿ ( ನಾಯಕ)
2. ರೋಹಿತ್ ಶರ್ಮಾ(ಉಪ ನಾಯಕ)
3. ಶಿಖರ್ ಧವನ್,
4. ಕೆಎಲ್ ರಾಹುಲ್,
5. ಶ್ರೇಯಸ್ ಅಯ್ಯರ್,
6. ಮನೀಶ್ ಪಾಂಡೆ,
7. ರವೀಂದ್ರ ಜಡೇಜಾ,
8. ಕೃುಣಾಲ್ ಪಾಂಡ್ಯ,
9. ವಾಷಿಂಗ್ಟನ್ ಸುಂದರ್,
10. ರಾಹುಲ್ ಚಹರ್,
11. ಖಲೀಲ್ ಅಹ್ಮದ್,
12. ದೀಪಕ್ ಚಹರ್
13. ನವದೀಪ್ ಸೈನಿ
14. ಹಾರ್ದಿಕ್ ಪಾಂಡ್ಯ
15. ರಿಷಬ್ ಪಂತ್(ವಿಕೆಟ್​ ಕೀಪರ್​)
First published:August 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...