MS Dhoni: ಸರಣಿ ಕ್ಲೀನ್​ಸ್ವೀಪ್ ಬೆನ್ನಲ್ಲೆ ಡ್ರೆಸ್ಸಿಂಗ್ ರೂಮ್​ಗೆ ಬಂದ ಧೋನಿ; ಫೋಟೋ ವೈರಲ್!

ತನ್ನ ತವರಿನಲ್ಲಿ ನಡೆದ ಪಂದ್ಯವಾಗಿದ್ದರಿಂದ ಎಂಎಸ್ ಧೋನಿ ಟೆಸ್ಟ್​ ನೋಡಲು ಹಾಜರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಾಲ್ಕನೆ ದಿನ ಪಂದ್ಯ ಮುಗಿಯುತ್ತಿರುವ ವೇಳೆ ಧೋನಿ ಆಟಗಾರರನ್ನು ಭೇಟಿಯಾದರು.

Vinay Bhat | news18-kannada
Updated:October 22, 2019, 11:41 AM IST
MS Dhoni: ಸರಣಿ ಕ್ಲೀನ್​ಸ್ವೀಪ್ ಬೆನ್ನಲ್ಲೆ ಡ್ರೆಸ್ಸಿಂಗ್ ರೂಮ್​ಗೆ ಬಂದ ಧೋನಿ; ಫೋಟೋ ವೈರಲ್!
ತನ್ನ ತವರಿನಲ್ಲಿ ನಡೆದ ಪಂದ್ಯವಾಗಿದ್ದರಿಂದ ಎಂಎಸ್ ಧೋನಿ ಟೆಸ್ಟ್​ ನೋಡಲು ಹಾಜರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಾಲ್ಕನೆ ದಿನ ಪಂದ್ಯ ಮುಗಿಯುತ್ತಿರುವ ವೇಳೆ ಧೋನಿ ಆಟಗಾರರನ್ನು ಭೇಟಿಯಾದರು.
  • Share this:
ಬೆಂಗಳೂರು (ಅ. 22): ರಾಂಚಿಯ ಜೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ 202 ರನ್​ಗಳ ಬೃಹತ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮೂರನ್ನೂ ಗೆದ್ದು ಬೀಗಿದ ಕೊಹ್ಲಿ ಪಡೆ ಸರಣಿ ಕ್ಲೀನ್​​ಸ್ವೀಪ್ ಮಾಡಿದೆ. ಅಲ್ಲದೆ ತವರಿನಲ್ಲಿ ದಾಖಲೆಯ ಗೆಲುವು ಕಂಡಿದೆ.

ಟೀಂ ಇಂಡಿಯಾ ಸರಣಿ ಕ್ಲೀನ್​ಸ್ವೀಪ್ ಮಾಡಿದ ಬೆನ್ನಲ್ಲೆ ಮಾಜಿ ನಾಯಕ ಎಂಎಸ್ ಧೋನಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾರೆ. ಬಿಸಿಸಿಐ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಮೂರನೇ ಪಂದ್ಯದ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶಹ್ಬಾದ್ ನದೀಂ ಜೊತೆ ಧೋನಿ ಮಾತುಕತೆಯಲ್ಲಿ ತೊಡಗಿಕೊಂಡಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಗಸದೆತ್ತರಕ್ಕೆ ಜಿಗಿದ ಭಾರತ; ಎಷ್ಟು ಪಾಯಿಂಟ್ ಗೊತ್ತಾ?

ತನ್ನ ತವರಿನಲ್ಲಿ ನಡೆದ ಪಂದ್ಯವಾಗಿದ್ದರಿಂದ ಎಂಎಸ್ ಧೋನಿ ಭಾರತ-ಆಫ್ರಿಕಾ ನಡುವಣ ಮೂರನೇ ಟೆಸ್ಟ್​ ನೋಡಲು ಹಾಜರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಾಲ್ಕನೆ ದಿನ ಪಂದ್ಯ ಮುಗಿಯುತ್ತಿರುವ ವೇಳೆ ಧೋನಿ ಆಟಗಾರರನ್ನು ಭೇಟಿಯಾದರು.

 ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ರೋಹಿತ್ ಶರ್ಮಾ ದ್ವಿಶತಕ, ರಹಾನೆ ಶತಕ ಹಾಗೂ ಜಡೇಜಾ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 497 ರನ್ ಗಳಿಸಿರುವಾಗ ಡಿಕ್ಲೇರ್ ಮಾಡಿಕೊಂಡಿತ್ತು.

IND vs SA: ದೀಪಾವಳಿಗೆ ಗೆಲುವಿನ ಉಡುಗೊರೆ; ಸರಣಿ ಕ್ಲೀನ್​ಸ್ವೀಪ್ ಮಾಡಿದ ಟೀಂ ಇಂಡಿಯಾ

ಬಳಿಕ ಬ್ಯಾಟ್ ಮಾಡಿದ ಆಫ್ರಿಕಾವನ್ನು 162 ರನ್​ಗಳಿಗೆ ಆಲೌಟ್ ಮಾಡಿ ಕೊಹ್ಲಿ ಟೀಂ ಫಾಲೋಆನ್ ಹೇರಿತು. 335 ರನ್​ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಡುಪ್ಲೆಸಿಸ್ ಪಡೆ ಮತ್ತೆ ಟೀಂ ಇಂಡಿಯಾ ಬೌಲರ್​ಗಳ ಮಾರಕ ದಾಳಿಗೆ ನಲುಗಿ ಹೋಗಿ 133 ರನ್​ಗೆ ಆಲೌಟ್ ಆಗಿ ಸೋಲೊಪ್ಪಿಗೊಂಡಿತು.

 First published:October 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading