IND vs SA: 2ನೇ ಟಿ-20 ಪಂದ್ಯಕ್ಕೆ ವರುಣನ ಅಡ್ಡಿ?; ಮೊಹಾಲಿಯ ಹವಮಾನ ಇಲಾಖೆ ಏನನ್ನುತ್ತೆ?

ಧರ್ಮಶಾಲಾದಿಂದ ಕೆಲವೇ ಗಂಟೆಗಳ ದೂರದಲ್ಲಿರುವ ಮೊಹಾಲಿಗೆ ಎರಡೂ ತಂಡಗಳು ಸೋಮವಾರ ಮುಂಜಾನೆ ಆಗಮಿಸಿದೆ. ಅಲ್ಲದೆ ಉಭಯ ತಂಡಗಳು ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ.

Vinay Bhat | news18-kannada
Updated:September 17, 2019, 1:10 PM IST
IND vs SA: 2ನೇ ಟಿ-20 ಪಂದ್ಯಕ್ಕೆ ವರುಣನ ಅಡ್ಡಿ?; ಮೊಹಾಲಿಯ ಹವಮಾನ ಇಲಾಖೆ ಏನನ್ನುತ್ತೆ?
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಣಾಯಕ
  • Share this:
ಬೆಂಗಳೂರು (ಸೆ. 17): ಧರ್ಮಶಾಲದಲ್ಲಿ ನಡೆಯಬೇಕಿದ್ದ ಭಾರತ- ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ-20 ಪಂದ್ಯ ಮಳೆಗೆ ಆಹುತು ಆಗಿತ್ತು. ಟಾಸ್ ಪ್ರಕ್ರಿಯೆಗೂ ಅವಕಾಶ ನೀಡದ ವರುಣ ಜೋರಾಗಿ ಸುರಿದ ಪರಿಣಾಮ ಒಂದು ಬಾಲ್ ಆಡದೆ ಸ್ಥಗಿತಗೊಳಿಸಲಾಗಿತ್ತು.

ನಾಳೆ (ಸೆ. 18) ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಬಿಂದ್ರ ಕ್ರೀಡಾಂಗಣದಲ್ಲಿ ಎರಡನೇ ಟಿ-20 ಪಂದ್ಯ ನಡೆಯಲಿದೆ. ಬ್ಯಾಟ್ಸ್​ಮನ್​ಗಳಿಗೆ ಹೇಳಿಮಾಡಿಸಿದ ಪಿಚ್ ಆಗಿರುವ ಈ ಮೈದಾನದಲ್ಲಿ ರನ್​ ಮಳೆಯೇ ಹರಿಯುವ ನಿರೀಕ್ಷೆಯಿದೆ. ಆದರೆ, 2ನೇ ಪಂದ್ಯಕ್ಕೂ ವರುಣನ ಕಾಟ ಇದೆಯಾ?

ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಕಲೆಹಾಕುವ ಕ್ರೀಡಾಂಗಣ ಮೊಹಾಲಿ. ಉತ್ತಮ ಬೌನ್ಸ್​ ಜೊತೆ ಬ್ಯಾಟ್ಸ್​ಮನ್​ಗಳು ಇಲ್ಲಿ ಸಿಡಿದ ಇತಿಹಾಸವಿದೆ. ಸದ್ಯದ ಮಾಹಿತಿ ಪ್ರಕಾರ ಮೊಹಾಲಿಯಲ್ಲಿ ಮಳೆ ಬರುವ ಯಾವುದೇ ಸೂಚನೆಯಿಲ್ಲ. ಕಳೆದ ಎರಡು ದಿನಗಳಿಂದ ಮಳೆಯ ಭೀತಿಯಿಲ್ಲ, ಭಾರತ-ಆಫ್ರಿಕಾ ನಡುವಣ 2ನೇ ಟಿ-20 ಪಂದ್ಯಕ್ಕೂ ವರುಣ ಅಡ್ಡಿ ಪಡಿಸುವ ಸಾಧ್ಯತೆ ಕಮ್ಮಿ ಎಂದು ಹವಮಾನ ಇಲಾಖೆ ಹೇಳಿದೆ.

ತನ್ನ ಮಕ್ಕಳನ್ನೇ ಕೊಂದು ಹಾಕಿದ ಕ್ರಿಕೆಟಿಗ ಬೆನ್ ಸ್ಟೋಕ್ಸ್​ ಮಲ ತಂದೆ!

T20I Series between India and South Africa – All eyes on tomorrow’s tie at PCA stadium; Met forecast: partly cloudy sky
ಸೆ. 17ರ ಹವಮಾನ ವರದಿ


ಧರ್ಮಶಾಲಾದಿಂದ ಕೆಲವೇ ಗಂಟೆಗಳ ದೂರದಲ್ಲಿರುವ ಮೊಹಾಲಿಗೆ ಎರಡೂ ತಂಡಗಳು ಸೋಮವಾರ ಮುಂಜಾನೆ ಆಗಮಿಸಿದೆ. ಅಲ್ಲದೆ ಉಭಯ ತಂಡಗಳು ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ.

ಈಗಾಗಲೇ ಪಂದ್ಯದ ಶೇ. 72 ರಷ್ಟು ಟಿಕೇಟ್ ಮಾರಾಟವಾಗಿದೆ. ಸ್ಟೇಡಿಯಂ ಸಂಪೂರ್ಣ ಭರ್ತಿ ಆಗಲಿದೆ ಎಂದು ಪಿಸಿಎ ಕಾರ್ಯದರ್ಶಿ ಆರ್​ ಪಿ ಸಿಂಗ್ಲ ಹೇಳಿದ್ದಾರೆ.
Loading...

41 ಎಸೆತಗಳಲ್ಲಿ ಸ್ಕಾಟ್ಲೆಂಡ್ ಬ್ಯಾಟ್ಸ್​ಮನ್​ ಶತಕ; 120 ಎಸೆತಗಳಲ್ಲಿ ಹರಿದು ಬಂದ ರನ್​ ಎಷ್ಟು ಗೊತ್ತಾ?

ಇನ್ನು ಅಂತಿಮ ಮೂರನೇ ಟಿ-20 ಪಂದ್ಯ ಭಾನುವಾರ (ಸೆ. 22) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿಕೆಟ್​ಗಾಗಿ ಜನರು ಕಿಕ್ಕಿರಿದು ಬರುತ್ತಿದ್ದು, 500 ರೂಪಾಯಿ ಬೆಲೆ ಗ್ಯಾಲರಿ ಟಿಕೆಟ್​ಗಳು ಮೊದಲ ದಿನವೇ ಸಂಪೂರ್ಣ ಮಾರಾಟವಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಆನ್​ಲೈನ್ ಮೂಲಕವೂ ಟಿಕೆಟ್ ಖರೀದಿಸುತ್ತಿದ್ದಾರೆ.

First published:September 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...