• Home
  • »
  • News
  • »
  • sports
  • »
  • India vs South Africa Results: ಸೌತ್ ಆಫ್ರಿಕಾ ಆಟಕ್ಕೆ ಮಣಿದ ಭಾರತ; 5 ವಿಕೆಟ್​ಗಳಿಂದ ಸೋಲುಂಡ ಟೀಂ ಇಂಡಿಯಾ

India vs South Africa Results: ಸೌತ್ ಆಫ್ರಿಕಾ ಆಟಕ್ಕೆ ಮಣಿದ ಭಾರತ; 5 ವಿಕೆಟ್​ಗಳಿಂದ ಸೋಲುಂಡ ಟೀಂ ಇಂಡಿಯಾ

ಪಂದ್ಯದ ದೃಶ್ಯ

ಪಂದ್ಯದ ದೃಶ್ಯ

India vs South Africa Highlights: ಅಂತೂ 133 ರನ್ ಗುರಿ ನೀಡಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಕೊಂಚ ಉತ್ತಮ ಬೌಲಿಂಗ್ ಮಾಡಿದರೂ ದಕ್ಷಿಣ ಆಫ್ರಿಕನ್ನರ ಆಟದ ವಿರುದ್ಧ ಮಣಿಯಲೇಬೇಕಾಯಿತು.

  • News18 Kannada
  • Last Updated :
  • New Delhi, India
  • Share this:

    ಭಾರತ vs ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ(India vs South Africa Results) ಭಾರತಕ್ಕೆ ನಿರಾಸೆಯಾಗಿದೆ. ದಕ್ಷಿಣ ಆಫ್ರಿಕಾ ತಂಡ ಭಾರತವನ್ನು 5 ವಿಕೆಟ್​ಗಳಿಂದ ಮಣಿಸಿದೆ. ದಕ್ಷಿಣ ಆಫ್ರಿಕಾ ತಂಡದ ಬೌಲರ್​ಗಳ ಕೈಚಳಕಕ್ಕೆ ಸಿಲುಕಿದ ಭಾರತದ ಬ್ಯಾಟರ್​ಗಳು​ (India vs South Africa Today Match Results) ಆರಂಭಿಕ ಕುಸಿತ ಅನುಭವಿಸಿದರು.  ಆದರೂ ಸೂರ್ಯಕುಮಾರ್ ಯಾದವ್ ಉತ್ತಮ ಅರ್ಧಶತಕದೊಂದಿಗೆ ಏಕಾಂಗಿ ಹೋರಾಟ ನಡೆಸಿ ದಕ್ಷಿಣ ಆಫ್ರಿಕಾ ವಿರುದ್ಧ 20 ಓವರ್‌ಗಳಲ್ಲಿ ಭಾರತವನ್ನು 133 ರನ್​ಗಳ ಗಳಿಕೆಯತ್ತ ಕೊಂಡೊಯ್ದರು. ಈ ಮುನ್ನ ಮೊದಲು ಲುಂಗಿ ಎನ್‌ಗಿಡಿ ನಾಲ್ಕು ವಿಕೆಟ್‌ಗಳ ಸಾಧನೆಯೊಂದಿಗೆ ಭಾರತದ ಅಗ್ರ ಕ್ರಮಾಂಕವನ್ನು ಅಲುಗಾಡಿಸಿದರು.


    ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಭಾರತ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಮೂವರ ಕಡಿಮೆ ರನ್​ಗಳಿಗೆ ಪತನಗೊಳ್ಳುವುದರೊಂದಿಗೆ 49/5 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.  ಅಂತೂ 133 ರನ್ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ 140 ರನ್​ಗಳ ಗುರಿ ನೀಡಿದ ಭಾರತ ತಂಡ ಕೊಂಚ ಉತ್ತಮ ಬೌಲಿಂಗ್ ಮಾಡಿದರೂ ದಕ್ಷಿಣ ಆಫ್ರಿಕನ್ನರ ಆಟದ ವಿರುದ್ಧ ಮಣಿಯಲೇಬೇಕಾಯಿತು.


    ಅಗ್ರ ಆಟಗಾರರ ನೀರಸ ಪ್ರದರ್ಶನ
    ಕೆಎಲ್ ರಾಹುಲ್-ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ರೋಹಿತ್ ಶರ್ಮಾ15 ರನ್​ಗೆ ಲುಂಗಿ ಎನ್ಗಿಡಿ ಎಸೆತಕ್ಕೆ ಕ್ಯಾಚ್ ನೀಡಿ ಔಟ್ ಆಗಿದ್ದರು. ವಿರಾಟ್ ಕೊಹ್ಲಿ ಸಹ 12 ರನ್​ಗಳಿಗೆ ಔಟ್ ಆಗಿ ಬೇಸರ ಮೂಡಿಸಿದ್ದರು. 


    10 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡ ಭಾರತ ತಂಡ 60 ರನ್ ಗಳಿಸಲಷ್ಟೇ ಸಫಲವಾಗಿತ್ತು. ಒಟ್ಟಾರೆ 20 ಓವರ್​ಗಳ ಮುಕ್ತಾಯಕ್ಕೆ 133 ರನ್​ಗಳನ್ನಷ್ಟೇ ಕಲೆಹಾಕಲು ಟೀಮ್ ಇಂಡಿಯಾ ಶಕ್ತವಾಗಿತ್ತು.


    ದಕ್ಷಿಣ ಆಫ್ರಿಕಾ ಬ್ಯಾಟರ್​ಗಳ ಆರ್ಭಟ
    ಭಾನುವಾರ ನಡೆದ ಸೂಪರ್ 12 ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಮತ್ತು ಏಡೆನ್ ಮಾರ್ಕ್ರಾಮ್ ಅವರ ಉತ್ತಮ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾವು ಭಾರತದ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. 134 ರನ್‌ಗಳ ಗುರಿಯನ್ನು  19.4 ಓವರ್‌ಗಳಲ್ಲಿ   5 ವಿಕೆಟ್ ನಷ್ಟಗಳಿಂದ 137 ರನ್​ ಗಳಿಸಿ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿತು. ದಕ್ಷಿಣ ಆಫ್ರಿಕಾ ಪರ ಮಿಲ್ಲರ್ 59 ರನ್ ಗಳಿಸಿ ಅಜೇಯರಾಗಿ ಉಳಿದರು.  ಮಾರ್ಕ್ರಾಮ್ 51 ರನ್ ಗಳಿಸಿ ಗೆಲುವಿಗೆ ಕಾಣಿಕೆ ನೀಡಿದರು. ಇದಕ್ಕೂ ಮೊದಲು, ಲುಂಗಿ ಎನ್‌ಗಿಡಿ ನಾಲ್ಕು ವಿಕೆಟ್‌ಗಳ ಸಾಧನೆಯೊಂದಿಗೆ ಭಾರತದ ಅಗ್ರ ಕ್ರಮಾಂಕವನ್ನು ಅಲುಗಾಡಿಸಿದರು.


    ಇದನ್ನೂ ಓದಿ: T20 World Cup 2022: ನನ್ನ ಮನೆಗೆ ಈಗ ಯಾರೂ ಕಲ್ಲು ಎಸೆಯುವುದಿಲ್ಲ, ಟೀಂ ಇಂಡಿಯಾ ಆಟಗಾರನ ಶಾಕಿಂಗ್​ ಹೇಳಿಕೆ!


    ಕಳಪೆ ಆಟವಾಡಿದರೂ ವಿರಾಟ್ ಕೊಹ್ಲಿ ಸಾಧನೆ
    ದಕ್ಷಿಣ ಆಫ್ರಿಕಾ ವಿರುದ್ಧದ ಇಂದಿನ ಟಿ20 ಪಂದ್ಯದಲ್ಲಿ ಕಡಿಮೆ ರನ್​ಗಳಿಗೆ ಔಟ್ ಆದರೂ ವಿರಾಟ್ ಕೊಹ್ಲಿ ಸಾಧನೆಯೊಂದನ್ನು ಮಾಡಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ 31 ಪಂದ್ಯಗಳಲ್ಲಿ 1016 ರನ್ ಗಳಿಸುವ ಮೂಲಕ ಪ್ರಮುಖ ರನ್ ಗಳಿಸಿದ ಮಹೇಲಾ ಜಯವರ್ಧನೆ ಮಾತ್ರ ಈ ಸಾಧನೆ ಮಾಡಿದ್ದರು. ಕೊಹ್ಲಿ ತಮ್ಮ 24ನೇ ಪಂದ್ಯದಲ್ಲಿ ಟಿ20 ವಿಶ್ವಕಪ್ 1000 ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಪಂದ್ಯಾವಳಿಯಲ್ಲಿ 1000 ರನ್ ಗಡಿಯನ್ನು ದಾಟಿದ ಎರಡನೇ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.


    ಹೀಗಿತ್ತು ಎರಡೂ ತಂಡಗಳ ಪ್ಲೇಯಿಂಗ್ ಇಲವೆನ್ ಹೀಗಿತ್ತು


    ಭಾರತ ತಂಡ
    ರೋಹಿತ್ ಶರ್ಮಾ (ನಾಯಕ) , ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ , ಅರ್ಷದೀಪ್ ಸಿಂಗ್ , ರಿಷಭ್ ಪಂತ್ , ದೀಪಕ್ ಹೂಡಾ, ಹರ್ಷಲ್ ಪಟೇಲ್. ಯುಜ್ವೇಂದ್ರ ಚಹಾಲ್.


    ಇದನ್ನೂ ಓದಿ: T20 World Cup 2022: ಬಿಗ್​ ಟೀಂ ಗಳಿಗೆ ಎಚ್ಚರಿಕೆ ನೀಡಿದ ಕ್ರಿಕೆಟ್​ ಶಿಶುಗಳು, 21 ಪಂದ್ಯಗಳಲ್ಲಿ 4 ಶಾಕಿಂಗ್​ ರಿಸಲ್ಟ್


    ಸೌತ್ ಆಫ್ರಿಕಾ ತಂಡ
    ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ (ನಾಯಕ) , ರಿಲೀ ರೊಸ್ಸೊ , ಐಡೆನ್ ಮಾರ್ಕ್ರಾಮ್ , ಟ್ರಿಸ್ಟಾನ್ ಸ್ಟಬ್ಸ್ , ಡೇವಿಡ್ ಮಿಲ್ಲರ್ , ವೇಯ್ನ್ ಪಾರ್ನೆಲ್ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಅನ್ರಿಕ್ ನೋಕಿಯಾ, ತಬ್ರೇಝ್ ಶಮ್ಸಿ , ಲುಂಗಿ ಎನ್​ಗಿಡಿ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್.

    Published by:ಗುರುಗಣೇಶ ಡಬ್ಗುಳಿ
    First published: