IND vs SA: ದೀಪಾವಳಿಗೆ ಗೆಲುವಿನ ಉಡುಗೊರೆ; ಸರಣಿ ಕ್ಲೀನ್​ಸ್ವೀಪ್ ಮಾಡಿದ ಟೀಂ ಇಂಡಿಯಾ

335 ರನ್​ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಡುಪ್ಲೆಸಿಸ್ ಪಡೆ ಮತ್ತೆ ಟೀಂ ಇಂಡಿಯಾ ಬೌಲರ್​ಗಳ ಮಾರಕ ದಾಳಿಗೆ ನಲುಗಿ ಹೋಯಿತು.

Vinay Bhat | news18-kannada
Updated:October 22, 2019, 9:59 AM IST
IND vs SA: ದೀಪಾವಳಿಗೆ ಗೆಲುವಿನ ಉಡುಗೊರೆ; ಸರಣಿ ಕ್ಲೀನ್​ಸ್ವೀಪ್ ಮಾಡಿದ ಟೀಂ ಇಂಡಿಯಾ
ಟೀಂ ಇಂಡಿಯಾ ಆಟಗಾರರು
Vinay Bhat | news18-kannada
Updated: October 22, 2019, 9:59 AM IST
ಬೆಂಗಳೂರು (ಅ. 22): ರಾಂಚಿಯ ಜೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ 202 ರನ್​ಗಳ ಬೃಹತ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮೂರನ್ನೂ ಗೆದ್ದು ಬೀಗಿದ ಕೊಹ್ಲಿ ಪಡೆ ಸರಣಿ ಕ್ಲೀನ್​​ಸ್ವೀಪ್ ಮಾಡಿದೆ.

ಎರಡನೇ ಇನ್ನಿಂಗ್ಸ್​ನಲ್ಲೂ ಕೊಹ್ಲಿ ಪಡೆಯ ಬೌಲಿಂಗ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಹರಿಣಗಳು ಮೂರನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 132 ರನ್ ಕಲೆಹಾಕಿತ್ತು.

 


Loading...



ನಾಲ್ಕನೇ ದಿನವಾದ ಇಂದು ಎರಡು ವಿಕೆಟ್ ಕೈಯಲ್ಲಿಟ್ಟುಕೊಂಡು ಬ್ಯಾಟಿಂಗ್​ಗೆ ಇಳಿದ ಆಫ್ರಿಕಾ ಎರಡನೇ ಓವರ್​ನಲ್ಲೇ ಆಲೌಟ್ ಆಯಿತು. ಶಹ್ಬಾದ್ ನದೀಂ ಬ್ರ್ಯೂನ್​(30) ಹಾಗೂ ಕಗಿಸೊ ರಬಾಡ(0) ಉಳಿದ ಎರಡು ವಿಕೆಟ್ ಕಿತ್ತರು. ಈ ಮೂಲಕ ಆಫ್ರಿಕಾ 133 ರನ್​ಗೆ ಆಲೌಟ್ ಆಯಿತು.

ಕೊಹ್ಲಿ-ರೋಹಿತ್ ನಡುವೆ ಎಲ್ಲವು ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ!

ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ರೋಹಿತ್ ಶರ್ಮಾ ದ್ವಿಶತಕ, ರಹಾನೆ ಶತಕ ಹಾಗೂ ಜಡೇಜಾ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 497 ರನ್ ಗಳಿಸಿರುವಾಗ ಡಿಕ್ಲೇರ್ ಮಾಡಿಕೊಂಡಿತ್ತು.

ಬಳಿಕ ಬ್ಯಾಟ್ ಮಾಡಿದ ಆಫ್ರಿಕಾವನ್ನು 162 ರನ್​ಗಳಿಗೆ ಆಲೌಟ್ ಮಾಡಿ ಕೊಹ್ಲಿ ಟೀಂ ಫಾಲೋಆನ್ ಹೇರಿತು. 335 ರನ್​ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಡುಪ್ಲೆಸಿಸ್ ಪಡೆ ಮತ್ತೆ ಟೀಂ ಇಂಡಿಯಾ ಬೌಲರ್​ಗಳ ಮಾರಕ ದಾಳಿಗೆ ನಲುಗಿ ಹೋಯಿತು.

IND vs SA: ಬೌಲಿಂಗ್​ನಲ್ಲೂ ಮಿಂಚುತ್ತಿರುವ ಕೊಹ್ಲಿ ಪಡೆ; ಇಲ್ಲಿವೆ 3ನೇ ದಿನದಾಟದ ರೋಚಕ ಕ್ಷಣಗಳು

ಪರಿಣಾಮ 3ನೇ ದಿನದಾಟದ ಅಂತ್ಯಕ್ಕೆ ಆಫ್ರಿಕಾ 8 ವಿಕೆಟ್ ಕಳೆದುಕೊಂಡು 132 ರನ್ ಕಲೆಹಾಕಿದೆ. 203 ರನ್​ಗಳ ಹಿನ್ನಡೆಯಲ್ಲಿದೆ. ಭಾರತ ಪರ 2ನೇ ಇನ್ನಿಂಗ್ಸ್​ನಲ್ಲಿ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ಉಮೇಶ್ ಯಾದವ್ 2, ರವೀಂದ್ರ ಜಡೇಜಾ ಹಾಗೂ ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.
First published:October 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...