ಬೆಂಗಳೂರು (ಅ. 10): ಪುಣೆಯ ಮಹಾರಾಷ್ಟ್ರ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಮಯಾಂಕ್ ಅಗರ್ವಾಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.
183 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ಅಗರ್ವಾಲ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎರಡನೇ ಶತಕದ ಸಾಧನೆ ಮಾಡಿದರು. ಆದರೆ, ಸೆಂಚುರಿ ಬಳಿಕ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದ ಮಯಾಂಕ್ 108 ರನ್ಗೆ ಔಟ್ ಆದರು.
ಸದ್ಯ ನಾಯಕ ವಿರಾಟ್ ಕೊಹ್ಲಿ ಜೊತೆ ಅಜಿಂಕ್ಯ ರಹಾನೆ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರಂಭದಲ್ಲೇ ಭಾರತ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಕಳೆದ ಟೆಸ್ಟ್ನ ಎರಡೂ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ರೋಹಿತ್ ಈ ಬಾರಿ ಕೇವಲ 14 ರನ್ ಗಳಿಸಿ ಕೀಪರ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಬಳಿಕ ಮಯಾಂಕ್ ಅಗರ್ವಾಲ್ ಜೊತೆಯಾದ ಚೇತೇಶ್ವರ್ ಪೂಜಾರ ಉತ್ತಮ ಇನ್ನಿಂಗ್ಸ್ ಕಟ್ಟುದರು. ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿರುವ ಈ ಜೋಡಿ ಅತ್ಯುತ್ತಮ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಇವರಿಬ್ಬರು 138 ರನ್ಗಳ ಅಮೋಘ ಆಟ ಪ್ರದರ್ಶಿಸಿದರು. ಆದರೆ, ಪೂಜಾರ ಅರ್ಧಶತಕ ಬಾರಿಸಿದ ಬೆನ್ನಲ್ಲೆ 58 ರನ್ಗೆ ಔಟ್ ಆದರು.
ಎರಡನೇ ಟೆಸ್ಟ್ಗೆ ಭಾರತ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದೆ. ಹನುಮಾ ವಿಹಾರಿ ಕೈಬಿಟ್ಟು ಬೌಲರ್ ಉಮೇಶ್ ಯಾದವ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ- ನಾಯಕ), ವೃದ್ದಿಮಾನ್ ಸಾಹ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್.
ದಕ್ಷಿಣ ಆಫ್ರಿಕಾ ತಂಡ: ಆ್ಯಡೆನ್ ಮರ್ಕ್ರಮ್, ಡೇನ್ ಎಲ್ಗರ್, ದೆನಿಸ್ ಡೆ ಬ್ರ್ಯೂನ್, ತೆಂಬಾ ಬವುಮಾ, ಫಾಫ್ ಡುಪ್ಲೆಸಿಸ್ (ನಾಯಕ), ಕ್ವಿಂಟನ್ ಡಿಕಾಕ್ (ವಿಕೆಟ್-ಕೀಪರ್), ಸೆನುರನ್ ಮುಥುಸಾಮಿ, ವೆರ್ನನ್ ಫಿಲಂಡರ್, ಕೇಶವ್ ಮಹರಾಜ್, ಕಗಿಸೊ ರಬಾಡ, ಆ್ಯನ್ರಿಚ್ ನಾರ್ಟ್ಜೆ.
Getting match ready be like 👌🏻👌🏻🇮🇳🇮🇳 #TeamIndia #INDvSA @Paytm pic.twitter.com/4w2bZNkUbR
— BCCI (@BCCI) October 10, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ