ಬೆಂಗಳೂರು (ಅ. 03): ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತ 400ರ ಗಡಿ ದಾಟಿ ಬೃಹತ್ ಮೊತ್ತ ಪೇರಿಸುತ್ತಿದೆ.
ಎರಡನೇ ದಿನವನ್ನು ಭರ್ಜರಿ ಆಗಿ ಆರಂಭಿಸಿರುವ ಭಾರತ ಪರ ರೋಹಿತ್ ಶರ್ಮಾ 176 ರನ್ ಗಳಿಸಿ ಔಟ್ ಆದರೆ, ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿ ತಮ್ಮ ಅಮೋಘ ಇನ್ನಿಂಗ್ಸ್ ಅಂತ್ಯಗೊಳಸಿದ್ದಾರೆ.
ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 59.1 ಓವರ್ಗೆ ವಿಕೆಟ್ ನಷ್ಟವಿಲ್ಲದೆ 202 ರನ್ ಕಲೆಹಾಕಿತ್ತು. ರೋಹಿತ್ ಶರ್ಮಾ 115 ಹಾಗೂ ಮಯಾಂಕ್ ಅಗರ್ವಾಲ್ 84 ರನ್ ಬಾರಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಎರಡನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿದ ಇವರಿಬ್ಬರು ಬಿರುಸಿನ ಆಟದ ಮೊರೆ ಹೋದರು. ಮಯಾಂಕ್ ಅಗರ್ವಾಲ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. 204 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಅಗರ್ವಾಲ್ ಸೆಂಚುರಿ ಸಿಡಿಸಿದರು.
ಇತಿಹಾಸ ಸೃಷ್ಟಿಸಿದ ರೋ’ಹಿಟ್’; ಭಾರತೀಯ ಎಲ್ಲಾ ಆಟಗಾರರ ದಾಖಲೆ ಧೂಳಿಪಟ ಮಾಡಿದ ಹಿಟ್ಮ್ಯಾನ್!
ರೋಹಿತ್ 150 ರನ್ ಪೂರೈಸಿ ಸ್ಫೋಟಕ ಆಟವಾಡಿ ದ್ವಿಶತಕದ ಅಂಚಿನಲ್ಲಿ ಎಡವಿದರು. 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ ರೋಹಿತ್ 176 ರನ್ ಗಳಿಸಿರುವಾಗ ಮಹರಾಜ್ ಬೌಲಿಂಗ್ನಲ್ಲಿ ಸ್ಟಂಪ್ಔಟ್ಗೆ ಬಲಿಯಾಗ ಬೇಕಾಯಿತು. ಈ ಮೂಲಕ ರೋಹಿತ್-ಮಯಾಂಕ್ ತ್ರಿಶತಕದ ಜೊತೆಯಾಟ ಅಂತ್ಯಕಂಡಿತು.
ಬಳಿಕ ಬಂದ ಚೇತೇಶ್ವರ್ ಪೂಜಾರ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದೆ 6 ರನ್ಗೆ ಬ್ಯಾಟ್ ಕೆಳಗಿಟ್ಟರು. ನಾಯಕ ವಿರಾಟ್ ಕೊಹ್ಲಿ ಕೂಡ 20 ರನ್ಗೆ ಸುಸ್ತಾದರು. ಈ ಸಂದರ್ಭ ಅಜಿಂಕ್ಯ ರಹಾನೆ ಜೊತೆಗೂಡಿ ಮಯಾಂಕ್ ದ್ವಿಶತಕ ಪೂರೈಸಿದರು. ಆದರೆ, ಡಬಲ್ ಸೆಂಚುರಿ ಸಿಡಿಸಿ ಅಗರ್ವಾಲ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
371 ಎಸೆತಗಳಲ್ಲಿ 26 ಬೌಂಡರಿ ಹಾಗೂ 6 ಸಿಕ್ಸರ್ ಚಚ್ಚಿ ಅಗರ್ವಾಲ್ 215 ರನ್ಗೆ ಔಟ್ ಆದರು. ರಹಾನೆ 15 ರನ್ಗೆ ನಿರ್ಗಮಿಸಿದರು.
Going strong and how 💪💪
300-run partnership between @mayankcricket & @ImRo45
Live - https://t.co/67i9pBSlAp #INDvSA pic.twitter.com/dBuPk3MVhr
— BCCI (@BCCI) October 3, 2019
🙌🙌@ImRo45 #INDvSA pic.twitter.com/BsqCeWdTQm
— BCCI (@BCCI) October 2, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ