India Vs South Africa: ಮಳೆಯದ್ದೇ ಆಟ; ಮೊದಲ ಟಿ-20 ಪಂದ್ಯ ರದ್ದು

IND vs SA 1st T20I at Dharamsala: ಮೈದಾನದ ಸಿಬ್ಬಂದಿಗಳು ಮೈದಾನವನ್ನು ಸಜ್ಜುಗೊಳಿಸುವ ಹೊತ್ತಿಗೆ ಮತ್ತೆ ಮಳೆರಾಯ ಕಾಟ ನೀಡುತ್ತಿದ್ದಾನೆ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದು ಮಾಡಲಾಗಿದೆ.

Vinay Bhat | news18-kannada
Updated:September 15, 2019, 10:41 PM IST
India Vs South Africa: ಮಳೆಯದ್ದೇ ಆಟ; ಮೊದಲ ಟಿ-20 ಪಂದ್ಯ ರದ್ದು
ಪಂದ್ಯಕ್ಕೆ ಮಳೆ ಅಡ್ಡಿ
  • Share this:
ಧರ್ಮಶಾಲ (ಸೆ. 15): ಮಹಾರಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವೆ ನಡೆಯಬೇಕಿದ್ದ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ದಾಗಿದೆ.

ಮೈದಾನವಿಡಿ ನೀರು ತುಂಬಿರುವ ಕಾರಣ ಒಂದು ಎಸೆತ ಕಾಣದೆ ಪಂದ್ಯವನ್ನು ರದ್ದು ಮಾಡಲಾಗಿದೆ. ಟಾಸ್ ಪ್ರಕ್ರಿಯೆಗೆ ಕೊಂಚ ಹೊತ್ತು ಕಾದರು ಮತ್ತೆ ಜೋರಾಗಿ ಮಳೆ ಸುರಿಯಿತು.

 

ಕಳೆದ ಮೂರು ದಿನಗಳಿಂದ ಧರ್ಮಶಾಲದಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಇಂದುಕೂಡ ಬೆಳಗ್ಗಿನಿಂದಲೆ ತುಂತುರು ಮಳೆ ಆಗುತ್ತಿತ್ತು. ಇನ್ನು ಶನಿವಾರ ಗುಡುಗು-ಗಾಳಿ ಸಹಿತ ವಿಪರೀತ ಮಳೆ ಇದ್ದ ಕಾರಣ ಟೀಂ ಇಂಡಿಯಾ ಅಭ್ಯಾಸವನ್ನೂ ಸ್ಥಗಿತಗೊಳಿಸಬೇಕಾಗಿ ಬಂದಿತ್ತು.

ಮೈದಾನದ ಸಿಬ್ಬಂದಿಗಳು ಮೈದಾನವನ್ನು ಸಜ್ಜುಗೊಳಿಸುವ ಹೊತ್ತಿಗೆ ಮತ್ತೆ ಮಳೆರಾಯ ಕಾಟ ನೀಡುತ್ತಿದ್ದಾನೆ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದು ಮಾಡಲಾಗಿದೆ.

ಭಾರತ-ದ. ಆಫ್ರಿಕಾ ಮಧ್ಯೆ ಮುಂದಿನ ಪಂದ್ಯ ಸೆ. 18 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂತಿಮ ಟಿ-20 ಸೆ. 22 ರಂದು ಬೆಂಗಳೂರಿನಲ್ಲಿ ಆಡಲಿದೆ.

 

First published: September 15, 2019, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading