India vs South Africa, Live: ಭಾರತ 497/9 ಡಿಕ್ಲೇರ್; ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡ ಆಫ್ರಿಕಾ

ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತ್ತು. ರೋಹಿತ್ ಶರ್ಮಾ ದಾಖಲೆಯ ಮೂರನೇ ಶತಕ ಸಿಡಿಸಿ ಮಿಂಚಿದ್ದರು.

Vinay Bhat | news18-kannada
Updated:October 20, 2019, 3:48 PM IST
India vs South Africa, Live: ಭಾರತ 497/9 ಡಿಕ್ಲೇರ್; ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡ ಆಫ್ರಿಕಾ
ಟೀಂ ಇಂಡಿಯಾ
  • Share this:
ಬೆಂಗಳೂರು (ಅ. 20): ರಾಂಚಿಯ ಜೆಎಸ್​​ಸಿಎ ಕ್ರೀಡಾಂಗಣದಲ್ಲಿ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ಪೇರಿಸಿದೆ. ರೋಹಿತ್ ಶರ್ಮಾ ಆಕರ್ಷಕ ದ್ವಿಶತಕ, ಅಜಿಂಕ್ಯ ರಹಾನೆ ಶತಕ ಹಾಗೂ ಜಡೇಜಾ ಅರ್ಧಶತಕದ ನೆರವಿನಿಂದ ಭಾರತ 497 ರನ್​ಗೆ ಡಿಕ್ಲೇರ್ ಮಾಡಿಕೊಂಡಿದೆ.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಹರಿಣಗಳಿಗೆ ಆರಂಭದಲ್ಲೇ ಆಘಾತ ಉಂಟಾಗಿದೆ. ಡೇನ್ ಎಲ್ಗರ್​ನನ್ನು ಶಮಿ ಶೂನ್ಯಕ್ಕೆ ಪೆವಿಲಿಯನ್​ಗೆ ಅಟ್ಟಿದರೆ, ಕ್ವಿಂಟನ್ ಡಿಕಾಕ್​ 4 ರನ್​ಗೆ ಸುಸ್ತಾದರು.

ಜುಬಾಯ್ರ್​​ ಹಂಜಾ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಕ್ರೀಸ್​ನಲ್ಲಿದ್ದಾರೆ. ಆಫ್ರಿಕಾ 5 ಓವರ್​ಗೆ 9 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಾರತ ಪರ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದಿದ್ದಾರೆ.

ಇಂದು ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ಅಜಿಂಕ್ಯ ರಹಾನೆ ಶತಕ ಬಾರಿಸಿ ರೋಹಿತ್ ಶರ್ಮಾ ಜೊತೆಗೂಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಆದರೆ, ಶತಕದ ಬೆನ್ನಲ್ಲೆ ರಹಾನೆ ಔಟ್ ಆಗಿ, ಭಾರತ 4ನೇ ವಿಕೆಟ್ ಕಳೆದುಕೊಂಡಿತು.

ಟೆಸ್ಟ್​ ಕ್ರಿಕೆಟ್​ನಲ್ಲಿ 11ನೇ ಶತಕ ಬಾರಿಸಿದ ರಹಾನೆ 192 ಎಸೆತಗಳಲ್ಲಿ 17 ಬೌಂಡರಿ 1 ಸಿಕ್ಸರ್ ಸಿಡಿಸಿ 115 ರನ್ ಗಳಿಸಿ ಬ್ಯಾಟ್ ಕೆಳಗಿಟ್ಟರು. ಈ ಮೂಲಕ ರಹಾನೆ-ರೋಹಿತ್ ನಡುವಣ 267 ರನ್​ಗಳ ಅಮೋಘ ಜೊತೆಯಾಟಕ್ಕೆ ಬ್ರೇಕ್ ಬಿತ್ತು.

ಕೆ ಎಲ್ ರಾಹುಲ್ ಜೊತೆ ಲವ್ವಿ-ಡವ್ವಿ; ಮನ ಬಿಚ್ಚಿ ಮಾತನಾಡಿದ ನಿಧಿ ಅಗರ್ವಾಲ್!

ಬಳಿಕ ರವೀಂದ್ರ ಜಡೇಜಾ ಜೊತೆಯಾದ ರೋಹಿತ್ ಬಿರುಸಿನ ಆಟದ ಮೊರೆ ಹೋದರು. ಅಬ್ಬರಿಸಿದ ಹಿಟ್​ಮ್ಯಾನ್ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಅದರಲ್ಲು ಚೆಂಡನ್ನು ಸಿಕ್ಸ್​ಗೆ ಅಟ್ಟಿ ರೋಹಿತ್ 200 ರನ್ ಗಳಿಸಿದ್ದು ವಿಶೇಷವಾಗಿತ್ತು. ದ್ವಿಶತಕ ಬಾರಿಸಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ರೋಹಿತ್ 255 ಎಸೆತಗಳಲ್ಲಿ 28 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ 212 ರನ್​ಗೆ ನಿರ್ಗಮಿಸಿದರು.ಇತ್ತ ಜಡೇಜಾ ಜೊತೆ ವೃದ್ದಿಮಾನ್ ಸಾಹ(24) ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಿಲ್ಲ. ಆದರೂ ಉತ್ತಮ ಆಟವಾಡಿದ ಜಡೇಜಾ 119 ಎಸೆತಗಳಲ್ಲಿ 51 ರನ್ ಬಾರಿಸಿದರು. ಆರ್ ಅಶ್ವಿನ್ 14 ರನ್ ಕಲೆಹಾಕಿದರಷ್ಟೆ.

 ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಉಮೇಶ್ ಯಾದವ್ ಕೇವಲ 10 ಎಸೆತಗಳಲ್ಲಿ 5 ಸಿಕ್ಸರ್ ಚಚ್ಚಿ 31 ರನ್ ಸಿಡಿಸಿದರು. ಅಂತಿಮವಾಗಿ ಭಾರತ 116.3 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 497 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು. ಶಹ್ಬಾದ್ ನದೀಂ 1 ಹಾಗೂ ಮೊಹಮ್ಮದ್ ಶಮಿ 10 ರನ್ ಗಳಿಸಿ ಅಜೇಯರಾಗಿ ಉಳಿದರು.

ಆಫ್ರಿಕಾ ಪರ ಜಾರ್ಜ್ ಲಿಂಡೆ 4 ವಿಕೆಟ್ ಕಿತ್ತರೆ, ಕಗಿಸೊ ರಬಾಡ 3, ಆನ್ರಿಚ್ ನಾರ್ಟ್ಜ್​ ಹಾಗೂ ಡೇನ್ ಪಿಡ್ಟ್​ ತಲಾ 1 ವಿಕೆಟ್ ಪಡೆದರು.

87 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು; ರೋಹಿತ್-ಮಯಾಂಕ್ ಸೃಷ್ಟಿಸಿದ ವಿಶ್ವದಾಖಲೆ ಏನು ಗೊತ್ತಾ?

ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತ್ತು.

ಓಪನರ್ ಮಯಾಂಕ್ ಅಗರ್ವಾಲ್ 10 ರನ್ ಗಳಿಸಿ ರಬಾಡ ಬೌಲಿಂಗ್​ನಲ್ಲಿ ಔಟ್ ಆಗಿದ್ದರೆ, ಬಂದ ಬೆನ್ನಲ್ಲೆ ಚೇತೇಶ್ವರ್ ಪೂಜಾರ ಸೊನ್ನೆ ಸುತ್ತಿದ್ದರು. ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 12 ರನ್ ಗಳಿಸಿರುವಾಗ ಎಲ್​ಬಿ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು.
First published:October 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading