India vs South Africa: ರೋಹಿತ್-ರಹಾನೆ ಭರ್ಜರಿ ಆಟ; ಮೊದಲ ದಿನದಾಟದ ಅಂತ್ಯಕ್ಕೆ ಭಾರತ 224-3

185 ರನ್​ಗಳ ಅಮೋಘ ಜೊತೆಯಾಟ ಆಡುತ್ತಿರುವ ರೋಹಿತ್-ರಹಾನೆ ಜೋಡಿ ನಾಳೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಭಾರತ 58 ಓವರ್​ನಲ್ಲಿ 3 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿದೆ.

Vinay Bhat | news18-kannada
Updated:October 19, 2019, 4:00 PM IST
India vs South Africa: ರೋಹಿತ್-ರಹಾನೆ ಭರ್ಜರಿ ಆಟ; ಮೊದಲ ದಿನದಾಟದ ಅಂತ್ಯಕ್ಕೆ ಭಾರತ 224-3
ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ
  • Share this:
ಬೆಂಗಳೂರು (ಅ. 19): ರಾಂಚಿಯ ಜೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.

ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಅಜಿಂಕ್ಯ ರಹಾನೆ ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿದೆ. ಮಲೆ ಬಂದ ಪರಿಣಾಮ ಮೊದಲ ದಿನದಾಟವನ್ನು ತುಸು ಬೇಗನೆ ಅಂತ್ಯಗೊಳಿಸಲಾಯಿತು.

 

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತಕ್ಕೆ ಆರಂಭಿಕ ಆಘಾತ ಉಂಟಾಯಿತು.

ಓಪನರ್ ಮಯಾಂಕ್ ಅಗರ್ವಾಲ್ 10 ರನ್ ಗಳಿಸಿ ರಬಾಡ ಬೌಲಿಂಗ್​ನಲ್ಲಿ ಔಟ್ ಆದರೆ, ಬಂದ ಬೆನ್ನಲ್ಲೆ ಚೇತೇಶ್ವರ್ ಪೂಜಾರ ಸೊನ್ನೆ ಸುತ್ತಿದರು. ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 12 ರನ್ ಗಳಿಸಿರುವಾಗ ಎಲ್​ಬಿ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು.

ಕೊಹ್ಲಿ ಅಭಿಮಾನಿಗಳಿಗೆ ಆಘಾತ; ಬಾಂಗ್ಲಾ ಸರಣಿಯಿಂದ ವಿರಾಟ್ ಹೊರಕ್ಕೆ?

ಬಳಿಕ ಒಂದಾದ ರೋಹಿತ್ ಶರ್ಮಾ ಜೊತೆ ಉಪ ನಾಯಕ ಅಜಿಂಕ್ಯ ರಹಾನೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಅತ್ಯುತ್ತಮ ಜೊತೆಯಾಟ ಆಡಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು.

ಅರ್ಧಶತಕ ಸಿಡಿಸಿದ ಬೆನ್ನಲ್ಲೆ ಬಿರುಸಿನ ಆಟದ ಮೊರೆಹೋದ ಹಿಟ್​ಮ್ಯಾನ್ ಚೆಂಡನ್ನು ಬೌಂಡರಿ-ಸಿಕ್ಸರ್​ಗೆ ಅಟ್ಟಿದರು. ಪರಿಣಾಮ ಟೆಸ್ಟ್​ ಕ್ರಿಕೆಟ್​ನಲ್ಲಿ 6ನೇ ಶತಕ ಪೂರೈಸಿದರು. 130 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ರೋಹಿತ್ ಸೆಂಚುರಿ ಬಾರಿಸಿದರು. ಇತ್ತ ರಹಾನೆ ಕೂಡ ಅರ್ಧಶತಕ ಸಿಡಿಸಿದರು.

185 ರನ್​ಗಳ ಅಮೋಘ ಜೊತೆಯಾಟ ಆಡುತ್ತಿರುವ ಈ ಜೋಡಿ ನಾಳೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಭಾರತ 58 ಓವರ್​ನಲ್ಲಿ 3 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿದೆ.

 Rohit Sharma: ಚೆಂಡನ್ನು ಸಿಕ್ಸ್​ಗೆ ಅಟ್ಟಿ ಬ್ಯಾಟ್​ ಎತ್ತಿದ ರೋಹಿತ್; ಹಿಟ್​ಮ್ಯಾನ್​ನಿಂದ ಶತಕದ ದಾಖಲೆ

ರೋಹಿತ್ ಶರ್ಮಾ 164 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿ 117 ರನ್ ಗಳಿಸಿ ಹಾಗೂ ರಹಾನೆ 135 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 83 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಫ್ರಿಕಾ ಪರ ಕಗಿಸೊ ರಬಾಡ 2 ಹಾಗೂ ಆನ್ರಿಚ್ ನಾರ್ಟ್ಜ್​ 1 ವಿಕೆಟ್ ಪಡೆದಿದ್ದಾರೆ.

ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದ್ದು ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲು ಶಹ್ಬಾಜ್ ನದೀಮ್ ಟೆಸ್ಟ್​ಗೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ- ನಾಯಕ), ವೃದ್ದಿಮನ್ ಸಾಹ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಹ್ಬಾಜ್ ನದೀಮ್, ಮೊಹಮ್ಮದ್ ಶಮಿ.

ದ. ಆಫ್ರಿಕಾ ತಂಡ: ಡೇನ್ ಎಲ್ಗರ್, ಕ್ವಿಂಟನ್ ಡಿಕಾಕ್, ಜುಬಾಯ್ರ್ ಹಂಜಾ, ಫಾಪ್ ಡುಪ್ಲೆಸಿಸ್ (ನಾಯಕ), ತೆಂಬಾ ಬವುಮಾ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಜಾರ್ಜ್ ಲಿಂಡೆ, ಡೇನ್ ಪಿಡ್ಟ್​, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ಲುಂಗಿ ಎನ್​ಗಿಡಿ.
First published: October 19, 2019, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading