ಬೆಂಗಳೂರು (ಅ. 21): ರಾಂಚಿಯ ಜೆಎಸ್ಸಿಎ ಕ್ರೀಡಾಂಗಣದಲ್ಲಿ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ನಲ್ಲೂ ಅದ್ಭುತ ಪ್ರದರ್ಶನ ತೋರಿದೆ. ಆಫ್ರಿಕಾವನ್ನು ಮೊದಲ ಇನ್ನಿಂಗ್ಸ್ನಲ್ಲಿ 162 ರನ್ಗಳಿಗೆ ಆಲೌಟ್ ಮಾಡಿ ಫಾಲೋಆನ್ ಹೇರಿದೆ. ಭಾರತ 335 ರನ್ಗಳ ಮುನ್ನಡೆ ಸಾಧಿಸಿದೆ.
ಸದ್ಯ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಫ್ರಿಕಾ 50 ರನ್ಗೂ ಮೊದಲೆ 5 ವಿಕೆಟ್ ಕಳೆದುಕೊಂಡಿದೆ. ಕ್ವಿಂಟನ್ ಡಿಕಾಕ್(5) ಹಾಗೂ ಜುಬಾಯ್ರ್ ಹಂಜಾ(0) ಕ್ಲೀನ್ ಬೌಲ್ಡ್ ಆದರೆ, ನಾಯಕ ಫಾಪ್ ಡುಪ್ಲೆಸಿಸ್ 4 ರನ್ ಗಳಿಸಿ ನಿರ್ಗಮಿಸಿದರು. ತೆಂಬಾ ಬವುಮಾ ಸೊನ್ನೆ ಸೊತ್ತಿದರು. ಕ್ಲಾಸೆನ್ ಆಟ 5 ರನ್ಗೆ ಅಂತ್ಯವಾಯಿತು.
2ನೇ ಇನ್ನಿಂಗ್ಸ್ನಲ್ಲಿ ಭಾರತ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತಿದ್ದರೆ, ಉಮೇಶ್ ಯಾದವ್ 2 ವಿಕೆಟ್ ಪಡೆದಿದ್ದಾರೆ.
ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 9 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ ಇಂದು ಕೂಡ ಬೇಗನೆ ವಿಕೆಟ್ ಕಳೆದುಕೊಂಡಿತು. ಯಾವೊಬ್ಬ ಬ್ಯಾಟ್ಸ್ಮನ್ ಕ್ರೀಸ್ ಕಚ್ಚಿ ಆಡಲಿಲ್ಲ.
ಇಂದು ಮೂರನೇ ದಿನದಾಟ ಆರಂಭಿಸಿದ ಹರಿಣಗಳಿಗೆ ಭಾರತೀಯ ಬೌಲರ್ಗಳು ಆರಂಭದಲ್ಲೇ ಆಘಾತ ನೀಡಿದರು. ನಾಯಕ ಫಾಪ್ ಡುಪ್ಲೆಸಿಸ್ನನ್ನ 1 ರನ್ ಗಳಿಸಿರುವಾಗ ಬೌಲ್ಡ್ ಮಾಡುವಲ್ಲಿ ಉಮೇಶ್ ಯಾದವ್ ಯಶಸ್ವಿಯಾರು.
ಆದರೆ, ಈ ಸಂದರ್ಭ ಒಂದಾದ ತೆಂಬಾ ಬವುಮಾ ಹಾಗೂ ಜುಬಾಯ್ರ್ ಹಂಜಾ ತಂಡಕ್ಕೆ ಆಸರೆಯಾಗಿ ನಿಂತರು. ಎಚ್ಚರಿಕೆಯಿಂದ ಆಟ ಪ್ರದರ್ಶಿಸಿದ ಈ ಜೋಡಿ ಪೈಕಿ ಹಂಜಾ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು.
ಧೋನಿ ಸ್ಥಾನ ತುಂಬಲು ನಾನು ರೆಡಿ ಎಂದ ಟೀಂ ಇಂಡಿಯಾದ ಅವಕಾಶ ವಂಚಿತ ಆಟಗಾರ
91 ರನ್ಗಳ ಜೊತೆಯಾಟ ಆಡಿದ ಇವರಿಬ್ಬರು ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಸಂದರ್ಭ ಬೌಲಿಂಗ್ಗೆ ಬಂದ ಜಡೇಜಾ 62 ರನ್ ಬಾರಿಸಿದ್ದ ಹಂಜಾರನ್ನು ಕ್ಲೀನ್ ಬೌಲ್ಡ್ ಮಾಡಿ ಬ್ರೇಕ್ ನೀಡಿದರು.
That moment when you pick up your first Test wicket.
Shahbaz Nadeem, welcome to Test cricket 👏👏 pic.twitter.com/nk43i8o1Ee
— BCCI (@BCCI) October 21, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ