India vs South Africa 1st Test: ವಿಜಾಗ್​ನಲ್ಲಿ ಮಿಂಚಿದ ಕೊಹ್ಲಿ ಹುಡುಗರು; ಭಾರತಕ್ಕೆ ಬೃಹತ್ ಅಂತರದ ಗೆಲುವು

315 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

  • Share this:
ಬೆಂಗಳೂರು (ಅ. 06): ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ 203 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಜಡೇಜಾ-ಶಮಿ ಬೌಲಿಂಗ್ ದಾಳಿಗೆ ನಲುಗಿದ ಹರಿಣಗಳು ಸೋಲುಣ್ಣಬೇಕಾಯಿತು.

ಅಂತಿಮ 5ನೇ ದಿನದಾಟದ ಆರಂಭದಲ್ಲೆ ಭಾರತೀಯ ಬೌಲರ್​ಗಳು ಹರಿಣಗಳಿಗೆ ಶಾಕ್ ನೀಡಿದರು. ನಿನ್ನೆ ನಾಲ್ಕನೇ ದಿನದಂದು ಭಾರತ 2ನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ನಷ್ಟಕ್ಕೆ 323 ರನ್ ಕಲೆಹಾಕಿದ ಪರಿಣಾಮ ಆಫ್ರಿಕಾಕ್ಕೆ ಗೆಲ್ಲಲು 395 ರನ್​ಗಳ ಟಾರ್ಗೆಟ್ ನೀಡಿತ್ತು. 4ನೇ ದಿನದಾಟದ ಅಂತ್ಯಕ್ಕೆ ಹರಿಣಗಳು ಡೇನ್ ಎಲ್ಗರ್(2) ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತ್ತು.

5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆ್ಯಡನ್ ಮರ್ಕ್ರಮ್ ಹಾಗೂ ಥೆನಿಸ್ ಡೆ ಬ್ರ್ಯೂನ್ ಪೈಕಿ ಬ್ರ್ಯೂನ್ 10 ರನ್ ಗಳಿಸಿ ಅಶ್ವಿನ್ ಸ್ಪಿನ್ ಮೋಡಿಗೆ ಬೌಲ್ಡ್​ ಆದರು. ಬಂದ ಬೆನ್ನಲ್ಲೆ ಮುಂದಿನ ಶಮಿ ಅವರ ಓವರ್​ನಲ್ಲಿ ತೆಂಬಾ ಬವುಮಾ ಸೊನ್ನೆ ಸುತ್ತಿ ಪೆವಿಲಿಯನ್​ಗೆ ನಡೆದರು.

IND vs SA: ಜಡೇಜಾ ಮ್ಯಾಜಿಕ್ ಕ್ಯಾಚ್​ಗೆ ಶಾಕ್ ಆದ ಆಫ್ರಿಕಾ ಬ್ಯಾಟ್ಸ್​ಮನ್​; ಇಲ್ಲಿದೆ ವಿಡಿಯೋ

ನಾಯಕ ಫಾಫ್ ಡುಪ್ಲೆಸಿಸ್ ಆಟ 13 ರನ್​ಗೆ ಅಂತ್ಯವಾದರೆ, ಮೊದಲ ಇನ್ನಿಂಗ್ಸ್​ನಲ್ಲಿ ಸೆಂಚುರಿ ಸಿಡಿಸಿದ್ದ ಡಿಕಾಕ್ ಶೂನ್ಯಕ್ಕೆ ನಿರ್ಗಮಿಸಿದರು. ಇತ್ತ ಮರ್ಕ್ರಮ ಹೋರಾಟ 39 ರನ್​ಗೆ ಕೊನೆಗೊಂಡಿತು.

9ನೇ ವಿಕೆಟ್​ಗೆ ಡೇನ್ ಪಿಡ್ಟ್​ ಹಾಗೂ ಮುಥುಸಾಮಿ ಅತ್ಯುತ್ತಮ ಜೊತೆಯಾಟ ಆಡಿದರು. ಆದರೆ, ಉಪಯೋಗವಾಗಿಲ್ಲ. ಪಿಡ್ಟ್(56)​ ಆಕರ್ಷಕ ಅರ್ಧಶತಕ ಬಾರಿಸಿದರು. ಮುಥುಸಾಮಿ ಅಜೇಯ 49 ರನ್ ಗಳಿಸಿದರು.ಅಂತಿಮವಾಗಿ 63.5 ಓವರ್​ನಲ್ಲೇ ಕೇವಲ 191 ರನ್​ಗೆ ದಕ್ಷಿಣ ಆಫ್ರಿಕಾ ಸರ್ವಪತನ ಕಂಡಿತು. ಭಾರತ ಪರ ಜಡೇಜಾ 4 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 5 ಹಾಗೂ ಅಶ್ವಿನ್ 1 ವಿಕೆಟ್ ಪಡೆದರು.203 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮುರಳೀಧರನ್ ವಿಶ್ವ ದಾಖಲೆ ಸರಿಗಟ್ಟಿದ ಅಶ್ವಿನ್:

ಆರ್. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 350 ವಿಕೆಟ್‌ಗಳನ್ನು ಕಿತ್ತ ಸಾಧನೆ ಮಾಡಿದರು. ಒಟ್ಟು 349 ವಿಕೆಟ್‌ಗಳನ್ನು ಪಡೆದಿದ್ದ ಚೆನ್ನೈ ಸ್ಪಿನ್ನರ್ ಅಶ್ವಿನ್‌ಗೆ ಮುರಳೀಧರನ್ ವಿಶ್ವ ದಾಖಲೆ ಸರಿಗಟ್ಟಲು ಒಂದು ವಿಕೆಟ್ ಅಗತ್ಯವಿತ್ತು. ಮುರಳೀಧರನ್ 2001ರಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ 66ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಸದ್ಯ ಅಶ್ವಿನ್ ಕೂಡ 66ನೇ ಪಂದ್ಯದಲ್ಲಿ 350 ವಿಕೆಟ್ ಪೂರೈಸಿ ಮುರಳೀಧರನ್ ದಾಖಲೆಯನ್ನು ಸರಿಗಟ್ಟಿದ್ದಾರೆ.ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಮಯಾಂಕ್ ಅಗರ್ವಾಲ್​ರ ಆಕರ್ಷಕ ದ್ವಿಶತಕ ಹಾಗೂ ರೋಹಿತ್ ಶರ್ಮಾ ಶತಕದ ನೆರವಿನಿಂದ 502 ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ 431 ರನ್​ಗೆ ಆಲೌಟ್ ಆಗಿತ್ತು.

71 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ ಭಾರತ ರೋಹಿತ್ ಶರ್ಮಾ ಶತಕ ಹಾಗೂ ಚೇತೇಶ್ವರ್ ಪೂಜಾರ ಅರ್ಧಶತಕದ ಕಾಣಿಕೆ ಫಲವಾಗಿ 323 ರನ್​​ಗೆ ಡಿಕ್ಲೇರ್ ಮಾಡಿತ್ತು. ಈ ಮೂಲಕ ಆಫ್ರಿಕಾಗೆ ಗೆಲ್ಲಲು 395 ರನ್​ಗಳ ಕಠಿಣ ಟಾರ್ಗೆಟ್ ನೀಡಿತ್ತು.
First published: