IND vs SA: ರೋಹಿತ್ 176, ಮಯಾಂಕ್ 215; ಭಾರತ 502 ರನ್​ಗೆ ಡಿಕ್ಲೇರ್

ರೋಹಿತ್ 150 ರನ್ ಪೂರೈಸಿ ಸ್ಫೋಟಕ ಆಟವಾಡಿ ದ್ವಿಶತಕದ ಅಂಚಿನಲ್ಲಿ ಎಡವಿದರು. 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ ರೋಹಿತ್ 176 ರನ್ ಗಳಿಸಿರುವಾಗ ಮಹರಾಜ್ ಬೌಲಿಂಗ್​ನಲ್ಲಿ ಸ್ಟಂಪ್​ಔಟ್​ಗೆ ಬಲಿಯಾಗ ಬೇಕಾಯಿತು.

ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್

ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್

  • Share this:
ಬೆಂಗಳೂರು (ಅ. 03): ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತ 502 ರನ್​ಗೆ ಡಿಕ್ಲೇರ್ ಮಾಡಿಕೊಂಡಿದೆ. ರೋಹಿತ್ ಶರ್ಮಾ ಅಮೋಘ 176 ರನ್ ಸಿಡಿಸಿದರೆ, ಮಯಾಂಕ್ ಅಗರ್ವಾಲ್ ಚೊಚ್ಚಲ ದ್ವಿಶತಕ ಬಾರಿಸಿದ್ದು ಇಂದಿನ ದಿನದ ಹೈಲೈಟ್!

ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 59.1 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 202 ರನ್ ಕಲೆಹಾಕಿತ್ತು. ರೋಹಿತ್ ಶರ್ಮಾ 115 ಹಾಗೂ ಮಯಾಂಕ್ ಅಗರ್ವಾಲ್ 84 ರನ್ ಬಾರಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಎರಡನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿದ ಇವರಿಬ್ಬರು ಬಿರುಸಿನ ಆಟದ ಮೊರೆ ಹೋದರು. ಮಯಾಂಕ್ ಅಗರ್ವಾಲ್ ಟೆಸ್ಟ್​ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. 204 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಅಗರ್ವಾಲ್ ಸೆಂಚುರಿ ಸಿಡಿಸಿದರು.

(VIDEO): IND vs SA; ರೋಹಿತ್ ಶರ್ಮಾ ಔಟ್ ಆಗಿ ಪೆವಿಲಿಯನ್ ಹೋದಾಗ ಕೊಹ್ಲಿ ಮಾಡಿದ್ದೇನು ಗೊತ್ತಾ?

 



ರೋಹಿತ್ 150 ರನ್ ಪೂರೈಸಿ ಸ್ಫೋಟಕ ಆಟವಾಡಿ ದ್ವಿಶತಕದ ಅಂಚಿನಲ್ಲಿ ಎಡವಿದರು. 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ ರೋಹಿತ್ 176 ರನ್ ಗಳಿಸಿರುವಾಗ ಮಹರಾಜ್ ಬೌಲಿಂಗ್​ನಲ್ಲಿ ಸ್ಟಂಪ್​ಔಟ್​ಗೆ ಬಲಿಯಾಗ ಬೇಕಾಯಿತು. ಈ ಮೂಲಕ ರೋಹಿತ್-ಮಯಾಂಕ್ ತ್ರಿಶತಕದ ಜೊತೆಯಾಟ ಅಂತ್ಯಕಂಡಿತು. (ಇತಿಹಾಸ ಸೃಷ್ಟಿಸಿದ ರೋ’ಹಿಟ್​’; ಭಾರತೀಯ ಎಲ್ಲಾ ಆಟಗಾರರ ದಾಖಲೆ ಧೂಳಿಪಟ ಮಾಡಿದ ಹಿಟ್​ಮ್ಯಾನ್​!)

ಬಳಿಕ ಬಂದ ಚೇತೇಶ್ವರ್ ಪೂಜಾರ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 6 ರನ್​ಗೆ ಬ್ಯಾಟ್ ಕೆಳಗಿಟ್ಟರು. ನಾಯಕ ವಿರಾಟ್ ಕೊಹ್ಲಿ ಕೂಡ 20 ರನ್​ಗೆ ಸುಸ್ತಾದರು. ಈ ಸಂದರ್ಭ ಅಜಿಂಕ್ಯ ರಹಾನೆ ಜೊತೆಗೂಡಿ ಮಯಾಂಕ್ ದ್ವಿಶತಕ ಪೂರೈಸಿದರು. ಆದರೆ, ಡಬಲ್ ಸೆಂಚುರಿ ಸಿಡಿಸಿ ಅಗರ್ವಾಲ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

371 ಎಸೆತಗಳಲ್ಲಿ 26 ಬೌಂಡರಿ ಹಾಗೂ 6 ಸಿಕ್ಸರ್ ಚಚ್ಚಿ ಅಗರ್ವಾಲ್ 215 ರನ್​ಗೆ ಔಟ್ ಆದರು. ರಹಾನೆ 15 ರನ್​ಗೆ ನಿರ್ಗಮಿಸಿದರು.  (IND vs SA: ಟೆಸ್ಟ್ ಕ್ರಿಕೆಟ್​ನಲ್ಲಿ ಕನ್ನಡಿಗನ ಚೊಚ್ಚಲ ಶತಕ; ದಾಖಲೆಯ ಜೊತೆಯಾಟಕ್ಕೆ ಕ್ರಿಕೆಟ್ ದೇವರು ಹೇಳಿದ್ದೇನು?)

ಹನುಮಾ ವಿಹಾರಿ(10) ಹಾಗೂ ವೃದ್ದಿಮಾನ್ ಸಾಹ ಆಟ 21 ರನ್​ಗೆ ನಿಂತಿತು. ಅಂತಿಮವಾಗಿ ಭಾರತ 136 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 502 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು. ಆಫ್ರಿಕಾ ಪರ ಕೇಶವ್ ಮಹರಾಜ್ 3 ವಿಕೆಟ್ ಕಿತ್ತಿದ್ದರೆ, ಫಿಲಿಂಡರ್, ಮುಥುಸ್ವಾಮಿ, ಡೇನ್ ಪಿಡ್ಟ್​ ಹಾಗೂ ಎಲ್ಗರ್ ತಲಾ 1 ವಿಕೆಟ್ ಪಡೆದರು.

ಭಾರತ ಪರ ರವೀಂದ್ರ ಜಡೇಜಾ 30 ಹಾಗೂ ಆರ್ ಅಶ್ವಿನ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.

Take a bow, Mayank Agarwal 🙌🙌@Paytm #INDvSA pic.twitter.com/ESHjPbXP1A

First published: