ಕೆ ಎಲ್ ರಾಹುಲ್​ ಬಗ್ಗು ಬಡಿದು ಶುಭ್ಮನ್ ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು ಹೇಗೆ ಗೊತ್ತಾ?

Shubman Gill: ದೇಶೀಯ ಕ್ರಿಕೆಟ್​ನಲ್ಲಿ ಈವರೆಗೆ 14 ಪಂದ್ಯಗಳನ್ನು ಆಡಿರುವ ಗಿಲ್ 1443 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕ ವಿದ್ದರೆ, 8 ಅರ್ಧಶತಕ ಸೇರಿವೆ. ಗರಿಷ್ಠ ಸ್ಕೋರ್ 268 ಆಗಿದೆ.

Vinay Bhat | news18-kannada
Updated:September 13, 2019, 10:55 AM IST
ಕೆ ಎಲ್ ರಾಹುಲ್​ ಬಗ್ಗು ಬಡಿದು ಶುಭ್ಮನ್ ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು ಹೇಗೆ ಗೊತ್ತಾ?
Shubman Gill: ದೇಶೀಯ ಕ್ರಿಕೆಟ್​ನಲ್ಲಿ ಈವರೆಗೆ 14 ಪಂದ್ಯಗಳನ್ನು ಆಡಿರುವ ಗಿಲ್ 1443 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕ ವಿದ್ದರೆ, 8 ಅರ್ಧಶತಕ ಸೇರಿವೆ. ಗರಿಷ್ಠ ಸ್ಕೋರ್ 268 ಆಗಿದೆ.
  • Share this:
ಬೆಂಗಳೂರು (ಸೆ. 13): ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಅಂದುಕೊಂಡಂತೆ ಕಳಪೆ ಫಾರ್ಮ್​ನಲ್ಲಿರುವ ಕೆ ಎಲ್ ರಾಹುಲ್​ರನ್ನು ತಂಡದಿಂದ ಕೈಬಿಡಲಾಗಿದೆ. ಇವರ ಬದಲು ಓಪನರ್ ಆಗಿ ಭಾರತ ಪರ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ ಎಂಬ ವಿಚಾರವನ್ನು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಹೇಳಿದ್ದು ಆಗಿದೆ. ಈ ಮಧ್ಯೆ ಯುವ ಆಟಗಾರ ಶುಭ್ಮನ್ ಗಿಲ್​ಗೆ ಅವಕಾಶ ನೀಡಿರುವುದು ವಿಶೇಷ!

ಮೊನ್ನೆಯಷ್ಟೆ 20ನೇ ವರ್ಷಕ್ಕೆ ಕಾಲಿಟ್ಟ ಗಿಲ್ ಈಗಾಗಲೇ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಎರಡು ಪಂದ್ಯಗಳನ್ನು ಆಡಿದ್ದಾರೆ. ಇಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲವಾದರು, ನಂತರ ನಡೆದ ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಆಟ ಆಡಿದರು.

Important to be completely switched on when it's your day - Gill
ಶುಭ್ಮನ್ ಗಿಲ್​


ಗುರುವಾರಷ್ಟೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್​ನಲ್ಲಿ ಭಾರತ ಎ ಪರ ಗಿಲ್ 90 ರನ್ ಬಾರಿಸಿ ನಾಯಕನಾಗಿ ತಂಡಕ್ಕೆ ಗೆಲುವು ತಂದಿಟ್ಟಿದ್ದರು. ಅಷ್ಟೇ ಅಲ್ಲದೆ ಕಳೆದ ಕೆಲ ವರ್ಷಗಳಿಂದ ದೇಶೀಯ ಟೂರ್ನಿಯಲ್ಲಿ ಗಿಲ್ ಅಮೋಘ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ವೆಸ್ಟ್​ ಇಂಡೀಸ್ ಎ ವಿರುದ್ಧದ ಟೆಸ್ಟ್​ನಲ್ಲೂ 204 ರನ್ ಸಿಡಿಸಿ ದ್ವಿಶತಕದ ಸಾಧನೆ ಮಾಡಿದ್ದರು.

ಅನುಷ್ಕಾ ಜೊತೆ ಸ್ನೇಹ ಬೆಳೆಸಿದರೆ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತ ಎಂದವನಿಗೆ ಈ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?

ಆದರೆ, ಇತ್ತ ಕೆ ಎಲ್ ರಾಹುಲ್​ಗೆ ಅವಕಾಶ ನೀಡಿದಷ್ಟು ಅದನ್ನು ಕಳೆದುಕೊಂಡು ಬಂದರು. ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಯಲ್ಲಂತು ರಾಹುಲ್ ಸಂಪೂರ್ಣ ವಿಫಲರಾದರು. ಕಳೆದ ಎರಡು ವರ್ಷಗಳಲ್ಲಿ ರಾಹುಲ್ 15 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಕೇವಲ 1 ಶತಕವಷ್ಟೆ ಸೇರಿದೆ. ಸರಾಸರಿ 22.23 ಹೊಂದಿದ್ದಾರಷ್ಟೆ.

ಹೀಗಾಗಿ ದೇಶೀಯ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಗಿಲ್​ಗೆ ಅವಕಾಶ ಹುಡುಕಿ ಬಂದಿದೆ. ಅಂತರಾಷ್ಟ್ರೀಯ ಟೆಸ್ಟ್​​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಹಂಬಲ ಹೊಂದಿದ್ದಾರೆ.ದೇಶೀಯ ಕ್ರಿಕೆಟ್​ನಲ್ಲಿ ಈವರೆಗೆ 14 ಪಂದ್ಯಗಳನ್ನು ಆಡಿರುವ ಗಿಲ್ 1443 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕ ವಿದ್ದರೆ, 8 ಅರ್ಧಶತಕ ಸೇರಿವೆ. ಗರಿಷ್ಠ ಸ್ಕೋರ್ 268 ಆಗಿದೆ.

ಗಿಲ್​ರನ್ನು ಆಯ್ಕೆ ಮಾಡಿದ ಬಗ್ಗೆ ಮಾತನಾಡಿರುವ ಆಯ್ಕೆ ಸಮಿತಿ ಅಧ್ಯಕ್ಷ ಪ್ರಸಾದ್, 'ನಾವು ಗಿಲ್​ರನ್ನು ಓಪನರ್ ಆಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಆಡಿಸಬೇಕೆಂದಿದ್ದೇವೆ. ಇವರಿಗೆ ಸಾಕಷ್ಟು ಅವಕಾಶ ನೀಡಬೇಕು. ಯಾಕೆಂದರೆ ಗಿಲ್ ಮೂರು ಮಾಧರಿಯ ಕ್ರಿಕೆಟ್​ನಲ್ಲಿ ಆಡಬಲ್ಲ ಪ್ರತಿಭಾವಂತ ಆಟಗಾರ' ಎಂದು ಹೇಳಿದ್ದಾರೆ.

 ಇನ್ನು ತನಗೆ ಅವಕಾಶ ಸಿಕ್ಕ ಬಗ್ಗೆ ಖುಷಿ ಹಂಚಿಕೊಂಡ ಗಿಲ್, 'ನೀಲಿ ಅಥವಾ ಬಿಳಿ ಆಗಿರಲಿ ನನಗೆ ನಮ್ಮ ದೇಶವನ್ನು ಪ್ರತಿನಿಧಿಸುವುದು ಯಾವಾಗಲು ಗೌರವ ನೀಡುತ್ತದೆ. ನಾನು ದ. ಆಫ್ರಿಕಾ ಎ ವಿರುದ್ಧದ ಟೆಸ್ಟ್​ ಮುಗಿದ ಬಳಿಕ ಡ್ರೆಸ್ಸಿಂಗ್​ ರೂಮ್​ಗೆ ತೆರಳುತ್ತಿರುವ ವೇಳೆ ಸಹ ಆಟಗಾರರು ಟೆಸ್ಟ್​ ತಂಡಕ್ಕೆ ಆಯ್ಕೆ ಆಗಿರುವ ಬಗ್ಗೆ ತಿಳಿಸಿದರು. ಮೊಬೈಲ್ ಫೋನ್ ಕೈಗೆತ್ತಿಕೊಂಡು ನೋಡಿದೆ. ತುಂಬಾ ಮಿಸ್ ಕಾಲ್ ಮತ್ತು ಸಂದೇಶಗಳಿತ್ತು. ನನಗೆ ತುಂಬಾ ಸಂತಸವಾಗಿದೆ. ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸತ್ತೇನೆ' ಎಂದು ಗಿಲ್ ಹೇಳಿದರು.

ದ. ಆಫ್ರಿಕಾ ವಿರುದ್ಧದ ಟೆಸ್ಟ್​ಗೆ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್​ ಅಗರ್ವಾಲ್​​, ರೋಹಿತ್​ ಶರ್ಮಾ, ಚೇತೇಶ್ವರ​ ಪೂಜಾರ್, ಅಜಿಂಕ್ಯಾ ರಹಾನೆ (ಉಪ-ನಾಯಕ), ಹನುಮ ವಿಹಾರಿ, ರಿಷಬ್​ ಪಂತ್​ (ವಿಕೆಟ್​ ಕೀಪರ್​), ವೃದ್ಧಿಮಾನ್​ ಸಾಹ, (ವಿಕೆಟ್​ ಕೀಪರ್​), ರವಿಚಂದ್ರನ್​ ಅಶ್ವಿನ್​, ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​, ಮೊಹ್ಮದ್​ ಶಮಿ, ಜಸ್​ಪ್ರೀತ್​​ ಬುಮ್ರಾ, ಇಶಾಂತ್​ ಶರ್ಮಾ, ಶುಭ್​ಮನ್​​ ಗಿಲ್​.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading