IND vs SA: ಶುಭಾರಂಭದ ನಿರೀಕ್ಷೆಯಲ್ಲಿ ಕೊಹ್ಲಿ ಪಡೆ; ಟೀಂ ಇಂಡಿಯಾ ಪರ ಯಾರೆಲ್ಲ ಕಣಕ್ಕೆ?

ಮೇಲ್ನೋಟಕ್ಕೆ ಭಾರತ ಬಲಿಷ್ಠವಾಗಿದೆ. ಇತ್ತ ಕ್ವಿಂಟನ್ ಡಿಕಾಕ್ ಪಡೆಯನ್ನೂ ಕಡೆಗಣಿಸುವಂತಿಲ್ಲ. ಹೊಸ ಹುರುಪಿನೊಂದಿಗೆ ಭಾರತಕ್ಕೆ ಶಾಕ್ ನೀಡಲು ಡಿಕಾಕ್, ಕಿಲ್ಲರ್-ಮಿಲ್ಲರ್, ರಬಾಡ ರಂತಹ ಸ್ಟಾರ್ ಆಟಗಾರರಿದ್ದಾರೆ.

Vinay Bhat | news18-kannada
Updated:September 15, 2019, 2:52 PM IST
IND vs SA: ಶುಭಾರಂಭದ ನಿರೀಕ್ಷೆಯಲ್ಲಿ ಕೊಹ್ಲಿ ಪಡೆ; ಟೀಂ ಇಂಡಿಯಾ ಪರ ಯಾರೆಲ್ಲ ಕಣಕ್ಕೆ?
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
  • Share this:
ಬೆಂಗಳೂರು (ಸೆ. 15): ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ಸಜ್ಜಾಗಿದೆ. ಧರ್ಮಶಾಲದಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡುವ ತವಕದಲ್ಲಿದೆ ಕೊಹ್ಲಿ ಪಡೆ.

ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿ ಫೈನಲ್​ನಲ್ಲಿ ನಿರ್ಗಮಿಸಿದ ಬಳಿಕ ವೆಸ್ಟ್​ ಇಂಡೀಸ್ ವಿರುದ್ಧ ಅವರ ನೆಲದಲ್ಲೇ ಬಗ್ಗು ಬಡಿದು ಟೀಂ ಇಂಡಿಯಾ ಭರ್ಜರಿ ಕಮ್​ಬ್ಯಾಕ್ ಮಾಡಿತ್ತು. ಈಗ ತವರಿನಲ್ಲಿ ಮತ್ತೊಂದು ಬಲಿಷ್ಠ ತಂಡದ ಎದುರು ಅಗ್ನಿ ಪರೀಕ್ಷೆಗೆ ಮುಂದಾಗಿದೆ. ಕೊಹ್ಲಿ ಪಡೆ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಕೂಡ ಇದೆ.

ಈ ಹಿಂದೆ ಧರ್ಮಶಾಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ಒಂದು ಟಿ-20 ಪಂದ್ಯದಲ್ಲಿ ಭಾರತ ಸೋಲುಂಡಿತ್ತು. ಹೀಗಾಗಿ ಸೇಡಿನ ಪಂದ್ಯಕೂಡ ಹೌದು. ಇನ್ನು ಟೀಂ ಇಂಡಿಯಾ ಆಡುವ ಬಳಗ ಹೇಗರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಸಂಭಾವ್ಯ ಪಟ್ಟಿ ನೋಡುವುದಾದರೆ.

 ಭರ್ಜರಿ ಫಾರ್ಮ್​ನಲ್ಲಿರುವ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಅಬ್ಬರಿಸಿದ್ದರು. ಹೀಗಾಗಿ ಓಪನರ್ ಆಗಿ ಹಿಟ್​ಮ್ಯಾನ್​​ ಕಣಕ್ಕಿಳಿಯುವುದ ಪಕ್ಕ. ಕೆರಿಬಿಯನ್ ಪ್ರವಾಸದಲ್ಲಿ ಫಾರ್ಮ್ ವೈಫಲ್ಯ ಅನುಭವಿಸಿದ್ದ ಶಿಖರ್ ಧವನ್ ಭಾರತ ಎ ಪರ ಆಡಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಅದರಲ್ಲು ತವರಿನಲ್ಲಿ ಪಂದ್ಯ ಆಗಿರುವುದರಿಂದ ಧವನ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

Virat Kohli: ನಾನು ದೊಡ್ಡ ಪಾಠ ಕಲಿತಿದ್ದೇನೆ; ಧೋನಿ ವಿಚಾರದಲ್ಲಿ ಬೇಸರ ಹೊರಹಾಕಿದ ವಿರಾಟ್ ಕೊಹ್ಲಿ!

ನಾಯಕ ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದ ಆಸ್ತಿ. ನಾಯಕನಾಗಿ ತಂಡವನ್ನು ಮುನ್ನಡೆಸುವ ಜೊತೆಗೆ ಈ ಬಾರಿ ಯುವ ಆಟಗಾರರಿಗೆ ಸ್ಫೂರ್ತಿ ತುಂಬಬೇಕಿದೆ. ಇವರ ಜೊತೆಗೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಕೈತುಂಬಾ ಬಾಜಿಕೊಂಡ ಶ್ರೇಯಸ್ ಐಯರ್ ಆಯ್ಕೆ ಸಮಿತಿಯ ನಂಬಿಕೆ ಉಳಿಸಿಕೊಂಡರು. ಟೀಂ ಇಂಡಿಯಾದಲ್ಲಿ ಕಾಡುತ್ತಿರುವ ಬಹುಕಾಲದ 4ನೇ ಕ್ರಮಾಂಕಕ್ಕೆ ಐಯರ್ ಸೂಕ್ತ ಆಟಗಾರ ಎಂದೇ ಹೇಳಲಾಗುತ್ತಿದೆ.

ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್​​ ಪಂತ್ ತನ್ನ ಕೊನೆಯ ಟಿ-20 ಯಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಇವರು ಕೀ ಪ್ಲೇಯರ್ ಆಗಿದ್ದಾರೆ. ಇಂಜುರಿ, ವಿಶ್ರಾಂತಿ ಬಳಿಕ ಕಮ್​ಬ್ಯಾಕ್​​ ಮಾಡಿರುವ ಹಾರ್ದಿಕ್ ಪಾಂಡ್ಯ ಈಗಾಗಲೇ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಹೀಗಾಗಿ ಹಾರ್ದಿಕ್ ಆಲ್ರೌಂಡರ್ ಆಟಕ್ಕೆ ಅಭಿಮಾನಿಗಳು ಕಾತುರದಲ್ಲಿದ್ದಾರೆ.

ವಿಂಡೀಸ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕ್ರುನಾಲ್ ಪಾಂಡ್ಯ ಸರಣಿಶ್ರೇಷ್ಠ ಬಾಜಿಕೊಂಡಿದ್ದರು. ಹೀಗಾಗಿ ಇವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕ. ಬ್ಯಾಟಿಂಗ್-ಬೌಲಿಂಗ್-ಫಿಲ್ಡಿಂಗ್​ನಲ್ಲಿ ರವೀಂದ್ರ ಜಡೇಜಾ ಭಾರತಕ್ಕೆ ನೆರವಾಗಲಿದ್ದಾರೆ. ವಿಶ್ವಕಪ್ ಟಿ-20 ವೇಳೆಗೆ ಜಡೇಜಾ ಸಂಪೂರ್ಣ ಫಿಟ್ ಆದರೆ ಟೀಂ ಇಂಡಿಯಾಕ್ಕೆ ಉಪಯುಕ್ತವಾಗಲಿದೆ.

 ವೇಗಿಗಳಿಗೆ ಹೇಳಿ ಮಾಡಿದ ಪಿಚ್ ಆಗಿರುವ ಧರ್ಮಶಾಲ ಖಲೀಲ್ ಹೇಲೆ ಹೆಚ್ಚಿನ ನಿರೀಕ್ಷೆಯಿದೆ. ಇನ್ನು ವಿಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ತನ್ನ ಸ್ವಿಂಗ್ ಮೂಲಕ ಎದುರಾಳಿಗೆ ಕಾಡಿದ್ದ ದೀಪಕ್ ಚಹಾರ್ ಈ ಬಾರಿಯು ಅದೇ ಮಾರಕ ದಾಳಿ ಸಂಘಟಿಸಿದರೆ ಟಿ-20 ಪಂದ್ಯದಲ್ಲಿ ಸ್ಥಾನ ಖಾಯಂ ಆಗಲಿದೆ. ಟೀಂ ಇಂಡಿಯಾ ಭರವಸೆಯ ಬೌಲರ್ ನವ್​ದೀಪ್ ಸೈನಿ. ಈಗಾಗಲೇ ತನ್ನ ಸಾಮರ್ಥ್ಯ ತೋರಿರುವ ಸೈನಿಗೆ ಈ ಸರಣಿ ಮುಖ್ಯವಾಗಿದೆ.

ಒಟ್ಟಾರೆ ಮೇಲ್ನೋಟಕ್ಕೆ ಭಾರತ ಬಲಿಷ್ಠವಾಗಿದೆ. ಇತ್ತ ಕ್ವಿಂಟನ್ ಡಿಕಾಕ್ ಪಡೆಯನ್ನೂ ಕಡೆಗಣಿಸುವಂತಿಲ್ಲ. ಹೊಸ ಹುರುಪಿನೊಂದಿಗೆ ಭಾರತಕ್ಕೆ ಶಾಕ್ ನೀಡಲು ಡಿಕಾಕ್, ಕಿಲ್ಲರ್-ಮಿಲ್ಲರ್, ರಬಾಡ ರಂತಹ ಸ್ಟಾರ್ ಆಟಗಾರರಿದ್ದಾರೆ.
First published:September 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ