ಚೇಸಿಂಗ್ ಪಿಚ್​ನಲ್ಲಿ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಯಾಕೆ?; ನಾಯಕ ನೀಡಿದ ಸ್ಪಷ್ಟನೆ ಏನು ಗೊತ್ತಾ?

ಚೇಸಿಂಗ್ ಸ್ವರ್ಗದಲ್ಲಿ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವಿದೆ. ಇದಕ್ಕೆ ಸ್ಪಷ್ಟನೆಯನ್ನೂ ಕೊಹ್ಲಿ ನೀಡಿದ್ದಾರೆ.

Vinay Bhat | news18-kannada
Updated:September 22, 2019, 10:12 PM IST
ಚೇಸಿಂಗ್ ಪಿಚ್​ನಲ್ಲಿ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಯಾಕೆ?; ನಾಯಕ ನೀಡಿದ ಸ್ಪಷ್ಟನೆ ಏನು ಗೊತ್ತಾ?
5 Players who can outshine Virat Kohli in ODIs in 2020
  • Share this:
ಬೆಂಗಳೂರು (ಸೆ. 22): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ-20 ಕದನದಲ್ಲಿ ಟೀಂ ಇಂಡಿಯಾ ಸಾಧಾರಣ ಮೊತ್ತ ಕಲೆಹಾಕಿದೆ. ಪ್ರಮುಖ ಬ್ಯಾಟ್ಸ್​ಮನ್​ಗಳೇ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ 20 ಓವರ್​ಗೆ 9 ವಿಕೆಟ್ ಕಳೆದುಕೊಂಡು 134 ರನ್​ಗಳನ್ನಷ್ಟೆ ಕಲೆಹಾಕಿದೆ.

ಚಿನ್ನಸ್ವಾಮಿ ಕ್ರೀಡಾಂಗಣ ಚೇಸಿಂಗ್ ಪಿಚ್. ಹೆಚ್ಚಿನವರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಅಚ್ಚರಿ ಎಂಬಂತೆ ಕೊಹ್ಲಿ ಟಾಸ್ ಗೆದ್ದರೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 9 ಬ್ಯಾಟ್ಸ್​ಮನ್​ಗಳಿದ್ದರು ವೈಫಲ್ಯ ಅನುಭವಿಸಿದರು!

ಚೇಸಿಂಗ್ ಸ್ವರ್ಗದಲ್ಲಿ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವಿದೆ. ಇದಕ್ಕೆ ಸ್ಪಷ್ಟನೆಯನ್ನೂ ಕೊಹ್ಲಿ ನೀಡಿದ್ದಾರೆ.

India Vs South Africa Live Score: ಭಾರತೀಯ ಬ್ಯಾಟ್ಸ್​ಮನ್​ಗಳ ಕಳಪೆ ಆಟ; ಆಫ್ರಿಕಾಕ್ಕೆ 135 ಟಾರ್ಗೆಟ್

'ಈ ಪಿಚ್ ಚೇಸಿಂಗ್​ಗೆ ಹೇಳಿಮಾಡಿಸಿದ್ದು ಎಂಬುದು ತಿಳಿದಿದೆ. ಐಪಿಎಲ್​ನಲ್ಲಿ ಸಾಕಷ್ಟು ಬಾರಿ ಇದು ಸಾಭೀತಾಗಿರುವುದು ಕಂಡಿದ್ದೇವೆ. ಆದರೂ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತೇವೆ. ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಕೆಲವು ಪ್ರಯೋಗಕ್ಕೆ ಮುಂದಾಗಿದ್ದೇವೆ. ನಾವು ಯಾವ ವಿಭಾಗದಲ್ಲಿ ದುರ್ಬಲ, ಯಾವುದರಲ್ಲಿ ಬಲ ಎಂಬುದು ಈಗಲೇ ಮನವರಿಕೆ ಮಾಡಿಕೊಳ್ಳಬೇಕು'

'ನಿಜಕ್ಕು ಚೇಸಿಂಗ್​ನಲ್ಲಿ ನಮ್ಮ ತಂಡ ಬಲಿಷ್ಠವಿದೆ. ಆದರೆ, ಈ ಬಾರಿ ಬ್ಯಾಟಿಂಗ್ ಮೊದಲು ಮಾಡಿ ಪ್ರಯೋಗ ನಡೆಸುತ್ತೇವೆ. ವಿಶ್ವಕಪ್​ನಲ್ಲಿ ನಮಗೆ ಯಾವ ಆಯ್ಕೆ ಸಿಗುತ್ತದೊ ಗೊತ್ತಿಲ್ಲ. ಮೊದಲಿಗೆ ಬ್ಯಾಟಿಂಗ್ ಸಿಕ್ಕರೆ ಬ್ಯಾಟಿಂಗ್​​ಗೆ, ಬೌಲಿಂಗ್ ಸಿಕ್ಕರೆ ಅದಕ್ಕೂ ಸಿದ್ಧವಿರಬೇಕು. ಇದಕ್ಕಾಗಿ ಕೆಲವು ಯೋಜನೆಗಳೊಂದಿಗೆ ಇಂದು ಕಣಕ್ಕಿಳಿಯುತ್ತಿದ್ದೇವೆ'' ಎಂದು ಕೊಹ್ಲಿ ಹೇಳಿದರು.

ಆದರೆ, ಅಂತಿಮ ಟಿ-20 ಪಂದ್ಯದಲ್ಲಿ ಭಾರತ ಸೋಲುಂಡಿತು. ನಾಯಕ ಕ್ವಿಂಟನ್ ಡಿಕಾಕ್ ಅರ್ಧಶತಕ ಹಾಗೂ ಬೌಲರ್​​ಗಳ ಸಂಘಟಿತ ಹೋರಾಟದ ಫಲವಾಗಿ 9 ವಿಕೆಟ್​ಗಳ ಜಯ ಸಾಧಿಸಿರುವ ದ. ಆಫ್ರಿಕಾ ತಂಡ ಸರಣಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading