ರೋಹಿತ್-ಧೋನಿ ದಾಖಲೆ ಹಿಂದಿಕ್ಕಿ ಭಾರತೀಯ ಕ್ರಿಕೆಟ್​​ನಲ್ಲಿ ಅಚ್ಚರಿಯ ಸಾಧನೆ ಮಾಡಿದ ಹರ್ಮನ್​​ಪ್ರೀತ್!

ಭಾರತ ವನಿತೆಯರ ಪೈಕಿ ಹರ್ಮನ್ ಬಿಟ್ಟರೆ ಇತ್ತೀಚೆಗಷ್ಟೆ ಟಿ-20 ಕ್ರಿಕೆಟ್​ಗೆ ನಿವೃತ್ತಿ ನೀಡಿದ ಮಿಥಾಲಿ ರಾಜ್ 89 ಪಂದ್ಯಗಳನ್ನಾಡಿದ್ದಾರೆ.

Vinay Bhat | news18-kannada
Updated:October 5, 2019, 9:20 AM IST
ರೋಹಿತ್-ಧೋನಿ ದಾಖಲೆ ಹಿಂದಿಕ್ಕಿ ಭಾರತೀಯ ಕ್ರಿಕೆಟ್​​ನಲ್ಲಿ ಅಚ್ಚರಿಯ ಸಾಧನೆ ಮಾಡಿದ ಹರ್ಮನ್​​ಪ್ರೀತ್!
ಭಾರತ ವನಿತೆಯರ ಪೈಕಿ ಹರ್ಮನ್ ಬಿಟ್ಟರೆ ಇತ್ತೀಚೆಗಷ್ಟೆ ಟಿ-20 ಕ್ರಿಕೆಟ್​ಗೆ ನಿವೃತ್ತಿ ನೀಡಿದ ಮಿಥಾಲಿ ರಾಜ್ 89 ಪಂದ್ಯಗಳನ್ನಾಡಿದ್ದಾರೆ.
  • Share this:
ಬೆಂಗಳೂರು (ಅ. 05): ಪ್ರವಾಸಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಟಿ-20 ಸರಣಿ ಅಂತ್ಯಗೊಳಿಸಿರುವ ಭಾರತದ ಮಹಿಳೆಯರು ಕೊನೆಯ ಪಂದ್ಯ ಸೋತರು ಸರಣಿಯನ್ನು 3-1 ರಿಂದ ವಶ ಪಡಿಸಿಕೊಂಡಿದೆ. ಈ ನಡುವೆ ಭಾರತ ತಂಡದ ನಾಯಕಿ ಹರ್ಮನ್​​ಪ್ರೀತ್ ಕೌರ್ ಟಿ-20 ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದಿದ್ದಾರೆ.

ಟಿ-20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಪರ 100 ಪಂದ್ಯಗಳನ್ನು ಆಡಿದ ಪ್ರಥಮ ಕ್ರಿಕೆಟರ್ ಎಂಬ ನೂತನ ದಾಖಲೆ ಬರೆದಿದ್ದಾರೆ. ಆಫ್ರಿಕಾ ವಿರುದ್ಧ ಅಂತಿಮ ಆರನೇ ಟಿ-20 ಪಂದ್ಯವನ್ನಾಡುವ ಮೂಲಕ ಹರ್ಮನ್ ಈ ಸಾಧನೆ ತಮ್ಮದಾಗಿಸಿದರು.

ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಕೂಡ ಈ ಸಾಧನೆಯನ್ನು ಮಾಡಿಲ್ಲ. ರೋಹಿತ್ ಹಾಗೂ ಧೋನಿ ಈವರೆಗೆ ತಲಾ 98 ಅಂತರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿದ್ದಾರೆ.

KPL: ಮ್ಯಾಚ್ ಫಿಕ್ಸಿಂಗ್​ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು; ದೆಹಲಿಗೆ ತೆರಳಿದ ಸಿಸಿಬಿ

ಭಾರತ ವನಿತೆಯರ ಪೈಕಿ ಹರ್ಮನ್ ಬಿಟ್ಟರೆ ಇತ್ತೀಚೆಗಷ್ಟೆ ಟಿ-20 ಕ್ರಿಕೆಟ್​ಗೆ ನಿವೃತ್ತಿ ನೀಡಿದ ಮಿಥಾಲಿ ರಾಜ್ 89 ಪಂದ್ಯಗಳನ್ನಾಡಿದ್ದಾರೆ.

ನಿನ್ನೆ ಸೂರತ್​ನಲ್ಲಿ ನಡೆದ ಅಂತಿಮ ಆರನೇ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 20 ಓವರ್​ಗೆ 3 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತ್ತು.

176 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತದ ವನಿತೆಯರು ಹರಿಣಗಳ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿ ಹೋದರು. 17.3 ಓವರ್​ನಲ್ಲಿ ಕೇವಲ 70 ರನ್​​ಗೆ ಆಲೌಟ್ ಆಗುವ ಮೂಲಕ, ಆಫ್ರಿಕಾ 105 ರನ್​ಗಳಿಂದ ಗೆದ್ದು ಬೀಗಿತು.

First published:October 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading