• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಕ್ರುನಾಲ್ ಸ್ಪಿನ್​ಗೆ ಹಾರ್ದಿಕ್ ಹೆಲಿಕಾಫ್ಟರ್ ಸಿಕ್ಸ್​​; ನೆಟ್​ನಲ್ಲಿ ಅಣ್ಣ-ತಮ್ಮಂದಿರ ಭರ್ಜರಿ ತಾಲೀಮು

ಕ್ರುನಾಲ್ ಸ್ಪಿನ್​ಗೆ ಹಾರ್ದಿಕ್ ಹೆಲಿಕಾಫ್ಟರ್ ಸಿಕ್ಸ್​​; ನೆಟ್​ನಲ್ಲಿ ಅಣ್ಣ-ತಮ್ಮಂದಿರ ಭರ್ಜರಿ ತಾಲೀಮು

ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ

ಭಾರತ, ಹರಿಣಗಳ ವಿರುದ್ಧ ಮೂರು ಟಿ-20 ಹಾಗೂ ಮೂರು ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಮೊದಲ ಟಿ-20 ಪಂದ್ಯ ಸೆ. 15 ರಂದು ಧರ್ಮಶಾಲದಲ್ಲಿ ನಡೆಯಲಿದ್ದರೆ, 2ನೇ ಟಿ-20 ಸೆ. 18, ಮೊಹಾಲಿಯಲ್ಲಿ ಹಾಗೂ ಅಂತಿಮ ಪಂದ್ಯ ಸೆ. 22 ರಂದು ಬೆಂಗಳೂರಿನಲ್ಲಿ ಆಡಲಿದೆ.

  • Share this:

ಬೆಂಗಳೂರು (ಸೆ. 11): ವೆಸ್ಟ್​ ಇಂಡೀಸ್ ಸರಣಿಯಿಂದ ಹೊರಗುಳಿದಿದ್ದ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಕಮ್​ಬ್ಯಾಕ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಹಾರ್ದಿಕ್ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ.

ಅಣ್ಣ ಕ್ರುನಾಲ್ ಪಾಂಡ್ಯ ಜೊತೆ ಹಾರ್ದಿಕ್ ನೆಟ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಕ್ರುನಾಲ್ ಸ್ಪಿನ್ ಬಾಲ್​ಗೆ ಹಾರ್ದಿಕ್ ಹೆಲಿಕಾಫ್ಟರ್ ಶಾಟ್​ನಲ್ಲಿ ಸಿಕ್ಸ್​ ಹೊಡೆದು ಟಿ-20 ಸರಣಿಗೆ ನಾನು ರೆಡಿ ಎಂಬ ಸಂದೇಶ ನೀಡಿದ್ದಾರೆ.

ಭಾರತ, ಹರಿಣಗಳ ವಿರುದ್ಧ ಮೂರು ಟಿ-20 ಹಾಗೂ ಮೂರು ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಮೊದಲ ಟಿ-20 ಪಂದ್ಯ ಸೆ. 15 ರಂದು ಧರ್ಮಶಾಲದಲ್ಲಿ ನಡೆಯಲಿದ್ದರೆ, 2ನೇ ಟಿ-20 ಸೆ. 18, ಮೊಹಾಲಿಯಲ್ಲಿ ಹಾಗೂ ಅಂತಿಮ ಪಂದ್ಯ ಸೆ. 22 ರಂದು ಬೆಂಗಳೂರಿನಲ್ಲಿ ಆಡಲಿದೆ.

 ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ; ಕೋಚ್ ರವಿಶಾಸ್ತ್ರಿಯಿಂದ ಹೊಸ ಚಿಂತನೆ!

ಇನ್ನು ಮೊದಲ ಟೆಸ್ಟ್​​ ಅಕ್ಟೋಬರ್ 2 ರಿಂದ ವಿಶಾಖಪಟ್ಟಣಂ ನಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್​ ಅ. 10 ರಂದು ಪುಣೆಯಲ್ಲಿ ಹಾಗೂ ಮೂರನೇ ಟೆಸ್ಟ್​ ಅ. 19 ರಂದು ರಾಂಚಿಯಲ್ಲಿ ನಡೆಯಲಿದೆ.

ಇತ್ತ ಕ್ವಿಂಟನ್ ಡಿಕಾಕ್ ನೇತೃತ್ವದ ತಂಡ ಈಗಾಗಲೇ ಭಾರತಕ್ಕೆ ಬಂದಿಳಿದಿದೆ. ಸದ್ಯ ಅಭ್ಯಾಸದಲ್ಲಿ ಆಫ್ರಿಕಾ ಆಟಗಾರರು ನಿರತರಾಗಿದ್ದಾರೆ. ಈ ಮಧ್ಯೆ ದಕ್ಷಿಣ ಆಫ್ರಿಕಾ ಹೈ ಕಮಿಷನರ್​ ಕಚೇರಿಗೆ ಈ ತಂಡ ಭೇಟಿ ನೀಡಲಿದೆ.

ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಭಾರತ ತಂಡವಿರಾಟ್ ಕೊಹ್ಲಿ ( ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕೃುಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವದೀಪ್ ಸೈನಿ, ಹಾರ್ದಿಕ್ ಪಾಂಡ್ಯ.

First published: