ಸ್ವಲ್ಪ ತಲೆ ಉಪಯೋಗಿಸು; ಮೈದಾನದಲ್ಲೇ ರೋಹಿತ್ ಹೀಗೆ ಬೈದಿದ್ಯಾರಿಗೆ ಗೊತ್ತಾ?; ಇಲ್ಲಿದೆ ವಿಡಿಯೋ

12ನೇ ಓವರ್ ಬೌಲಿಂಗ್ ಮಾಡಿದ ನವ್​ದೀಪ್ ಸೈನಿ ಹೆಚ್ಚಿನ ರನ್ ನೀಡಿದರು. ಅದರಲ್ಲು ತೆಂಬ ಬವುಮಾ ಅವರಿಗೆ ಫುಲ್​ಟ್ರಾಸ್ ಬೌಲಿಂಗ್ ಮಾಡಿದ್ದು ಆರಾಮವಾಗಿ ಚೆಂಡು ಬೌಂಡರಿ ತಲುಪಲು ಸಹಕಾರಿ ಆಯಿತು.

Vinay Bhat | news18-kannada
Updated:September 26, 2019, 12:34 PM IST
ಸ್ವಲ್ಪ ತಲೆ ಉಪಯೋಗಿಸು; ಮೈದಾನದಲ್ಲೇ ರೋಹಿತ್ ಹೀಗೆ ಬೈದಿದ್ಯಾರಿಗೆ ಗೊತ್ತಾ?; ಇಲ್ಲಿದೆ ವಿಡಿಯೋ
ಮೈದಾನದಲ್ಲಿ ಕೋಪಗೊಂಡ ರೋಹಿತ್ ಶರ್ಮಾ
  • Share this:
ಬೆಂಗಳೂರು (ಸೆ. 26): ಇತ್ತೀಚೆಗಷ್ಟೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್-ಬೌಲಿಂಗ್​ನಲ್ಲಿ ವೈಫಲ್ಯ ಕಂಡು ಸೋಲುಣ್ಣಬೇಕಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿಣಗಳು ಗೆದ್ದುಕೊಂಡ ಪರಿಣಾಮ ಟಿ-20 ಸರಣಿ ಡ್ರಾನಲ್ಲಿ ಅಂತ್ಯಕಂಡಿತು.

ಈ ನಡುವೆ ಮೂರನೇ ಟಿ-20 ಯಲ್ಲಿ ರೋಹಿತ್ ಶರ್ಮಾ ಮೈದಾನದಲ್ಲೇ ಕೋಪಗೊಂಡು ತಮ್ಮದೇ ತಂಡದ ಆಟಗಾರ ಮೇಲೆ ರೇಗಾಡಿರುವ ವಿಡೊಯೋ ಸದ್ಯ ವೈರಲ್ ಆಗಿದೆ. ಭಾರತ ನೀಡಿದ್ದ 135 ರನ್​ಗಳ ಗುರಿ ಬೆನ್ನಟ್ಟಿದ ದ. ಆಫ್ರಿಕಾ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿತ್ತು.

ಆಫ್ರಿಕ ಬ್ಯಾಟಿಂಗ್​ನ 12ನೇ ಓವರ್ ಹೊತ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಿಂದ ಡ್ರೆಸ್ಸಿಂಗ್ ರೂಂಗೆ ತೆರಳಿದ್ದರು. ಈ ಸಂದರ್ಭ ಉಪ ನಾಯಕ ರೋಹಿತ್ ಶರ್ಮಾ ತಂಡದ ಜವಾಬ್ದಾರಿ ಹೊತ್ತರು.

IPL 2020: 13ನೇ ಆವೃತ್ತಿಯ ಐಪಿಎಲ್ ಹರಾಜಿಗೆ ಮುಹೂರ್ತ ಫಿಕ್ಸ್; ಪ್ರತಿ ಫ್ರಾಂಚೈಸಿಗೆ ಬಂಪರ್ ಆಫರ್?

12ನೇ ಓವರ್ ಬೌಲಿಂಗ್ ಮಾಡಿದ ನವ್​ದೀಪ್ ಸೈನಿ ಹೆಚ್ಚಿನ ರನ್ ನೀಡಿದರು. ಅದರಲ್ಲು ತೆಂಬ ಬವುಮಾ ಅವರಿಗೆ ಫುಲ್​ಟ್ರಾಸ್ ಬೌಲಿಂಗ್ ಮಾಡಿದ್ದು ಆರಾಮವಾಗಿ ಚೆಂಡು ಬೌಂಡರಿ ತಲುಪಲು ಸಹಕಾರಿ ಆಯಿತು.

ಇದರಿಂದ ಕೋಪಗೊಂಡ ರೋಹಿತ್ ಮೈದಾನದಲ್ಲೇ ಸೈನಿ ಅವರಿಗೆ ಸ್ವಲ್ಪ ತಲೆ ಉಪಯೋಗಿಸು ಎಂದು ಕೈ ಸನ್ನೆಯಲ್ಲಿ ತಿಳಿ ಹೇಳಿದರು. ರೋಹಿತ್ ಅವರು ಸಿಡಿಮಿಡಿಗೊಂಡ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.

 


ಕೊಹ್ಲಿ ಅಲ್ಲ; ನರೇಂದ್ರ ಮೋದಿ ಬಳಿಕ ದೇಶದಲ್ಲಿ ಜನಮೆಚ್ಚಿದ ವ್ಯಕ್ತಿ ಈ ಕ್ರಿಕೆಟಿಗ!

ಭಾರತ ಪ್ರವಾಸದಲ್ಲಿರುವ ದ. ಆಫ್ರಿಕಾ ಅಕ್ಟೋಬರ್ 2 ರಿಂದ ಮೊದಲ ಟೆಸ್ಟ್​ ಪಂದ್ಯ ಆಡಲಿದೆ. ಇಂದು ಮೂರು ದಿನಗಳ ಅಭ್ಯಾಸ ಪಂದ್ಯ ಆರಂಭವಾಗಬೇಕಿತ್ತಾದರು ಮಳೆಯಿಂದಾಗಿ ಟಾಸ್ ಪ್ರಕ್ರಿಯೆಯೂ ನಡೆದಿಲ್ಲ.

First published:September 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading