ಬೆಂಗಳೂರು (ಅ. 07): ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 203 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. 2ನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ಗೆ ಹರಿಣಗಳು ತಲೆಬಾಗಿದರು. ಈ ಮೂಲಕ ಮೂರು ಪಂದ್ಯಗಳ ಟಿಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
2ನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಶಮಿ 10.5 ಓವರ್ ಬೌಲಿಂಗ್ ಮಾಡಿ 2 ಮೇಡನ್ ಮತ್ತು 35 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದುಕೊಂಡರು. ಶಮಿ ಫೈವ್ ಸ್ಟಾರ್ನಲ್ಲಿ ನಾಲ್ಕು ಕ್ಲೀನ್ ಬೌಲ್ಡ್ ಎಂಬುದು ವಿಶೇಷ. ಅದರಲ್ಲು ತೆಂಬಾ ಬವುಮಾರನ್ನು ಬೌಲ್ಡ್ ಮಾಡಿದಾಗ ವಿಕೆಟ್ ಎರಡು ತುಂಡು ಆಗಿದ್ದು ಶಮಿ ಶರ ವೇಗದ ಬೌಲಿಂಗ್ಗೆ ಸಾಕ್ಷಿ ಆಯಿತು.
ಆಫ್ರಿಕಾ ನಾಯಕ ಫಾಪ್ ಡುಪ್ಲೆಸಿಸ್ರನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಬಿಡದ ಶಮಿ 13 ರನ್ ಗಳಿಸಿರುವಾಗ ಪೆವಿಲಿಯನ್ಗೆ ಅಟ್ಟಿದರು. ನಂತರ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಕ್ವಿಂಟನ್ ಡಿಕಾಕ್ರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಅಟ್ಟಿದರು.
IND vs SA: ಸೋಲಿಲ್ಲದ ಸರದಾರ; ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಗ್ರಸ್ಥಾನ ಭದ್ರ!
ಅರ್ಧಶತಕ ಬಾರಿಸಿ ಟೀಂ ಇಂಡಿಯಾಕ್ಕೆ ತಲೆನೋವಾಗಿದ್ದ ಡೇನ್ ಪಿಡ್ಟ್ರನ್ನೂ ಹೊರಗಟ್ಟಿದ್ದು ಶಮಿ. ಕೊನೆಯಲ್ಲಿ ರಬಾಡರನ್ನೂ ಔಟ್ ಮಾಡಿ 5 ವಿಕೆಟ್ ಕಿತ್ತು ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು.
ಇನ್ನು ಪಂದ್ಯ ಮುಗಿದ ಬಳಿಕ ಶಮಿ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, "ಶಮಿ ಅತ್ಯುತ್ತಮ ರಿವರ್ಸ್ಸ್ವಿಂಗ್ ಸ್ಪೆಷಲಿಸ್ಟ್. ಸ್ಲೋ ಪಿಚ್ನಲ್ಲಿ ಅವರ ಸ್ವಿಂಗ್ ಚೆನ್ನಾಗಿ ಕೆಲಸ ಮಾಡುತ್ತದೆ. ನಿಖರವಾಗಿ ರಿವರ್ಸ್ ಸ್ವಿಂಗ್ ಎಸೆಯುವ ಕಲೆ ಅವರಿಗೆ ಕರಗತವಾಗಿದೆ. ಅವರಿಗೆ ಶಕ್ತಿ ಬರಲು ಬಿರಿಯಾನಿ ಒಂದಿದ್ದರೆ ಸಾಕು, ಮತ್ತೇನು ಬೇಡ" ಎಂದು ರೋಹಿತ್ ತಮಾಷೆಯಾಗಿ ಹೇಳಿದ್ದಾರೆ.
ಸದ್ಯ ಮೂರು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಭಾರತ, ಮುಂದಿನ ಪಂದ್ಯವನ್ನು ಅ. 10 ರಿಂದ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಿದೆ. ಇದರ ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕೊಹ್ಲಿ ಪಡೆ ಅಗ್ರಸ್ಥಾನ ಭದ್ರ ಪಡಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ