ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯ ನಡೆಯುವುದು ಅನುಮಾನ!

ಧರ್ಮಶಾಲದಲ್ಲಿ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕೆ ವರುಣನ ತೊಂದರೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಇಂದುಕೂಡ ಬೆಳಗ್ಗಿನಿಂದಲೆ ತುಂತುರು ಮಳೆ ಆಗುತ್ತಿದೆ.

Vinay Bhat | news18-kannada
Updated:September 15, 2019, 3:30 PM IST
ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯ ನಡೆಯುವುದು ಅನುಮಾನ!
ಭಾರತ vs ದ. ಆಫ್ರಿಕಾ
  • Share this:
ಬೆಂಗಳೂರು (ಸೆ. 15): 2020ರ ಟಿ-20 ವಿಶ್ವಕಪ್​ಗಾಗಿ ಭಾರತ ಇಂದಿನಿಂದಲೇ ತಯಾರಿ ಆರಂಭಿಸುತ್ತಿದೆ. ಧರ್ಮಶಾಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ-20 ಪಂದ್ಯವನ್ನಾಡುವ ಮೂಲಕ ಮುಂಬರುವ ಮಾಹಾ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಆದರೆ, ಭಾರತ-ಆಫ್ರಿಕಾ ಮಧ್ಯೆ ಮೊದಲ ಟಿ-20 ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಧರ್ಮಶಾಲದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದು, ಇಂದಿನ ಪಂದ್ಯಕ್ಕೂ ಅಡಚಣೆ ಮಾಡಲಿದೆಯಂತೆ.

India vs South Africa, Dharamshala weather today: 1st T20I under dark clouds as it’s raining at the stadium
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ, ಧರ್ಮಶಾಲ


ಶನಿವಾರ ಗುಡುಗು-ಗಾಳಿ ಸಹಿತ ವಿಪರೀತ ಮಳೆ ಇದ್ದ ಕಾರಣ ಟೀಂ ಇಂಡಿಯಾ ಅಭ್ಯಾಸವನ್ನೂ ಸ್ಥಗಿತಗೊಳಿಸಬೇಕಾಗಿ ಬಂದಿತ್ತು.

ಧರ್ಮಶಾಲದಲ್ಲಿ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕೆ ವರುಣನ ತೊಂದರೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಇಂದುಕೂಡ ಬೆಳಗ್ಗಿನಿಂದಲೆ ತುಂತುರು ಮಳೆ ಆಗುತ್ತಿದೆ.

IND vs SA: ಶುಭಾರಂಭದ ನಿರೀಕ್ಷೆಯಲ್ಲಿ ಕೊಹ್ಲಿ ಪಡೆ; ಟೀಂ ಇಂಡಿಯಾ ಪರ ಯಾರೆಲ್ಲ ಕಣಕ್ಕೆ?

ಮೈದಾನದ ಸಿಬ್ಬಂದಿಗಳು ಮೈದಾನವನ್ನು ಸಜ್ಜುಗೊಳಿಸುವ ಹೊತ್ತಿಗೆ ಮತ್ತೆ ಮಳೆರಾಯ ಕಾಟ ನೀಡುತ್ತಿದ್ದಾನೆ. ಹೀಗಾಗಿ ಸಂಜೆ ವೇಳೆಗೆ ಮಳೆ ಮತ್ತಷ್ಟು ಜೋರಾದರೆ ಪಂದ್ಯ ನಡೆಸುವುದು ಅನುಮಾನ ಎಂದು ಹೇಳಲಾಗಿದೆ.ಭಾರತ 2ನೇ ಟಿ-20 ಪಂದ್ಯವನ್ನು ಸೆ. 18 ರಂದು ಮೊಹಾಲಿಯಲ್ಲಿ ಹಾಗೂ ಅಂತಿಮ ಪಂದ್ಯ ಸೆ. 22 ರಂದು ಬೆಂಗಳೂರಿನಲ್ಲಿ ಆಡಲಿದೆ.

ಮೊದಲ ಟೆಸ್ಟ್​​ ಅಕ್ಟೋಬರ್ 2 ರಿಂದ ವಿಶಾಖಪಟ್ಟಣಂ ನಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್​ ಅ. 10 ರಂದು ಪುಣೆಯಲ್ಲಿ ಹಾಗೂ ಮೂರನೇ ಟೆಸ್ಟ್​ ಅ. 19 ರಂದು ರಾಂಚಿಯಲ್ಲಿ ನಡೆಯಲಿದೆ.

 

First published:September 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ