IND vs SA: ಚಿನ್ನಸ್ವಾಮಿಯ ಹೈವೋಲ್ಟೇಜ್ ಪಂದ್ಯಕ್ಕೆ ವರುಣನ ಅಡ್ಡಿ?; ಬೆಂಗಳೂರಿನ ಹವಮಾನ ಇಲಾಖೆ ಏನನ್ನುತ್ತೆ?

ಈಗಾಗಲೇ ಪಂದ್ಯದ ಟಿಕೇಟ್ ಸೋಲ್ಡ್​​ಔಟ್​ ಆಗಿದ್ದು ಟೀಂ ಇಂಡಿಯಾ ಜೊತೆಗೆ ಆರ್​ಸಿಬಿ ಘೋಷಣೆ ಚಿನ್ನಸ್ವಾಮಿಯಲ್ಲಿ ಮೊಳಗುವುದು ಖಚಿತ. ಆದರೆ, ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವಂತೆ ಗೋಚರಿಸುತ್ತಿದೆ.

Vinay Bhat | news18-kannada
Updated:September 22, 2019, 3:06 PM IST
IND vs SA: ಚಿನ್ನಸ್ವಾಮಿಯ ಹೈವೋಲ್ಟೇಜ್ ಪಂದ್ಯಕ್ಕೆ ವರುಣನ ಅಡ್ಡಿ?; ಬೆಂಗಳೂರಿನ ಹವಮಾನ ಇಲಾಖೆ ಏನನ್ನುತ್ತೆ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಸೆ. 22): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ- ದಕ್ಷಿಣ ಆಫ್ರಿಕಾ ನಡುವೆ ಮೂರನೇ ಟಿ-20 ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಆದರೆ, ಪಂದ್ಯಕ್ಕೆ ವರುಣ ಅಡ್ಡಿ ಪಡಿಸುತ್ತಾನಾ?, ಬೆಂಗಳೂರಿನ ಹವಮಾನ ಏನನ್ನುತ್ತೆ?

ಧರ್ಮಶಾಲದಲ್ಲಿ ನಡೆಯಬೇಕಿದ್ದ ಮೊದಲ ಟಿ-20 ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿತ್ತು. ಮೊಹಾಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ 1-0 ಮುನ್ನಡೆ ಸಾಧಿಸಿತ್ತುಯ.

ಹೀಗಾಗಿ ಉಭಯ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದೆ. ಭಾರತ ಗೆದ್ದು ಸರಣಿ ವಶ ಪಡಿಸಿಕೊಳ್ಳುವ ಲೆಕ್ಕಚಾರದಲ್ಲಿದ್ದರೆ, ಇತ್ತ ಹರಿಣಗಳು ಗೆದ್ದು ಕನಿಷ್ಠ ಸರಣಿ ಸಮಬಲ ಮಾಡುವ ವಿಶ್ವಾಸದಲ್ಲಿದೆ.

ಈಗಾಗಲೇ ಪಂದ್ಯದ ಟಿಕೇಟ್ ಸೋಲ್ಡ್​​ಔಟ್​ ಆಗಿದ್ದು ಟೀಂ ಇಂಡಿಯಾ ಜೊತೆಗೆ ಆರ್​ಸಿಬಿ ಘೋಷಣೆ ಚಿನ್ನಸ್ವಾಮಿಯಲ್ಲಿ ಮೊಳಗುವುದು ಖಚಿತ. ಆದರೆ, ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವಂತೆ ಗೋಚರಿಸುತ್ತಿದೆ. ಭಾನುವಾರ ಬೆಂಗಳೂರಲ್ಲಿ ಗುಡುಗು ಸಹಿತ ತುಂತುರ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ.

Bengaluru Weather Forecast, India vs South Africa 3rd T20: Will rain affect the final?
ಬೆಂಗಳೂರಿನ ಹವಮಾನ


ಆದರು ಮಳೆ ಬಂತು ಎಂದಾದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯುನ್ನತ ಸಬ್ ಏರ್ ಸಿಸ್ಟಮ್ ತಂತ್ರಜ್ಷಾನವಿದ್ದು ಮೈದಾನದಲ್ಲಿ ಎಷ್ಟೇ ಮಳೆ ನೀರು ತುಂಬಿದ್ದರು ಕೆಲವೇ ನಿಮಿಷದಲ್ಲಿ ನೀರನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ. ಜಗತ್ತಿನ ಯಾವ ಕ್ರೀಡಾಂಗಣದಲ್ಲೂ ಇಲ್ಲದ ವ್ಯವಸ್ಥೆ ಚಿನ್ನಸ್ವಾಮಿಯಲ್ಲಿದ್ದು, ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯ ಪ್ರಾರಂಭಿಸಬಹುದಾಗಿದೆ.

ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
Loading...

First published:September 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...